Thursday 29 November 2012

ಪ್ರಶಾಂತ ಮನಸ್ಸಿಂದ ಬರೆದ.. ಪ್ರಶಾಂತನ ಪ್ರೇಮ ಕಾಗದ.. :)



ಪ್ರಶಾಂತ ಮನಸ್ಸಿಂದ ಬರೆದ.. ಪ್ರಶಾಂತನ ಪ್ರೇಮ ಕಾಗದ.. :)
*********************************************************

ಜೋಡಿ ಜಡೆಯ ಬೀಸಿ ನೀನು
ಕರೆದೆ ಪ್ರೀತಿಯಿಂದ
ಓಡಿ ಓಡಿ ಬಂದೆ ನಾನು
ದೂರದ ಊರಿನಿಂದ

ಚೆಂದ ಚೆಂದ
ತುಂಬಾ ಚೆಂದ
ಬೆಳ್ಳಿ ಪರದೆ ಮೇಲೆ
ನಿನ್ನ ನೋಡೋದೇ
ಬಲು ಚೆಂದ

ಹಾಲಿವುಡ್ ಹುಡುಗಿಗಿಂತ
ಬಲು ಚೆಂದ
ಹಾಲಿನಂತಹಾ ನಿನ್ನ ಮೈ ಬಣ್ಣ
ಬಾಲಿವುಡ್ ಬೆಡಗಿಗಿಂತ
ಬಹಳಾ ಚೆಂದ
ಬಳಕುವ ಆ ನಿನ್ನ ನಡು ಸಣ್ಣ

ಓಹೋ ಬೆಂಗಳೂರು ಬಾಲೆ
ನನ್ನ ಮಾತು ಸ್ವಲ್ಪ ಕೇಳೆ
ಏಳೇಳು ಜನ್ಮ, ನೀನೇ ನನ್ನ ನಲ್ಲೆ
                        ದಯವಿಟ್ಟು ನನ್ನ ಪ್ರೀತಿಯ ಒಪ್ಪಿಕೊಳ್ಳೇ .... !!!!!!!!!!!!!!!!

|| ಪ್ರಶಾಂತ್ ಖಟಾವಕರ್ ||

Sunday 25 November 2012

ಹೇ ಪ್ರೀತಿ .. ಹೇ ಪ್ರೀತಿ ..



ಹೇ ಪ್ರೀತಿ .. ಹೇ ಪ್ರೀತಿ ..
ನೀನೇಕೇ .. ಈ ರೀತಿ .. !!

ನನ್ನಷ್ಟಕ್ಕೆ ನಾ ಸುಮ್ಮನೆ ಇದ್ದೆ
ಏನೋ ಹೇಳಲು ನೀನೇ ಕರೆದೆ
ಬಂದರೆ ನಾ ನಿನ್ನಾ ಬಳಿಗೆ
ಬಂಧಿಸಿದೆ ನೀ ನಿನ್ನಾ ಎದೆಯೊಳಗೆ

ಪಕ್ಕದಲ್ಲೇ ಇತ್ತು ನಿನ್ನಾ ಹೃದಯ
ಮಾತಾನಾಡು ಅಂತು ಪ್ರೀತಿ ವಿಷಯ
ಇದು ನನ್ನ ನಿನ್ನ ಹೃದಯಗಳ ವಿಷಯ
ಪ್ರೀತಿಯ ಬೆಸುಗೆಯಲ್ಲಿ ನಮ್ಮಿಬ್ಬರಾ ಹೃದಯ

ಹೇ ಪ್ರೀತಿ.. ಹೇ ಪ್ರೀತಿ.. ಇದು ಮೊದಲಾ ಸಲ
ಹೇ ಪ್ರೀತಿ.. ಹೇ ಪ್ರೀತಿ.. ನೀನು ನಕ್ಕರೆ ಕಿಲಕಿಲ
ಹೇ ಪ್ರೀತಿ.. ಹೇ ಪ್ರೀತಿ.. ನನ್ನೊಳಗೆ ತಳಮಳ
       ಹೇ ಪ್ರೀತಿ.. ಹೇ ಪ್ರೀತಿ.. ನನಗಿದು ಹೊಸಾ ರೀತಿ .. :)

ಹೇ ಪ್ರೀತಿ .. ಹೇ ಪ್ರೀತಿ ..
ನೀನೇಕೇ .. ಈ ರೀತಿ .. !!

|| ಪ್ರಶಾಂತ್ ಖಟಾವಕರ್ ||

Saturday 10 November 2012

ಬ್ರಹ್ಮನಿಗೊಂದು ಪತ್ರ


ಬ್ರಹ್ಮನಿಗೊಂದು ಪತ್ರವ ಬರೆದೆ
ನನ್ನ ಪ್ರೇಯಸಿ ಹೇಗಿರಬೇಕೆಂದು

ವಾಯುದೇವನು  ಉತ್ತರ ತಂದನು
ಬಿರುಗಾಳಿಯಲ್ಲಿ ತೇಲಿ ಬಂತು ಬಟ್ಟೆಯೊಂದು
ನನ್ನ ಮುಖವನು ಮುಚ್ಚಿ , ನಡುಕವು ಹೆಚ್ಚಿ
ನಿಂತಲ್ಲೇ ನಿಂತೇ ನಾನು , ಏನಿದೇನಿದು ?

ದೂರದಿಂದ ಹಾರಿ ಬಂದ "ದುಪಟ್ಟಾ"
ಪತ್ರದ ಉತ್ತರ ಬ್ರಹ್ಮದೇವ ಕೊಟ್ಟ
ಹಸಿರು ಬಣ್ಣದ ಬಟ್ಟೆಯ ಹಾರಿ ಬಿಟ್ಟ
ಅದು ಹಾರಿ ಬಂದ ದಿಕ್ಕಿನೆಡೆಗೆ ನನ್ನ ನೋಟ

ಮನವು ಬಯಸಿದ ಚೆಲುವೆಯ ಕಂಡು
ಆರಂಭವಾಯಿತು ಅವಳೆಡೆಗೆ ನನ್ನ ಓಟ
ಮರೆತು ಹೋದೆ ನಾನಲ್ಲೇ ಸಕಲ ಆಟ ಪಾಠ
ಅವಳಿಗಾಗಿ ಎಲ್ಲರಿಗೂ ಹೇಳಿದೆ ... ಟಾಟಾ  ಟಾಟಾ .. !! ...... :)

|| ಪ್ರಶಾಂತ್ ಖಟಾವಕರ್ ||

Friday 9 November 2012

ನೀನೆಂದು ಬರುವೆ


ನೀನೆಂದು ಬರುವೆ ಊರಿಂದ
ದೂರ ಇರಲಾರೆ ನಾ ನಿನ್ನಿಂದ
ಕೋಪವೇತಕೆ ಕೋಮಲೆ
ಮುನಿಸಿಕೊಳ್ಳಬೇಡ ಓ ನನ್ನ ನಲ್ಲೆ 

ಪುಟಗಟ್ಟಲೇ ಬರೆದು ಬರೆದು
ನನ್ನ ವಿರಹದಾ ಕಥೆಯನ್ನು
ನೀ ಬರುವೆ ಎಂಬ ನಂಬಿಕೆಯಲ್ಲಿ
ಕೊನೆಯ ಪುಟವೊಂದನ್ನು ಮಾತ್ರ
ಖಾಲಿ ಇಟ್ಟುಕೊಂಡು ಕಾಯುತ್ತಿರುವೆ

ನೀ ಮರಳಿ ಬಂದ ಮೇಲೆ
ಪ್ರೇಮದ ಓಲೆಯ ಬರೆಯಲೆಂದು 
ಕೊನೆಯ ಪುಟವನ್ನು ಖಾಲಿ ಉಳಿಸಿಕೊಂಡು
ಕಾದಿರುವೆ ನಿನಗಾಗಿ
ನೀ ಹೋದ ದಿಕ್ಕಿನೆಡೆಗೆ ಮುಖಮಾಡಿ

|| ಪ್ರಶಾಂತ್ ಖಟಾವಕರ್ ||

ಹಕ್ಕಿ ಚುಕ್ಕಿ


ಹಗಲಲ್ಲಿ ಹಾಹ್ಹ ಹಗಲಲ್ಲಿ
ಬಣ್ಣಬಣ್ಣದ ಹಕ್ಕಿ ಬಾನಲ್ಲಿ
ಇರುಳಲ್ಲಿ ಹೇಹೇ ಇರುಳಲ್ಲಿ
ಬೆಳ್ಳಿ ಚುಕ್ಕಿ ಆ ಆಗಸದಲ್ಲಿ.. !!

ನೀಲಿ ಬಾನಿನಲ್ಲಿ ಬಣ್ಣದ ಹಕ್ಕಿ
ಕಪ್ಪು ಆಗಸದಲ್ಲಿ ಬೆಳ್ಳಿ ಚುಕ್ಕಿ
ಹಕ್ಕಿ ಚುಕ್ಕಿಗಳೆರಡು ನೀಡುತ್ತಿವೆ
ನಿನ್ನಾ ನೆನಪನ್ನೇ ಹೆಕ್ಕಿ ಹೆಕ್ಕಿ
ನನ್ನ ಮನವನ್ನು ಕುಕ್ಕಿ ಕುಕ್ಕಿ.. !!

|| ಪ್ರಶಾಂತ್ ಖಟಾವಕರ್ ||

ನಾನೇನೂ ಬ್ರಹ್ಮನಲ್ಲ


ನಾನೇನೂ ಬ್ರಹ್ಮನಲ್ಲ
ನನಗೇನೂ ತಿಳಿದಿಲ್ಲ
ಆದರೂ ಹೊಸದೊಂದ ಸೃಷ್ಟಿಸುವ ಬಯಕೆ
ಬರೆದೆ ನಾನು ನಾಲ್ಕು ನುಡಿಗಳ ನೆನಪಿಗಾಗಿ

ನಾನೇನೂ ಈಶ್ವರನಲ್ಲ
ನನಗೇನೂ ತಿಳಿದಿಲ್ಲ
ಆದರೂ ಜೀವನದ ಕಹಿಯನ್ನೆಲ್ಲಾ ಸವಿಯುವೆ
ನನ್ನ ನಾಲ್ಕು ದಿನದ ಸಿಹಿಯನ್ನು ಹಂಚುತ ಬಾಳುವೆ

ನಾನೇನೂ ವಿಶ್ವರೂಪಿ ವಿಷ್ಣುವಲ್ಲ
ನನಗೇನೂ ತಿಳಿದಿಲ್ಲ
ಆದರೂ ಹತ್ತಾರು ಮುಖಗಳು ನನ್ನಲ್ಲಿ ಮೂಡಲು
ಜನಮನಗಳ ದೃಷ್ಟಿ ದಿಕ್ಕುಗಳ ಚಿಂತನೆಗೆ ನಾನೇನ ಮಾಡಲಿ

ನಾನೇನೂ ಅಲ್ಲ .. ನಾನೇನೂ ಅಲ್ಲ ..
ನನಗೇನೂ ತಿಳಿದಿಲ್ಲಾ .. ನನಗೇನೂ ತಿಳಿದಿಲ್ಲಾ .. !!

|| ಪ್ರಶಾಂತ್ ಖಟಾವಕರ್ ||

ಬಿಟ್ಟು ಹೋದೋರ


ಬಿಟ್ಟು ಹೋದೋರ 
ನೆನೆಯುತ
ಕೂತರೇನು ಸಿಗುವುದು
ಬರೀ ನೋವುಗಳಾ ನಂಟು

ಜೊತೆ ಬರುವವರ
ದೂರವಿಟ್ಟರೇನು ಸಿಗುವುದು
ನೋವುಗಳ ನಂಟಿನ ಗಂಟು

ಯಾರೂ ಇಲ್ಲಾ
ನನಗ್ಯಾರೂ ಇಲ್ಲಾ
ಹೇಳುವೆ ನಾನು
ನನ್ನ ಜೀವನದ ಗುಟ್ಟು

ನೊಂದು ನೊಂದು
ನನ್ನೆದೆಯಲ್ಲಾ ಉರಿದು
ಆರದಾ ಗಾಯ ನನ್ನಲ್ಲಿಂದು
ಏಕಾಂಗಿ ಬದುಕು ನನ್ನದು
ಏಕಾಂಗಿ ಬದುಕು ನನ್ನದು.. !!

|| ಪ್ರಶಾಂತ್ ಖಟಾವಕರ್ ||