Friday, 31 August 2012

ನಾನು & ಸೋನು (ಮುಂದುವರೆದ ಭಾಗ : 1 )


ನಾನು & ಸೋನು (ಮುಂದುವರೆದ ಭಾಗ : 1 )
********************************************


ನಾನು » ಆ ಕೆಲಸ ಯಾವುದು ಅಂತಾ ಹೇಳೋದಕ್ಕೂ ಮೊದಲು ನೀನ್ ಇವಾಗ ಧೈರ್ಯವಾಗಿರಬೇಕು .. ನೀನ್ ಹೆದರಿದರೆ ನಾನು ಏನೂ ಹೇಳೋದಿಲ್ಲ..

ಸೋನು » ಅಯ್ಯೋ ನೀನ್ ಹೇಳೋದನ್ನೇ ಹೆದರಿಸಿ ಹೇಳ್ತಿದ್ರೆ ನಂಗೆ ನಿಜವಾಗಲು ಹೆದರಿಕೆ ಆಗುತ್ತೆ , ಬೇಗ ಬೇಗ ಏನು ಅಂತಾ ಹೇಳ್ಬಿಡು , ಜಾಸ್ತಿ ಕಾಯೋದಿಕ್ಕೆ ಆಗೋಲ್ಲಾ..

ನಾನು » ಸರಿ ಹಾಗಿದ್ರೆ ಇಲ್ಲಿ ಕೇಳು ನೀನು ಯಾವಾಗಾದರೂ ಒಬ್ಬಳೇ ರಾತ್ರಿ ಹೊತ್ತು ಬಸ್ಸಲ್ಲಿ ಆರೇಳು ಗಂಟೆ ಪ್ರಯಾಣ ಮಾಡಿದ್ದೀಯ ?

ಸೋನು » ಇಲ್ಲಾ , ಆ ರೀತಿ ಎಲ್ಲೂ ಹೋಗಿಲ್ಲಾ , ಒಬ್ಬಳೇ ಪ್ರಯಾಣ ಮಾಡೋಕ್ಕೆ ಮನೆಲ್ಲಿ ಯಾರು ಬಿಡೋದಿಲ್ಲಾ , ಯಾರಾದರೂ ನನ್ ಜೊತೆ ಬರ್ತಾರೆ ..

ನಾನು » ಒಹ್ ಹಾಗ , ಸರಿ ಆದರೆ ಈಗ ನೀನ್ ಒಬ್ಬಳೇ ರಾತ್ರಿ ಪ್ರಯಾಣ ಮಾಡೋಕ್ಕೆ ರೆಡಿ ಇದ್ದೀಯಾ ?

ಸೋನು » ಮ್ ಮ್ ಯಾಕೆ ಒಬ್ಬಳೇ ? ಹು ಹು ಅಷ್ಟೊಂದು ಧೈರ್ಯ ನನಗ್ಯಾಕೋ ಬರ್ತಾ ಇಲ್ಲಾ .. ಏನ್ ಮಾಡೋದು ?

ನಾನು » ನೋಡು ಸರಿಯಾಗಿ ಯೋಚನೆ ಮಾಡಿ , ತೀರ್ಮಾನ ತಗೋ ... ಇದು ತುಂಬಾ ಮುಖ್ಯ , ಆಮೇಲೆ ಆ ಕೆಲಸ ಏನು ಅಂತಾ ತಿಳಿಸ್ತೀನಿ .. 

ಸೋನು » ಅಯ್ಯೋ ದೇವರೇ .. ಹೇಳು ಏನ್ ಕೆಲಸ ಅಂತಾ , ಆಮೇಲೆ ಅದುಕ್ಕಾದರೂ ಧೈರ್ಯ ಹುಟ್ಟುತ್ತೇನೋ ನನ್ನಲ್ಲಿ ..

ನಾನು » ನೋ ನೋ ಸೋನು ಪ್ರತಿಯೊಂದನ್ನೂ ಸ್ವಲ್ಪ ಸ್ವಲ್ಪ ಯೋಚನೆ ಮಾಡಿ ಮುಂದುವರೆಯಬೇಕು , ಇದು ತುಂಬಾ ಮುಖ್ಯವಾದ ಕೆಲಸ... ಹಾಗೆಲ್ಲಾ ಹಗುರವಾಗಿ ಯೋಚನೆ ಮಾಡಬಾರದು ..

ಸೋನು » ಹೋ ಹೋ ಹೌದಾ ಸರಿ .. ಅದು ಯಾವ ಕೆಲಸ ಆಮೇಲೆ ಹೇಳು , ಆದ್ರೆ ಒಬ್ಬಳೇ ಯಾಕೆ ಮಾಡಬೇಕು , ಮೊದಲು ಅದಕ್ಕೆ ಕಾರಣ ಏನು ಹೇಳು ..

ನಾನು » ನೀನ್ ಯಾಕೆ ಇವಾಗಲೇ ಎಲ್ಲಾ ಕೇಳ್ತೀಯಾ . ಅದು ನಿನಗೆ ಒಳ್ಳೆಯದಲ್ಲಾ .. ನೀನ್ ಜಾಸ್ತಿ ಯೋಚನೆ ಮಾಡೋದೇ ನಿನ್ನ ಹೆದರಿಕೆಗೆ ಕಾರಣ .. 

ಸೋನು » ಮತ್ತಿನ್ನೇನು ನೀನ್ ಮಾತೆಲ್ಲಾ ಹಾಗೆ ಇದೆ . ನೀನ್ ಮಾತಲ್ಲೇ ತುಂಬಾ ಹೆದರಿಸ್ತೀಯ .. ನಾನೇನ್ ಮಾಡ್ಲಿ .. ಅದಕ್ಕೆ ಎಲ್ಲಾ ಡೀಟೇಲ್ ಕೇಳ್ತಾ ಇದ್ದೀನಿ ..

ನಾನು » ಓ ಹೋ ಸೋನು .. ನೀನ್ ತುಂಬಾ ಇಷ್ಟಾ ಕಣೆ .. ನಿನಗೇನೂ ಕಷ್ಟ ಕೊಡಬೇಕು ಅಂತಾ ನನ್ನ ಮನಸ್ಸಲ್ಲಿ ಇಲ್ಲಾ.. ಅದಕ್ಕೆ ಹೇಳ್ತಾ ಇರೋದು .. ನೀನು ಸುಮ್ಮನೆ ಹೆದರಬೇಡ .. ಈ ಕೆಲಸ ನಿನ್ನಿಂದ ಸುಲಭವಾಗಿ ಆಗುತ್ತೆ .. ನನ್ ಮಾತೆಲ್ಲಾ ನಿನ್ ಒಳ್ಳೇದಕ್ಕೆ ಹೊರತು , ನಿನ್ನಾ ಹೆದರಿಸೋಕ್ಕೆ ಅಲ್ಲಾ...

ಸೋನು » ಮ್ ಮ್ .. ಸರಿ ಸರಿ .. ಓಕೆ ಓಕೆ .. ಏನೋ ಒಳಗೊಳಗೇ ಇವಾಗ ಚೂರು ಚೂರು ಧೈರ್ಯ ಬರ್ತಾ ಇದೆ .. ಹೀಗೆ ಸ್ವಲ್ಪ ಹೊತ್ತು ನನ್ ಜೊತೆ ಮಾತಾಡು .. ಆ ಕೆಲಸ ಏನು ಅಂತಾ ಆಮೇಲೆ ಹೇಳು , ನಾನ್ ಈಗ ನಿನ್ ಮಾತುಗಳನ್ನ ಕೇಳ್ತಾ ಇದ್ರೆ ತುಂಬಾ ಧೈರ್ಯ ಬರ್ತಾ ಇದೆ .. 

(ಮುಂದುವರೆಯುವುದು .....)

 (ಇದು ಮಾತುಗಳ ಕಥೆ .. ಎಲ್ಲವನ್ನೂ ಒಳಗೊಂಡ ಒಂದು ಪ್ರೇಮಕಥೆ.. ಸೋನು ಯಾರು ಅಂತಾ ಮಾತ್ರ ಕೇಳಬೇಡಿ .. ಇದು ಕಾಲ್ಪನಿಕ ಕಥೆ)


Thursday, 30 August 2012

ನಾನು & ಸೋನು

ನಾನು & ಸೋನು

***************ನಾನು » ಎ ಸೋನು ಏನ್ ಮಾಡ್ತಾ ಇದ್ದೀಯಾ ?

ಸೋನು » ಏನು ಇಲ್ಲಾ ಸುಮ್ಮನೆ ಕೂತಿದ್ದೆ , ಈಗ ನಿನ್ ಜೊತೆ ಮಾತಾಡ್ತಾ ಇದ್ದೀನಿ ..

ನಾನು » ಹೋ ಹೌದಾ ಹಾಗಾದ್ರೆ ಒಂದು ಕೆಲಸ ಕೊಡ್ತೀನಿ ಮಾಡ್ತಿಯಾ ?

ಸೋನು » ಮೊದಲು ಅದೇನು ಕೆಲಸ ಅಂತಾ ಸರಿಯಾಗಿ ಗೊತ್ತಾಗಬೇಕು , ಆಮೇಲೆ ಅದುನ್ನಾ ಮಾಡ್ತೀನೋ , ಬಿಡ್ತೀನೋ ಅಂತಾ ಹೇಳ್ತೀನಿ ..

ನಾನು » ಕೆಲಸ ತುಂಬಾ ಸುಲಭ ಇದ್ರೆ ಮಾಡ್ತೀಯಾ ?

ಸೋನು » ಮ್ ಓಕೆ , ಯೋಚನೆ ಮಾಡ್ತೀನಿ , ಸ್ವಲ್ಪ ಟೈಮ್ ಕೊಡು ..

ನಾನು » ಎಷ್ಟು ಟೈಮ್ ಬೇಕು ನಿಂಗೆ ಯೋಚನೆ ಮಾಡೋಕೆ ?

ಸೋನು » ಮ್ ಮ್ .. ಟೈಮ್ ಏನೂ ಬೇಡ , ಅದೇನು ಕೆಲಸ ಅಂತಾ ಹೇಳು , ಓಕೆ ನಾನ್ ಮಾಡ್ತೀನಿ ..

ನಾನು » ಆಮೇಲೆ ಅದು ಕಷ್ಟ ಅಂತಾ ನೀನ್ ಹೆದರಿ , ಒಬ್ಬಳೇ ಮಾಡೋಕ್ಕೆ ಆಗೋದಿಲ್ಲಾ ಅಂತಂದ್ರೆ ನಾನೇನ್ ಮಾಡ್ಲಿ ?

ಸೋನು » ಮೊದಲು ನೀನು ಯಾವ ಕೆಲಸ ಅಂತಾ ಹೇಳು , ನಿಂಗೊಸ್ಕರ ಯಾವ್ ಕೆಲಸ ಆದರೂ ಮಾಡ್ತೀನಿ .. 

ನಾನು » ನೀನು ಯಾಕೆ ಹೀಗೆ ಇದ್ದಕ್ಕಿದ್ದ ಹಾಗೆ ನಿರ್ಧಾರ ಮಾಡಿದ್ದು , ಈ ರೀತಿಯ ಆಲೋಚನೆ ಮಾಡಲು ಕಾರಣ ಏನು ?

ಸೋನು » ಅದೆಲ್ಲಾ ಆಮೇಲೆ ವಿವರವಾಗಿ ತಿಳಿಸುವೆ .. ಮೊದಲು ಆ ಕೆಲಸ ಯಾವುದು ಅಂತ ಗೊತ್ತಾಗಬೇಕು .. !!

(ಮುಂದುವರೆಯುವುದು ...... )

 (ಇದು ಮಾತುಗಳ ಕಥೆ .. ಎಲ್ಲವನ್ನೂ ಒಳಗೊಂಡ ಒಂದು ಪ್ರೇಮಕಥೆ.. ಸೋನು ಯಾರು ಅಂತಾ ಮಾತ್ರ ಕೇಳಬೇಡಿ .. ಇದು ಕಾಲ್ಪನಿಕ ಕಥೆ)

Wednesday, 22 August 2012

ಮೊದಲ ಹೆಜ್ಜೆ .. !!


ಶೃಂಗಾರ ಶೃಂಗಾರ
ಬಲು ಚೆಂದ ನಿನ್ ವಯ್ಯಾರ
ಚಂದಿರ ಚಂದಿರ
ಮೊಗದಲ್ಲಿ ಕಿರುನಗೆ ಸುಂದರ..

ಪದಗಳ ಹಾಡುತ್ತ
ನೀ ಬಂದೆ ಮಿಂಚುತ್ತ
ನೋಡುತ್ತ ನೋಡುತ್ತ ನನ್ನತ್ತ
ನೀ ಬಂದೆ ನಾಚುತ್ತಾ.....

ಸಂಗೀತ ಸಂಗೀತ
ಕೇಳಿಲ್ಲಿ  ಶುರುವಾಯ್ತು
ಡಬ್ ಡಬ್ ಎದೆ ಬಡಿತ
ಹೃದಯ ಹೃದಯ ಸೇರುತ .. :)

ಮೊದಲ ಪ್ರೀತಿಯ ಮೊದಲ ಹೆಜ್ಜೆ ಹಾಕುತ .. !!

|| ಪ್ರಶಾಂತ್ ಖಟಾವಕರ್ ||


Tuesday, 21 August 2012

ಮೆಲ್ಲಮೆಲ್ಲನೆ ಹೆಜ್ಜೆ ಹಾಕುತ .. !!


ಮೆಲ್ಲಮೆಲ್ಲನೆ ನೀ ಬಾರೆ
ಜಲ್ಲಜಲ್ಲನೆ ಹೆಜ್ಜೆ ಹಾಕುತ .. !!

ಗಲ್ಲದ ಮೇಲೊಂದು ಮುತ್ತನಿಟ್ಟು
ಗಲ್ಲಗಲ್ಲನೆ ಬಳೆಗಳ ಸದ್ದು ಕೊಟ್ಟು
ಪ್ರೀತಿಯ ಗೀತೆಯ ತುಟಿಯ ಮೇಲಿಟ್ಟು
ಹೇಳು ನೀ ಎದೆಯಾಳದ ಪ್ರೇಮದ ಗುಟ್ಟು

ಮೆಲ್ಲಮೆಲ್ಲನೆ ನೀ ಬಾರೆ
ಜಲ್ಲಜಲ್ಲನೆ ಹೆಜ್ಜೆ ಹಾಕುತ .. !!

ನೋಡಿದೊಡನೆ ನಾ ನಾಚಿ ಹೋದೆ
ನಿನ್ನ ಸೌಂದರ್ಯಕೆ ನಾ ಮೂಕನಾದೆ
ನನ್ನ ಹೃದಯವು ಹಾಡೊಂದ ಹಾಡಿದೆ
ಮೊದಲ ನೋಟದ  ಪ್ರೇಮ ಎನ್ನುತಿದೆ

ಮೆಲ್ಲಮೆಲ್ಲನೆ ನೀ ಬಾರೆ
ಜಲ್ಲಜಲ್ಲನೆ ಹೆಜ್ಜೆ ಹಾಕುತ .. !!

ನಾನೇ ನೀನು ನೀನೇ ನಾನು ನಾನು ನೀನು
ಸೇರಿ ಸೇರಿ ಎರಡು ಜೀವ ಒಂದೇ ಎಂದು
ಯಾವುದೋ ಶಕ್ತಿಯು ಹೇಳಿದೆ ಇಂದು
ಪ್ರೇಮದ ಆರಂಭ ಮಾಡೋಣ ಬಾ ನಾನು ನೀನು .. !!

ಮೆಲ್ಲಮೆಲ್ಲನೆ ನೀ ಬಾರೆ
ಜಲ್ಲಜಲ್ಲನೆ ಹೆಜ್ಜೆ ಹಾಕುತ .. !!

|| ಪ್ರಶಾಂತ್ ಖಟಾವಕರ್ ||Monday, 20 August 2012

ಮಾತೊಂದೇ ನಾನವನಲ್ಲ


ಮಾತೊಂದೇ ನಾನವನಲ್ಲ
****************************
  
ಮಾಡದಾ ತಪ್ಪು ತಪ್ಪಾಗಿ
ಬಂದೊದಗಿತ್ತು ಆಪತ್ತು
ಹೆಸರುಗಳೇ ಒಂದೇ ಆಗಿ
ಅದಲು ಬದಲು ಅಲ್ಲಿತ್ತು
 
ಸತ್ಯದ ಪರೀಕ್ಷೆಯ ಕಾಲ
ಬೇಕಾದ್ದು ಮಾಡುವ ಅನುಕೂಲ
ಎಲ್ಲವೂ ರುಚಿಸುವ ಸವಿ ಬೆಲ್ಲ
ಮಾತೊಂದೇ ನಾನವನಲ್ಲ ನಾನವನಲ್ಲ
 
ಬದುಕಿನ ಓಟದಲ್ಲಿ ಬದಲಾವಣೆ
ಕೆಂಪಾಗಿ ಹೊಳೆಯುವ ನನ್ನ ಹಣೆ
ಕೋಪದ ಛಾಯೆ ಕಾಣದ ಮಾಯೆ
ಎಲ್ಲದಕ್ಕೂ ಕೊನೆಯೊಂದೇ.. ನಾನವನಲ್ಲ .. !! .. :)
  
|| ಪ್ರಶಾಂತ್ ಖಟಾವಕರ್ ||
 
( ಸೂಚನೆ : ಅರ್ಥ ಮಾಡಿಕೊಂಡವರೇ ಬುದ್ದಿವಂತರು..
ಸುಮ್ಮನೆ ಸುಮ್ಮನೆ ನಾನವನಲ್ಲ ಎಂದು ಪ್ರತಿಕ್ರಿಯಿಸಬೇಡಿ..
ಇದು ಸಿನಿಮಾಕ್ಕೆ ಹೋಲಿಕೆಯಲ್ಲ..
ಇದು ಜೀವನದ ಒಂದು ಸತ್ಯದ ಮೇಲೆ  ಆಧಾರಿತ ಕವನ..)Thursday, 16 August 2012

ಗೆಳೆತನ ಎನ್ನುವುದು "ಚಿವಿಂಗಂ" (chewing gum)ಗೆಳೆತನ ಎನ್ನುವುದು "ಚಿವಿಂಗಂ" (chewing gum)
************************************************

ಗೆಳೆತನವು
ಅಂಟು ಜಗಿದಂತೆ
ಮೊದಮೊದಲು
ಸಿಹಿಯ ಅನುಭವ
ಮುಂದೆ ಮುಂದೆ
ಸಿಹಿಯೇ ಇಲ್ಲದಂಟು
ಸ್ವಾದವಿಲ್ಲದ ಸ್ನೇಹದ ನಂಟು
ದೂರವಾದರದರಿಂದ
ಸಿಹಿ ನೆನಪು ಕ್ಷಣಕಾಲ ಮಾತ್ರ

ಕಾಲದ ಓಟದಲ್ಲಿ
ಬದಲಾವಣೆ ನೋಟದಲ್ಲಿ
ಬೆಲೆಯಿಲ್ಲ ಉತ್ತಮರಿಗಿಲ್ಲಿ
ಅವರವರ ಉದ್ಯೋಗಗಳು
ಅಡ್ಡವಾಗಿದೆ ಹಳೇ ಗೆಳೆತನಕ್ಕೆ
ಬಿಟ್ಟು ಹೋದ ಸ್ನೇಹದ 
ಸವಿ ನೆನಪು ಕ್ಷಣಕಾಲ ಮಾತ್ರ

ರುಚಿಯು , ಅಭಿರುಚಿಯು
ಅದಲು ಬದಲಾಗಲು
ಗೆಳತನವು
ಧರೆಗುರಿಳಿದ ಮರದಂತೆ
ಅದು ಮುಂದೆಂದೂ ಬೆಳೆಯದು
ಅದರುಪಯೋಗದ ಬದಲಾವಣೆಯಲ್ಲಿ
ಮರದ ನೆರಳ ನೆನಪು , ನೆನಪಷ್ಟೇ
ಮರದ ಹೂವು - ಹಣ್ಣುಗಳ
ಗಮದ ನೆನಪು ಕ್ಷಣಕಾಲ ಮಾತ್ರ

ಅಂಟು ಜಗಿದಂತೆ
ಈ ಸ್ನೇಹದ ನಂಟು
ಕೊನೆಗಾಲದವರೆಗೆನ್ನುವುದು
ನೆಪಮಾತ್ರ ಮಾತಿಗುಂಟು
ಭಾವನೆಗಳ ಭಾರವನ್ನು ಬಿಟ್ಟು
ಬದುಕುವ ಬದಲಾವಣೆ ಯುಗದಲ್ಲಿ
ಆತ್ಮೀಯ ಸ್ನೇಹದ ಭಾಗ್ಯ ಯಾರಿಗುಂಟು

ಅವರವರ ಬದುಕಿನ ಬೆಳಗಿಗಾಗಿ
ಇನ್ನೊಬ್ಬರ ಸ್ನೇಹಕ್ಕೆ ಬೆಂಕಿ ಹಚ್ಚಿ
ಉರಿದು ಬೂದಿಯಾದ ಮೇಲೆ
ಮತ್ತೊಬ್ಬರ ಸ್ನೇಹಕ್ಕೆ ಬೆಂಕಿ ಹಾಕಲು
ಹೊಂಚು ಹಾಕುವ ಸ್ವಾರ್ಥ ಜನಗಳ
ಈ ಕಲಿಯುಗದಲ್ಲಿ
ಸ್ನೇಹ ನೆನಪು ಮಾತ್ರ
ಗೆಳತನವು ಅಂಟು ಜಗಿದಂತೆ ...... !!

|| ಪ್ರಶಾಂತ್ ಖಟಾವಕರ್ ||

Wednesday, 15 August 2012

ಪ್ರೇಮಗೀತೆಯ ಹೊಸ ಡೀವೀಡೀ .. :)


ಏ ಬೀ ಸೀ ಡೀ .. ಏ ಬೀ ಸೀ ಡೀ ..
ಪ್ರೇಮಗೀತೆಯ ಹೊಸ ಡೀವೀಡೀ ... 
ಏ ಬೀ ಸೀ ಡೀ .. ಏ ಬೀ ಸೀ ಡೀ ..
ಪ್ರೇಮಗೀತೆಯ ಹೊಸ ಡೀವೀಡೀ ... 

"ಅ ಆ ಇ ಈ" ಕಲಿಯೋ ಆಟ
ಅವಳ ಜೊತೆಯಲ್ಲಿ
ಚಿಕ್ಕ ವಯಸ್ಸಲ್ಲಿ
ನಮ್ ಹಳ್ಳೀ  ಸ್ಕೂಲ್`ನಲ್ಲಿ

"ಐ ಲವ್ ಯು" ಅನ್ನೋ ಪಾಠ
ಅವಳ ಜೊತೆಯಲ್ಲಿ
ಹರೆಯದ ವಯಸ್ಸಲ್ಲಿ
ನಮ್ಮೂರ ಕಾಲೇಜ್`ಅಲ್ಲಿ

ಏ ಬೀ ಸೀ ಡೀ .. ಏ ಬೀ ಸೀ ಡೀ ..
ಪ್ರೇಮಗೀತೆಯ ಹೊಸ ಡೀವೀಡೀ ... 

ಲೆಕ್ಕದಲ್ಲಿ ಬಲು ಜೋರು
ಹಿಸ್ಟರಿ ಇಷ್ಟ ಚೂರು ಪಾರು
ಲೆಕ್ಕದಲ್ಲಿ ಬಲು ಜೋರು
ಹಿಸ್ಟರಿ ಇಷ್ಟ ಚೂರು ಪಾರು

ಹೃದಯ ಹೃದಯ ಕೂಡಿಸುತ
ಪ್ರೇಮದ ಹೊಸ ಲೆಕ್ಕವು
ಮನಸ್ಸು ಮನಸ್ಸು ಸೇರಿಸುತ
ಹಿಸ್ಟರಿಗೊಂದು ಪ್ರೇಮ ಕಥೆಯು

ಏ ಬೀ ಸೀ ಡೀ .. ಏ ಬೀ ಸೀ ಡೀ ..
ಪ್ರೇಮಗೀತೆಯ ಹೊಸ ಡೀವೀಡೀ ... 

ಇಂಗ್ಲೀಷ್ ಅಲ್ಲಿ ಇತ್ತು
ರೋಮಿಯೋ ಜೂಲಿಯಟ್
ಆಹಾ ಹಿಂದೀಯಲ್ಲು ಬಂತು
ಲೈಲಾ ಮಜುನು ಪ್ರೀತಿ

ಏ ಬೀ ಸೀ ಡೀ .. ಏ ಬೀ ಸೀ ಡೀ ..
ಪ್ರೇಮಗೀತೆಯ ಹೊಸ ಡೀವೀಡೀ ... 

ಭೌತಶಾಸ್ತ್ರ , ರಸಾಯನಸಾಸ್ತ್ರ
ಜೀವಶಾಸ್ತ್ರ , ಅರ್ಥಸಾಸ್ತ್ರ
ಜೊತೆ ಜೊತೆಯಲ್ಲೇ
ಹೊಸ ಬಗೆಯ ಪ್ರೇಮಶಾಸ್ತ್ರ

"ಐ ಲವ್ ಯು" ಅನ್ನೋದೇ
ಹುಡುಗ ಹುಡುಗಿ ಜಪಿಸೋ ಮಂತ್ರ
ಪ್ರೀತಿಯ ಹುಡುಕಾಟದಲ್ಲಿ
ಪ್ರೇಮ ಪತ್ರವೇ ಒಳ್ಳೆಯ ಅಸ್ತ್ರ

ಏ ಬೀ ಸೀ ಡೀ .. ಏ ಬೀ ಸೀ ಡೀ ..
ಪ್ರೇಮಗೀತೆಯ ಹೊಸ ಡೀವೀಡೀ ... 
ಏ ಬೀ ಸೀ ಡೀ .. ಏ ಬೀ ಸೀ ಡೀ ..
ಪ್ರೇಮಗೀತೆಯ ಹೊಸ ಡೀವೀಡೀ ... 

"ಅ ಆ ಇ ಈ" ಕಲಿಯೋ ಆಟ
ಅವಳ ಜೊತೆಯಲ್ಲಿ
ಚಿಕ್ಕ ವಯಸ್ಸಲ್ಲಿ
ನಮ್ ಹಳ್ಳೀ  ಸ್ಕೂಲ್`ನಲ್ಲಿ

"ಐ ಲವ್ ಯು" ಅನ್ನೋ ಪಾಠ
ಅವಳ ಜೊತೆಯಲ್ಲಿ
ಹರೆಯದ ವಯಸ್ಸಲ್ಲಿ
ನಮ್ಮೂರ ಕಾಲೇಜ್`ಅಲ್ಲಿ

ಏ ಬೀ ಸೀ ಡೀ .. ಏ ಬೀ ಸೀ ಡೀ ..
ಪ್ರೇಮಗೀತೆಯ ಹೊಸ ಡೀವೀಡೀ ... 
ಏ ಬೀ ಸೀ ಡೀ .. ಏ ಬೀ ಸೀ ಡೀ ..
ಪ್ರೇಮಗೀತೆಯ ಹೊಸ ಡೀವೀಡೀ ... 
ಏ ಬೀ ಸೀ ಡೀ .. ಏ ಬೀ ಸೀ ಡೀ ..
ಪ್ರೇಮಗೀತೆಯ ಹೊಸ ಡೀವೀಡೀ ... 
ಏ ಬೀ ಸೀ ಡೀ .. ಏ ಬೀ ಸೀ ಡೀ ..
ಪ್ರೇಮಗೀತೆಯ ಹೊಸ ಡೀವೀಡೀ ... 

|| ಪ್ರಶಾಂತ್ ಖಟಾವಕರ್ ||

Sunday, 12 August 2012

ಹೋ ಪ್ರೇಮ .. ಹೋ ಪ್ರೇಮ ..ನಾಯಕ »
▬▬▬▬ ಹೋ ಪ್ರೇಮ .. ಹೋ ಪ್ರೇಮ ..
▬▬▬▬ ಏನಿದು ಡ್ರಾಮ ..
▬▬▬▬ ಸ ರಿ ಗ ಮ .. ಸ ರಿ ಗ ಮ ..
▬▬▬▬ ಸಂಗೀತವಮ್ಮ .. !!

ಗೆಳಯ »
▬▬▬▬ ಮೊಂದೇನೋ ಈ ಪ್ರೀತಿ ಕಥೆಯು
▬▬▬▬ ಯಾರೀ ಕವಿತೆಯ ಸ್ಪೂರ್ತಿಯು .. !!

ನಾಯಕ »
▬▬▬▬ ನನ್ನಾ ಕನಸಿನ ಚೆಲುವೆ ಅವಳು
▬▬▬▬ ನನ್ನಾ ಕಲ್ಪನೆಯ ದೇವತೆ ಅವಳು
▬▬▬▬ ನನ್ನಾ ಹೃದಯದ ಡವ ಡವ ಅವಳು
▬▬▬▬ ನನ್ನಾ ಪ್ರೇಮಲೋಕದಲ್ಲಿ ನಾಯಕಿ ಅವಳು .. !!

ಗೆಳಯ »
▬▬▬▬ ಆಹಾ .. ಓಹೋ .. ಯಾರವಳು ಯಾರವಳು
▬▬▬▬ ನಿನ್ನ ನಾಯಕಿ ಹೇಗಿರುವಳು ಹೇಳು .. !!

ನಾಯಕ »
▬▬▬▬ ಅವಳು ನೋಡಲು ಮುದ್ದಾದ ಹೂವು
▬▬▬▬ ಆ ಹೂವನು ಕಂಡ ದುಂಬಿ , ಈ ಮನವು
▬▬▬▬ ಮಧುರ ಅನುಭವ ಅವಳೆದುರು ಹೋಗಲು
▬▬▬▬ ಸವಿ ಸವಿ ಸಿಹಿಯ ಸಮಯ , ಜೊತೆ ಸೇರಲು .. !!

ಗೆಳಯ »
▬▬▬▬ ಅರ್ರೇ ಹೋ ಗೆಳಯ
▬▬▬▬ ನೆನೆದು ಹೋದೆ ನೀ ಪ್ರೀತಿಯ ಮಳೆಯಲ್ಲಿ
▬▬▬▬ ಅರ್ರೇ ಹೋ ಗೆಳಯ
▬▬▬▬ ಸೆರೆಯಾದೆ ನೀ ಅವಳ ಸೌಂದರ್ಯದ ಬಲೆಯಲ್ಲಿ .. !!

ನಾಯಕ »
▬▬▬▬ ಹೋ ಪ್ರೇಮ .. ಹೋ ಪ್ರೇಮ ..
▬▬▬▬ ಏನಿದು ಡ್ರಾಮ ..
▬▬▬▬ ಸ ರಿ ಗ ಮ .. ಸ ರಿ ಗ ಮ ..
▬▬▬▬ ಸಂಗೀತವಮ್ಮ .. !!

|| ಪ್ರಶಾಂತ್ ಖಟಾವಕರ್ ||

Friday, 10 August 2012

ಈಗ ನನ್ನ ಹೆಸರು ಕೆಟ್ಟಿದೆ .. !!ಈಗ ನನ್ನ ಹೆಸರು ಕೆಟ್ಟಿದೆ
 *************************

ತಪ್ಪಲ್ಲದ ತಪ್ಪುಗಳು
ಯಾರದ್ದೋ ಸ್ನೇಹಕ್ಕೆ
ಬಲಿಪಶು ನಾನಿಲ್ಲಿ
ಈಗ ನನ್ನ ಹೆಸರು ಕೆಟ್ಟಿದೆ

ಮಾತಿಲ್ಲದ ಮೌನದೊಳು
ಸಮಯದ ಪ್ರಭಾವಕ್ಕೆ
ಬಲಿಪಶು ನಾನಿಲ್ಲಿ
ಈಗ ನನ್ನ ಹೆಸರು ಕೆಟ್ಟಿದೆ

ಅವರಿವರ ಮಾತಿನೊಳು
ಆಪತ್ತು ವ್ಯಕ್ತಿತ್ವಕ್ಕೆ
ಅವರಿವರ ಗುಟ್ಟುಗಳ ನಡುವೆ
ನನ್ನ ಹೆಸರೇ ಕೆಟ್ಟಿದೆ

ಬೇಡವಾದ ಸುದ್ದಿಗಳು
ನೂಕುತ್ತಿವೆ ನರಕಕ್ಕೆ
ಅವರಿವರ ಕಲ್ಪನೆಗಳ ನಡುವೆ
ನನ್ನ ಹೆಸರೇ ಕೆಟ್ಟಿದೆ

ಕೆಟ್ಟ ಹೆಸರು 
ಮತ್ತಷ್ಟು ಕೆಡುವ ಮೊದಲೇ
ಎಲ್ಲವನ್ನು ಬಿಟ್ಟು
ನಾನಿಲ್ಲಿಂದ ದೂರ ಸಾಗಲೇ

ಪ್ರಪಂಚವನ್ನು ಅರಿಯದ
ಮುಗ್ದ ಮನದ ನೋವಿದು
ಮೌನವನ್ನು ಮುರಿದ
     ಮನದಾಳದ ಮಾತಿದು .. !!

     ಈಗ ನನ್ನ ಹೆಸರು ಕೆಟ್ಟಿದೆ .. !!

     || ಪ್ರಶಾಂತ್ ಖಟಾವಕರ್ ||

Thursday, 9 August 2012

ದೆವ್ವದ ಮನೆಯಲ್ಲಿ ದುಡ್ಡು .... ಮುಂದುವರೆದ ಭಾಗ [1] .......

 ಅವಳ ಆ ನಗುವನ್ನು ಕೇಳಿ , ಅದೇನೋ ವಿಚಿತ್ರ ಭಯವು ನನ್ನನ್ನು ಸ್ವಲ್ಪ ಹೊತ್ತು ಮೌನವಾಗಿ ನಿಲ್ಲುವಂತೆ ಮಾಡಿತ್ತು .. ಹೆದರಿ ಓಡುವ ಭಯದ ಕ್ಷಣಗಳ...

>>>>>>>>> visit blog : http://www.suspensestory.blogspot.com/

>>>>>>>>> || ಪ್ರಶಾಂತ್ ಖಟಾವಕರ್ ||: ದೆವ್ವದ ಮನೆಯಲ್ಲಿ ದುಡ್ಡು .... ಮುಂದುವರೆದ ಭಾಗ [1] .......:            

Saturday, 4 August 2012

ಹೃದಯ ಕಳ್ಳಿ (ಯಾರವಳು)

ಹೃದಯ ಕಳ್ಳಿ (ಯಾರವಳು)
***********************************

ಅವಳೇಕೆ ಕದ್ದಳೆನ್ನ ಹೃದಯವ
ಬಲ್ಲವರಾರೋ ಈ ನಿಜವ .. ?
ಸದ್ದಿಲ್ಲವೀಗ ನನ್ನೆದೆಯೊಳು ಡವ ಡವ .. !!
ಪ್ರೀತಿಯ ವಿಸ್ಮಯವೇನಿದು ಶಿವ ಶಿವ .. ?

ಜೀವ ಜೀವಗಳ ಜೀವನದಾಟ
ಪ್ರೀತಿಯೊಳು ಕದ್ದವಳು ಅವಳೇ ..
ಆದರೂ ಅವಳಲ್ಲ ಕಳ್ಳಿ .. !!
ಕಳುವಾಗಿದೆ ಬರಿ ಮಾತಿನಲ್ಲಿ

ಆ ಹೃದಯ ನನ್ನಲ್ಲೇ ಸದ್ದು ಮಾಡಿ
ನಿಜವ ನುಡಿಯುತ ಡವ ಡವ .. !!
ಈ ಪ್ರೀತಿ ಹೀಗೇಕೋ ಶಿವ ಶಿವ .. ?

ಕದ್ದೆನೆಂದು ಹೇಳಿದ ಕಳ್ಳಿ ಕನಸಲ್ಲಿ
ಅವಳ ಛಾಯೆಯು ನನ್ನ ಮನಸಲ್ಲಿ .. :)

|| ಪ್ರಶಾಂತ್ ಖಟಾವಕರ್ ||

ಪ್ರಶಾಂತ (ಮೌನ)


ಪ್ರಶಾಂತ (ಮೌನ)
*************************

ಲಲ್ಲಲಾಲ ಲಲ್ಲಲಾಲ ಲಲಲಲ
ಲಾಲಲಾಲ ಲಾಲಲಾಲ ಲಲಲಲ
ಆಹ ಆಹ ಆಹ ಅಹ ಆಹಹಾ
ಓಹೊ ಓಹೊ ಓಹೊ ಓಹೊ ಓಹೊಹೋ

ಮೌನಕ್ಕೊಂದು ಉದಾಹರಣೆ
ಅದುವೇ ನನ್ನ ಹೆಸರು
ಮಾತಿಗೊಂದು ಉದಾಹರಣೆ
ಅದುವೇ ನನ್ನ ಉಸಿರು

ಲಲ್ಲಲಾಲ ಲಲ್ಲಲಾಲ ಲಲಲಲ
ಲಾಲಲಾಲ ಲಾಲಲಾಲ ಲಲಲಲ

ಹೃದಯ ಗೀತೆ ಡವ ಡವ
ಸಂಗೀತವಿಲ್ಲಿ ನನ್ನ ಜೀವ
ಮನದ ತುಂಬ ಪ್ರೀತಿ ಭಾವ
ಈ ಲೋಕವನ್ನೇ ಗೆಲ್ಲುವ

ಆಹ ಆಹ ಆಹ ಅಹ ಆಹಹಾ
ಓಹೊ ಓಹೊ ಓಹೊ ಓಹೊ ಓಹೊಹೋ

ಬದುಕು ಒಂದು ನಾಟಕರಂಗ
ಬೇಕು ಪ್ರೀತಿ ಸ್ನೇಹದ ಸಂಗ
ಮೌನದ ಮಾತಿದು, ಈಗ
ನುಡಿದಿದೆ ನನ್ನ ಅಂತರಂಗ

ಲಲ್ಲಲಾಲ ಲಲ್ಲಲಾಲ ಲಲಲಲ
ಲಾಲಲಾಲ ಲಾಲಲಾಲ ಲಲಲಲ
ಆಹ ಆಹ ಆಹ ಅಹ ಆಹಹಾ
ಓಹೊ ಓಹೊ ಓಹೊ ಓಹೊ ಓಹೊಹೋ

|| ಪ್ರಶಾಂತ್ ಖಟಾವಕರ್ ||


Wednesday, 1 August 2012

ಸುಮ್ಮನೆ ಸುಮ್ಮನೆ ಆ ದಿನ
ಸುಮ್ಮನೆ ಸುಮ್ಮನೆ ಆ ದಿನ
ನಿನ್ನ ನೋಡಿದ್ದೇ ತಪ್ಪಾಯ್ತು
ಮೆಲ್ಲನೆ ಮೆಲ್ಲನೆ ಆ ಕ್ಷಣ
ಹಿಂದೆ ಬಂದದ್ದೇ ತಪ್ಪಾಯ್ತು

ಶಾಪಿಂಗ್ ಅಂತಾ ನೀನು
ನಿನ್ ಹಿಂದೆ ಸುತ್ತಿ ನಾನು
ಫ್ಯಾಶನ್ ಅಂತಾ ನೀನು
ನಿನ್ ಇಷ್ಟ ಕೇಳಿ ನಾನು

ನಿನ್ ಆಸೆಗೆ ಕೊನೆಯಿಲ್ಲ
ಒಂದ್ ಕಾಸು ಉಳಿದಿಲ್ಲ
ಬ್ಯಾಂಕ್ ಬ್ಯಾಲೆನ್ಸ್ ಖಾಲಿ 
ಮನೆ ಬಾಡಿಗೆ ಹೇಗ್ ಕಟ್ಲಿ

ನೆನ್ನೆ ಉಟ್ಟ ಸೀರೆಯ
ಈ ದಿನ ಮುಟ್ಟೋದಿಲ್ಲ
ನಾಳೆ ಕೊಳ್ಳೋ ಸೀರೆಯ
ರೇಟ್ ಲೆಕ್ಕಾ ಹಾಕೋದಿಲ್ಲ

ಅದೆಲ್ಲಿಂದ ಬಂತೋ ಈ ಬುದ್ದಿ
ಕೊಡಿಸಿ ಅಂತೀಯ ಗುದ್ದಿ ಗುದ್ದಿ
ಊರೆಲ್ಲಾ ಆಗಿದೆ ಸಾಲದ ಸುದ್ದಿ
ಸ್ವಲ್ಪ ಅರ್ಥ ಮಾಡ್ಕೊಳ್ಳೇ ಪೆದ್ದಿ

ಸುಮ್ಮನೆ ಸುಮ್ಮನೆ ಆ ದಿನ
ನಿನ್ನ ನೋಡಿದ್ದೇ ತಪ್ಪಾಯ್ತು
ಮೆಲ್ಲನೆ ಮೆಲ್ಲನೆ ಆ ಕ್ಷಣ
ಹಿಂದೆ ಬಂದದ್ದೇ ತಪ್ಪಾಯ್ತು

|| ಪ್ರಶಾಂತ್ ಖಟಾವಕರ್ ||