Friday, 22 June 2012

ಕಥೆಯಲ್ಲಿನ ಖಳ ನಾಯಕಿ ಅವಳೇ .....!!















ಕಥೆಯಲ್ಲಿನ ಖಳ ನಾಯಕಿ ಅವಳೇ .....!! 
************************************************

ಅವಳೊಂದು ಕಾಲೇಜು ಕೋಮಲೆ
ಆ ದಿನಗಳಲ್ಲಿ ನನ್ನ ಗೆಳಯನ ನಲ್ಲೆ
ಇಪ್ಪತ್ತು ವರ್ಷಗಳ ನಂತರ ಸಿಕ್ಕಳಿಲ್ಲೇ
ಈಗ ಒಬ್ಬೊಂಟಿ ಆಕೆ ಈ ಲೋಕದಲ್ಲೇ

ಉಳಿದಿಲ್ಲ ಯಾರ ನಂಟು
ಊರಾಚೆ ಆಸ್ತಿ ಉಂಟು
ಋತು ಚಕ್ರದಲ್ಲಿನ ಗುಟ್ಟು
ಎಲ್ಲರಲ್ಲೂ ಭಯದ ಹುಟ್ಟು

ಏನೋ ವಿಚಿತ್ರ ಕಥೆಗಳ ಮಾತು
ಐದಾರು ಜನಗಳ ಕೊಲೆ ಆಗಿತ್ತು
ಒಂಟಿ ಮನೆಯಲ್ಲಿ ರಹಸ್ಯ ಅಡಗಿತ್ತು
ಓ ಇನಿಯ.... ಸದ್ದಿನ ಸುದ್ದಿಯಾಗಿತ್ತು

ಔಷಧ ಇಲ್ಲದ  ಮಾನಸಿಕ  ಖಾಯಿಲೆ
ಅಂತರಾತ್ಮದ ಅಪರೂಪದ ಲೀಲೆ
ಅಃ.. ಆಹಾಃ.. ಅಳುವು ನಗುವಿನಲ್ಲೇ .....!!
ಕಥೆಯಲ್ಲಿನ ಖಳ ನಾಯಕಿ ಅವಳೇ .....!!

|| ಪ್ರಶಾಂತ್ ಖಟಾವಕರ್ ||

http://www.suspensestory.blogspot.com/

No comments:

Post a Comment