Sunday, 29 April 2012

ನಗಿಸಲು ನಾನು .. :) :)ನಗಿಸಲು ನಾನು .. :) :)
******************************

ನಗಿಸಲು ನಾನು
ನಗುವೆಯ ನೀನು

ನಗಲು ನಾನು
ಬರೆಯುವೆಯ ನೀನು

ಬರೆಯಲು ನಾನು
ಹಾಡುವೆಯ ನೀನು

ಹಾಡಲು ನಾನು
ಕುಣಿಯುವೆಯ ನೀನು

ಕುಣಿಯಲು ನಾನು
ನಗುವೆಯ ನೀನು

ನಗಲು ನಾನು
ನಗುವೆಯ ನೀನು

ನಗಿಸಲು ನಾನು
        ನಗುವೆಯ ನೀನು .. :) :)

  || ಪ್ರಶಾಂತ್ ಖಟಾವಕರ್ ||

Friday, 27 April 2012

ಹೊಸ ರೀತಿಯ ವಿಚಿತ್ರ ಕವನಹೊಸ ರೀತಿಯ  ವಿಚಿತ್ರ  ಕವನ 
  *****************************

ಒಂದು ಪದವ
ನೀನು ಬರೆದರೆ
ಇನ್ನೊಂದು ಪದ
ನಾನು ಬರೆಯುವೆ

ಮುಂದಿನ ಪದವನ್ನು
ನೀನು ಬರೆಯಬೇಕು
ಮತ್ತೊಂದು ಪದವನ್ನು
ನಾನು ಸೇರಿಸಬೇಕು

ಹೀಗೆ ಸುಮ್ಮನೆ
ಹಾಗೆ ಸುಮ್ಮನೆ
ಪದಗಳ ಜೊತೆ
ಆಟವಾಡುತ
ನಾನು ನೀನು

ಆಗುವುದು ಅದುವೇ
ವಿಚಿತ್ರ ಪದ ಸಂಕಲನ
ಹೊಸ ರೀತಿಯ ಕವನ
          ನನ್ನ ನಿನ್ನ ಜೊತೆ ಜೊತೆಯಲಿ .. :) :)
        ಈ ಹೊಸತನಕ್ಕೆ ಜೊತೆ ಯಾರಿಲ್ಲಿ .. ??

  || ಪ್ರಶಾಂತ್ ಖಟಾವಕರ್ ||

Thursday, 26 April 2012

ನಾನಿಟ್ಟ ರಂಗೋಲಿ .. :) :)ನಾನಿಟ್ಟ  ರಂಗೋಲಿ
****************************

ಮನೆಯಂಗಳದಲ್ಲಿ
ನಾನಿಟ್ಟ ಚುಕ್ಕಿ ಸಾಲು
ಒಂದಲ್ಲ ಎರಡಲ್ಲ
ಹತ್ತಾರು ಸಾಲು ಸಾಲು

ಚುಕ್ಕಿ ಚುಕ್ಕಿಗೂ
ಅದೇನೋ ನಂಟು
ಸಾಲು ಸಾಲು ಸೇರುತ
ಮೂಡಿತಲ್ಲಿ ಹೂದಂಟು

ಮತ್ತಹಲವು ರೇಖೆಗಳು
ನೃತ್ಯ ಮಾಡುತ ನಗಲು
ಅಲ್ಲಲ್ಲಿ ಖಾಲಿ ಚುಕ್ಕಿಗಳು
ಒಂಟಿತನದ ಚಿಂತೆ ಕಾಡಲು

ಅರಳಿತು ಹೂವೊಂದು
ಮುದ್ದಾದ ರೂಪದೊಳು
ಹೇಳಿತು ಕಥೆಯೊಂದ
ಚುಕ್ಕಿಯ ಸಾಲುಗಳು

ಭಾವನೆಗಳ ಬಿಂಬಿಸುವ
ಬಣ್ಣಗಳ ಶೃಂಗಾರವು
ರಂಗೋಲಿ ಚಿತ್ತಾರ ನೀಡುವ
ಮೆನೆಯಂಗಳದ ಚೆಲುವು

        ನಾನಿಟ್ಟ  ರಂಗೋಲಿ .. :) :)


     || ಪ್ರಶಾಂತ್ ಖಟಾವಕರ್ ||

Friday, 20 April 2012

ಯಾಂತ್ರಿಕ ನಗು :) :) :) :) :)


ಯಾಂತ್ರಿಕ ನಗು :) :) :) :) :)
***************************************************************

ಮೇಲೊಂದು
ಕೆಳಗೊಂದು
ಸಣ್ಣ ಸಣ್ಣ ಚುಕ್ಕಿ
ಆ ಚುಕ್ಕಿ ಪಕ್ಕ
ಒಂದರ್ಧ ಚಂದ್ರ
ಅದುವೇ ಯಾಂತ್ರಿಕ ನಗು

ಆ ಚಂದ್ರನ  ಮುಂದೆ
ಮತ್ತಷ್ಟು ಅರ್ಧ ಚಂದ್ರಗಳು
ಸೇರಿದರದೇ ದೊಡ್ಡ ನಗು .. :)))))))))

ಚಂದ್ರನು ಅಲ್ಲಿ
ಮುಖ ತಿರುಗಿಸಿ ನಿಂತಲ್ಲಿ
ಅದುವೇ ಅಳುವು , ಬೇಸರವು .. :( :(

ಮಾತಿಗೊಂದು ಮುದ್ದು ನಗು
ಮೌನದ ಸಿಹಿ ಉತ್ತರಕ್ಕೂ
ಬೇಕೇ ಬೇಕು 
ಈ ಯಾಂತ್ರಿಕ ನಗು
ಯಾಂತ್ರಿಕ ಬದುಕಿನ
ಅನಿವಾರ್ಯ ಆಗಿದೆ
ಈ ಚುಕ್ಕಿ ಚಂದ್ರ ನಗು .. :) :) :) :) :)

  || ಪ್ರಶಾಂತ್ ಖಟಾವಕರ್ ||

Wednesday, 18 April 2012

ಕೊನೆ ಇಲ್ಲದ ಕನಸುಗಳುಕೊನೆ ಇಲ್ಲದ ಕನಸುಗಳು
***********************

ಅಲ್ಲೊಂದು ತಂಪಾದ ಉದ್ಯಾನ
ಚಿಲಿಪಿಲಿ ಸದ್ದು ಇಂಪಾದ ಮಧ್ಯಾಹ್ನ
ಮದುವೆಯ ಸಿಹಿ ಸವಿರುಚಿ ಭೋಜನ
ತುಸು ವಿಶ್ರಾಮ ಮರದ ನೆರಳಿಗೆ ಆ ದಿನ

ಶ್ವೇತ ವರ್ಣ ಸೌಂದರ್ಯ ರಾಣಿ
ನಾನಲ್ಲಿ ನೋಡಿದ ಮುದ್ದು ಅರಗಿಣಿ
ನಯನಗಳು ಮಿಂಚಲು ಮಿಣಿ ಮಿಣಿ
ಮನಸ್ಸು ಏರಿತು ಕನಸುಗಳ ಏಣಿ

ಅಲ್ಲೊಂದು ಕೂಗಿನ ಜೊತೆ ಮೌನ ನಗು
ಹತ್ತಿರಕ್ಕೆ ಬಂದ ಆ ಚೆಲುವೆಯ ಸೊಬಗು
ನೋಡು ನೋಡುತ್ತಿದ್ದಂತೆಯೇ ಗುಡುಗು
ಏಳಾಗಿದೆ ಗಂಟೆ ಎದ್ದೇಳೋ..!! ಅಪ್ಪನ ಕೂಗು

ಕೊನೆಗಿಲ್ಲಿ ಎಲ್ಲವೂ ಕೊನೆ ಇಲ್ಲದ ಕನಸುಗಳು .. :)

|| ಪ್ರಶಾಂತ್ ಖಟಾವಕರ್ ||

Thursday, 12 April 2012

ಭೂತಕ್ಕೆ ಅಂತ್ಯವೇ ..!!ಭೂತಕ್ಕೆ ಅಂತ್ಯವೇ ..!!
***********************

ಯಾರು ಇಲ್ಲ
ಏನು ಇಲ್ಲ
ಕಾರಣ ಮೊದಲೇ ಇಲ್ಲ
ಇರುವುದೆಲ್ಲಾ ಇಲ್ಲವೇ ಇಲ್ಲ

ಏಕೋ ಗೊತ್ತಿಲ್ಲ
ವಿಚಾರ ನಿಜವಲ್ಲ
ವಿಷಯವಂತೂ ತಿಳಿದೇ ಇಲ್ಲ
ನಾನು ನೀನು ಹುಚ್ಚು ಬಿಟ್ಟಿಲ್ಲ

ಆ ಗುಡ್ಡದ ಮಾತು ಸುಳ್ಳಲ್ಲ
ಭೂತದ ಕಥೆಯು ಭಯವಿಲ್ಲ
ಈ ಭೂತವು ಶಾಶ್ವತವಲ್ಲ
ಆದರೂ ಭೂತಕ್ಕೆ ಅಂತ್ಯವೇ ಇಲ್ಲ

|| ಪ್ರಶಾಂತ್ ಖಟಾವಕರ್ ||

Wednesday, 11 April 2012

ಈ ಮಾವು ಜೊತೆ ನಾವು ನೀವು


ಈ ಮಾವು ಜೊತೆ ನಾವು ನೀವು
********************************

ಮನಸ್ಸಿಗೆ ಮಜವೂ ಈ ಮಾವು
ಕುಡಿಯಲು ಮಾಜ್ಜಾ ಈ ಮಾವು

ಬಸುರಿಯ ಬಯಕೆ ಈ ಮಾವು
ಇಷ್ಟಪಟ್ಟು ತಿನ್ನುವ ಹುಳಿ ಮಾವು

ವಸಂತ ಕಾಲಕ್ಕೆ ಚಿಗುರುವ ಮಾವು
ಊಟಕ್ಕೆ ರುಚಿ ಉಪ್ಪಿನಕಾಯಿ ಮಾವು

ತಿನ್ನಲು ತೋತಾಪುರಿ ಭರ್ಜರಿ ಮಾವು
ಹಣ್ಣಿನ ಅಂಗಡಿಯ ವಿಶೇಷ ಈ ಮಾವು

ಹೆಣ್ಣಿನ ಚೆಂದವನ್ನು ಕವಿ ಎನ್ನುವ ಮಾವು
ಹಣ್ಣಿನ ರುಚಿ , ಹೆಣ್ಣಿನ ಪ್ರೀತಿ ಹೋಲಿಕೆ ಮಾವು

ಮುಗ್ದ ಮಗುವಿನ ಬಣ್ಣದ ಚಿತ್ರಕಲೆಯಲ್ಲಿ ಮಾವು
ವಯಸ್ಸಿನ ಮಿತಿಯಿಲ್ಲ ಸವಿಯಲು ಎಲ್ಲಾ ಈ ಮಾವು

ಕೋಗಿಲೆ ಸದ್ದನು ನೀಡುವ ಸೊಬಗಿನ ಮರವು ಮಾವು
ಮಾವು ಬೇವು ನೋವು ನಲಿವು ಜೀವನದ ಒಂದು ಭಾಗವು

ಸುಖ ದುಃಖ ಸರಿ ಸಮ ಅಳತೆಯ ಲೆಕ್ಕಾಚಾರ ಜೀವನವು
ಬರುವುದೆಲ್ಲಾ ಸುಖ ಶಾಂತಿ ಕೂಡಿ ಬಾಳಿದರೆ ನಾವು ನೀವು

|| ಪ್ರಶಾಂತ್ ಖಟಾವಕರ್ ||

ತಾಯಿ ಮಗು


ತಾಯಿ ಮಗು

***************

ಅಲ್ಲೊಂದು ಜೀವ
ಪ್ರೀತಿಯ ದೈವ
ನೂರಾರು ಭಾವ
ಸಹಿಸಲು ನೋವ

ಮುತ್ತೊಂದ ಕೊಟ್ಟು
ತುತ್ತೊಂದ ಇಟ್ಟು
ಅಗಸದೆಡೆಗೆ ಬೆಟ್ಟು
ಅದುವೇ ನಗುವಿನ ಹುಟ್ಟು

ಮಾತಿನ ಮೋಡಿ
ಚಂದಮಾಮನ ನೋಡಿ
ಲಾಯಿಯ ಹಾಡಿ
ಸಾಗಿಸುತ ಜೀವನ ಗಾಡಿ

|| ಪ್ರಶಾಂತ್ ಖಟಾವಕರ್ ||

Friday, 6 April 2012

ಹೃದಯದ ಮಾತುಹೃದಯದ  ಮಾತು 
*******************

ಇದು ಹೃದಯದ  ಮಾತು , ಓ  ಮನವೇ....

ಓ ನನ್ನ ಮನವೇ
ನಿನಗೆಂದು ತಿಳಿಯುವುದು
ಈ ಜಗವಿರುವುದು ಸ್ವಾರ್ಥದ
ಅರಮನೆಯ ಕಟ್ಟಿರುವವರ ಕೈಯಲ್ಲಿ

ಇದು ಹೃದಯದ  ಮಾತು , ಓ  ಮನವೇ....

ಓ ನನ್ನ ಮನವೇ
ನೀನೆಷ್ಟು ಕೂಗಿದರೂ
ಒಳ್ಳೆಯದಕ್ಕೆ ಕಾಲವಲ್ಲ
ಕೆಡುಕು ಹಾಡು ಕುಣಿದಾಡುವುದು
ನಿನ್ನಿಂದ ನೋಡಲು ಸಾಧ್ಯವಿಲ್ಲ

ಇದು ಹೃದಯದ  ಮಾತು , ಓ  ಮನವೇ....

ಓ ನನ್ನ ಮನವೇ ಕೇಳು ನೀ
ನನ್ನ ಹೃದಯದ ಮಾತನ್ನು
ನಿನ್ನನ್ನೇ ಏಣಿ ಮಾಡಿಕೊಂಡು
ಹತ್ತುವರು ಆಗಸದಲ್ಲಿ ಹಾರಾಡಲು

ಇದು ಹೃದಯದ  ಮಾತು , ಓ  ಮನವೇ....

ಓ ನನ್ನ ಮನವೇ ನಂಬಿಕೆ ವಿಶ್ವಾಸ
ಎನ್ನುವ ಪದಗಳೇ ಈ ಲೋಕದಲ್ಲಿ
ಇಲ್ಲವೆನ್ನುವಂತೆ ಬದುಕುವ ಜನರಿಲ್ಲಿ
ನೀನೆಷ್ಟು ಸಹಾಯ ಮಾಡ ಬಯಸಿದರೂ
ನಿನ್ನನ್ನೇ ಪಾತಾಳದಲ್ಲಿ ತುಳಿದು ಹೂಳುವ
ಮಹಾನ್ ಮೇಧಾವಿಗಳ ಸಂತೆಯೇ ಇಲ್ಲಿದೆ

ಇದು ಹೃದಯದ  ಮಾತು , ಓ  ಮನವೇ....

ಓ ನನ್ನ ಮನವೇ ಚಿಂತಿಸದಿರು ನೀನಿಂದು
ಯಾರೆನೆಂದರೂ ನಾ ನಿನ್ನ ಬಿಡಲಾರೆ
ಕೇಳು ನೀ ಈ ಹೃದಯದ ಪ್ರಮಾಣವನ್ನು
ನಿನಗಾಗಿಯೇ ನನ್ನ ಈ ಡವ ಡವ ನಾದವು
ನನ್ನ ಸದ್ದಿನ ಅಂತ್ಯವೇ ನಿನ್ನ ಪ್ರಿಯ ಬರೆಯುವ
ಕೊನೆಯ ಕಾದಂಬರಿ.. 

ಇದು ಹೃದಯದ  ಮಾತು , ಓ  ಮನವೇ....

|| ಪ್ರಶಾಂತ್ ಖಟಾವಕರ್ ||

Thursday, 5 April 2012

ಲವ್ ಯು ಚಿನ್ನು ಡಿಯರ್......ಲವ್ ಯು ಚಿನ್ನು ಡಿಯರ್......
**************************

ತಂಪಾದ ವಾತಾವರಣ
ಎಂದೂ ಇಲ್ಲದ ಮೌನ
ನನ್ನಾಕೆಯೂ ತುಸು ನಕ್ಕಳು
ಕಾರಣ ಏನೆಂದು ಇನ್ನೂ ತಿಳಿದಿಲ್ಲ

ನಾನು ಸಹ ಆ ದಿನ ಕಚೇರಿಯ ಕೆಲಸ ಮುಗಿಸಿ , ಹೆಂಡತಿ ಹೇಳಿದಂತೆ ಮನೆಗೆ ಬೇಕಾದ ಸಾಮಗ್ರಿಗಳ ಉದ್ದನೆಯ ಪಟ್ಟಿಯೊಂದನ್ನು ಕೈಯಲ್ಲಿ ಹಿಡಿದು ಅಂಗಡಿ ಸಾಲುಗಳ ಮಾರುಕಟ್ಟೆಯತ್ತ ನನ್ನ ಹಳೆಯ ಸ್ಕೂಟರಿನಲ್ಲಿ ಹೊರಟೆ .. ಆದರೆ ನನ್ನ ಮನಸ್ಸು ನನ್ನ ಹಿಡಿತದಲ್ಲಿ ಇರಲೇ ಇಲ್ಲ.. ಮತ್ತದೇ ಚಿಂತೆ ನನ್ನಾಕೆ ಆ ದಿನ ಮಂದಹಾಸ ಬೀರಲು ಕಾರಣವೇನು.. ?
ಈ ಆಲೋಚನೆಯಲ್ಲಿ ಪಟರ್ ಪಟರ್ ಎಂದು ಸದ್ದು ಮಾಡುತ್ತಾ ನನ್ನ ಭಾರವನ್ನು ಹೊತ್ತು ಸಾಗುತ್ತಿದ್ದ ಸ್ಕೂಟರ್ ಸ್ವಲ್ಪ ದೂರದಲ್ಲಿ ಇನ್ನೇನು ಅಂಗಡಿಗಳ ಸಾಲುಗಳು ಕಣ್ಣೆದುರಿಗೆ ಕಾಣುತ್ತವೆ ಎನ್ನುವಷ್ಟರಲ್ಲಿ ನಿಂತೇ ಹೋಯಿತು.. ಆಗಲೇ ಅರಿವಾಗಿದ್ದು ನಾನೇನೋ ಮರೆತಿರುವೆ ಎಂದು .. ಅದು ಪೆಟ್ರೋಲ್ ಹಾಕಿಸುವುದು ... ಸರಿ ಇನ್ನೇನು ಮಾಡಲು ಸಾಧ್ಯ ಈಗ ಸ್ಕೂಟರ್ ಅನ್ನು ಪಕ್ಕದಲ್ಲೇ ಒಂದು ಮರದ ಕೆಳಗೆ ನೆರಳಿನಲ್ಲಿ ನಿಲ್ಲಿಸಿ ಮತ್ತು ನಾನು ಸಹ ಸ್ವಲ್ಪ ಹೊತ್ತು ಆ ಮರದ ನೆರಳಿನಲ್ಲಿ ಹಾಯಾಗಿ ಕಾಲ ಕಳೆದೆ .. ಆಗ ಮತ್ತೆ ಆ ತಂಪು ಪ್ರಕೃತಿಯಲ್ಲಿ ಹಳೆಯ ನೆನಪುಗಳು ನನ್ನ ಹೆಂಡತಿ ಆ ದಿನ ನಗಲು ಕಾರಣ ಏನು ?
ಈ ಒಂದು ಯೋಚನೆಯಲ್ಲಿಯೇ ಮತ್ತೆ ಒಂದು ನೆನಪಾಯಿತು .. ಕಚೇರಿ ಕೆಲಸ ಮುಗಿಸಿ ಈ ಅಂಗಡಿ ಸಾಲುಗಳ ಕಡೆ ಬರುವಾಗ ನಾನು ಕೈಯಲ್ಲಿಯೇ ಹಿಡಿದಿದ್ದ , ಎಲ್ಲಾ ಸಾಮಾಗ್ರಿಗಳ ಹೆಸರು ಮತ್ತು ಎಷ್ಟೆಷ್ಟು ಬೇಕು ಎಂದು ಹೆಂಡತಿ ಹೇಳಿ ನನ್ನ ಕೈಯಲ್ಲೇ ಬರೆಸಿದ್ದ ಉದ್ದನೆಯ ಪಟ್ಟಿಯೊಂದು ಕಾಣೆಯಾಗಿತ್ತು .. ಅದು ನಾನು ಸ್ವಲ್ಪ ಮೈ ಮರೆತು ಸ್ಕೂಟರ್ ಓಡಿಸಿದ ಕ್ಷಣದಲ್ಲಿ ಎಲ್ಲೋ ರಸ್ತೆಯ ಬದಿಯಲ್ಲಿ ಬಿದ್ದು ಹೋಗಿರಬಹುದು ಎನ್ನುವ ಅನುಮಾನ ..ಆದರೆ ಯಾವ ಸ್ಥಳದಲ್ಲಿ ಎನ್ನುವುದು ಸರಿಯಾಗಿ ತಿಳಿಯುತ್ತಿಲ್ಲ... ಈಗ ಮತ್ತೊಂದು ಚಿಂತೆ ಹೆಂಡತಿಗೆ ಕರೆ ಮಾಡಿದರೆ ಹೇಗೆ ಎಂದು .. ಆಗ ರಸ್ತೆಯಲ್ಲಿ ನಡೆದಾಡುತ್ತಿದ್ದ ಕೆಲವು ಜನರು ನನ್ನನ್ನೇ ನೋಡುತ್ತಿದ್ದರು ಮತ್ತು ಕೆಲವು ವಾಹನ ಸವಾರರೂ ಸಹ ನನ್ನತ್ತ ಒಂದು ನೋಟ ಬೀರಿ ಮತ್ತೆ ಸುಮ್ಮನೆ ಮುಂದೆ ಸಾಗುತ್ತಿದ್ದರು .. ತುಂಬಾ ವಾಹನಗಳ ಓಡಾಟ , ಭಾರಿ ಜೋರು ಸದ್ದು ಗದ್ದಲ .. ಇದರ ನಡುವೆ ನನ್ನ ಪ್ರೀತಿಯ ಪತ್ನಿಯು ತರಲು ಹೇಳಿದ್ದ ವಸ್ತುಗಳ ಪಟ್ಟಿಯು ಇಲ್ಲದಾಗಿದ್ದು ಏನೇನು ಖರೀದಿಸಬೇಕು ಎಂಬ ಯೋಚನೆಯಲ್ಲಿ ಮತ್ತೊಮ್ಮೆ ಹೆಂಡತಿಗೆ ಕರೆ ಮಾಡಿದರೆ ಹೇಗೆ ಎಂದು ಚಿಂತಿಸುವಾಗ ಎಲ್ಲೂ ಇಲ್ಲದ ಮೌನ ಆ ಮರದ ನೆರಳಿನ ತಂಪಾದ ವಾತಾವರಣ ಮತ್ತದೇ ಹಳೆಯ ನೆನಪು ಅಂದು ನನ್ನವಳು ಮೆಲ್ಲನೇ ನಗಲು ಕಾರಣವೇನು ಎಂದು..
ಹೀಗಿರುವಾಗ ನಾನು ಮರದಡಿಯಲ್ಲಿ ನಿಂತಿರುವುದನ್ನು ಯಾರೋ ಒಬ್ಬ ಪರಿಚಯವಿರುವವರು ನೋಡಿ , ಅದನ್ನು ನನ್ನ ಹೆಂಡತಿಗೆ ಹೇಳಿದ್ದರೋ ಏನೋ ತಿಳಿದಿಲ್ಲ .. ಆದರೆ ನಾನು ಯೋಚಿಸುತ್ತ ನನ್ನ ಹೆಂಡತಿಗೆ ದೂರವಾಣಿ ಕರೆ ಮಾಡಿದೆ .. ಆದರೆ ಉತ್ತರ ಇಲ್ಲ.. ಮತ್ತೆ ಪ್ರಯತ್ನ ಪಟ್ಟೆ ಆದರೂ ಮತ್ತೆ ಉತ್ತರ ಬರಲಿಲ್ಲ. ಸರಿ ಈಗ ಮೊಬೈಲ್ ಕರೆ ಮಾಡಿದರಾಯಿತು ಎಂದು ನಂಬರ್ ಒತ್ತಿ ನನ್ನ ಕಿವಿಯತ್ತ ಮೊಬೈಲ್ ಹಿಡಿದು ಒಂದು ವಿಶೇಷ ಗತ್ತಿನಲ್ಲಿ ನಿಂತುಕೊಂಡೆ. ಹೆಂಡತಿ ಫೋನ್ ಎತ್ತಿದಳು .. ಹಲೋ ಎಂದು ಸಿಹಿಯಾಗಿ ನನ್ನ ಕಿವಿಗಳಿಗೆ ನನ್ನವಳ ದನಿಯು ತಾಗಿದಾಗ ಮತ್ತೊಮ್ಮೆ ನಾನು ಈ ಜಗವನ್ನೇ ಮರೆತವನಂತೆ ನಿಂತು ಬಿಟ್ಟೆ.. ಜೋರಾದ ಸದ್ದು ಹಲೋ ಡಿಯರ್ ಮಾತಾಡು ಎಲ್ಲಿದ್ದೀಯಾ .. ನಾನು ತಕ್ಷಣಕ್ಕೆ ಇರುವ ಸ್ಥಳದ ಗುರುತನ್ನು ಹೇಳಿದೆ .. ಕೂಡಲೇ ಅವಳು ಮತ್ತೆ ಜೋರಾಗಿ ಕೂಗಿದ ಕಲ್ಪನೆ .. ಆದರೆ ಅದು ನಿಜ ಎಂದು ತಿಳಿದಿದ್ದು ಒಮ್ಮೆ ಪಕ್ಕಕ್ಕೆ ತಿರುಗಿ ನೋಡಿದಾಗ ಮುದ್ದಾದ ನನ್ನ ಪತ್ನಿ ಸ್ಕೂಟಿ ಗಾಡಿಯ ಮೇಲೆ ಕುಳಿತು ಮಾತನಾಡುತ್ತಿದ್ದಾಳೆ .. !!!!!!
ವಿಚಿತ್ರ ಆಶ್ಚರ್ಯ ನನ್ನನ್ನು ನಾನೇ ನಂಬಲಾಗದ ಪರಿಸ್ಥಿತಿ ಎದುರಾದಂತೆ .. ಆಗ ಹೆಂಡತಿಗೆ ಮುದ್ದು ಮುದ್ದು ಮಾತುಗಳ ಜೊತೆ ಸತ್ಯವನ್ನು ಹೇಳಿಯೇ ಬಿಟ್ಟೆ .. ಚಿನ್ನು ಡಿಯರ್ ನಾನು ಚೀಟಿಯನ್ನು ಕಳೆದುಕೊಂಡೆ .. ಈಗ ಯಾವ ಯಾವ ಸಾಮಾಗ್ರಿಗಳು ಬೇಕು ಎಂದು ನೆನಪಿಲ್ಲ.. ಆಗವಳು ಹೇಳಿದಳು ಆಯ್ಯೋ ನನ್ನ ಬಂಗಾರಿ ನನ್ನ ಮುದ್ದು ಇಲ್ಲೇ ಇದೆ ನೋಡು ಆ ಉದ್ದವಾದ ಪಟ್ಟಿ.. ನೀನು ಮನೆಯಲ್ಲೇ ಬಿಟ್ಟು ಹೋಗಿದ್ದೆ .. ನಾನು ಸಹ ನೀನ್ಯಾಕೋ ಬರುವುದು ತಡ ಆಯಿತಲ್ಲ ಎಂದು ಒಮ್ಮೆ ಮನೆಯ ಬಾಗಿಲು ತೆಗೆದು ರಸ್ತೆಯ ಕಡೆ ನೋಡಿದಾಗ , ಎದುರಿನ ಮನೆಯವರು ನೀನಿಲ್ಲಿ ಇರುವುದನ್ನು ಹೇಳಿದರು .. ಸರಿ ನಾನು ಸಹ ಯೋಚಿಸಿದೆ ನಿನ್ನ ಸ್ಕೂಟರಿನ ಪೆಟ್ರೋಲ್ ಖಾಲಿ ಆಗಿರಬಹುದು ಎಂದು , ನಾನು ಒಂದು ಬಾಟಲ್ ಅಲ್ಲಿ ಪೆಟ್ರೋಲ್ ಅನ್ನು ಬರುವಾಗ ದಾರಿಯಲ್ಲಿಯೇ ನಮ್ಮ ಮನೆಯ ರಸ್ತೆ ಕೊನೆಯ ತಿರುವಿನಲ್ಲಿ ಇರುವ ಪೆಟ್ರೋಲ್ ಬಂಕ್ ಅಲ್ಲಿ ತುಂಬಿಸಿಕೊಂಡು ಬಂದೆ ಎಂದು ಹೇಳುತ್ತಾ ಮತ್ತೆ ನನ್ನತ್ತ ಪ್ರೀತಿಯಿಂದ ನೋಡುತ್ತಾ ಹೇಳಿದಳು .. ಹಾಗು ಒಮ್ಮೆ ತುಸು ಮೆಲ್ಲನೇ ನಕ್ಕಳು.. ಆ ನಗು ಮತ್ತೆ ನನಗೆ ಹಳೆಯ ನೆನಪುಗಳು .. ಅದೇ ಪದೇ ಪದೇ ಆ ದಿನ ಅವಳು ನಕ್ಕಿದ್ದು ಏಕೆ ಎಂದು.. :)
ವಾಸ್ತವತೆಗೆ ಮರಳಿದೆ ಮತ್ತೆ ಚಿಂತೆ ಕಾಡಿತು .. ಸಾಮಾಗ್ರಿಗಳ ಇಲ್ಲಿ ನನ್ನ ಹೆಂಡತಿ ಬಳಿ ಇರುವಾಗ , ನಾನು ಯಾವ ಚೀಟಿಯನ್ನು ಕಳೆದುಕೊಂಡೆ .. ಕಚೇರಿ ಕೆಲಸ ಮುಗಿಸಿ ಬರುವಾಗ ನನ್ನ ಕೈಯಲ್ಲಿ ಇದ್ದ ಚೀಟಿ ಯಾವುದು ಎಂದು ನೆನಪೇ ಆಗುತ್ತಿಲ್ಲ.. ನನ್ನವಳು ಮತ್ತೆ ಕೇಳಿಯೇ ಬಿಟ್ಟಳು ಯಾವ ಚೀಟಿ ಕಳೆದುಕೊಂಡೆ ನೆನಪು ಮಾಡಿಕೊ ಎಂದು .. ಆದರೆ ನನ್ನ ಸ್ಥಿತಿ ನೋಡಿ ಅದೇಕೋ ಮತ್ತೊಮ್ಮೆ ಮೆಲ್ಲನೇ ನಕ್ಕಳು .. ಆ ನಗು ನನ್ನನ್ನು ಮತ್ತೆ ಹಳೆಯ ನೆನಪುಗಳತ್ತ ಕರೆಯೋಯ್ಯಿತ್ತಾ ಆ ದಿನ ಏಕೆ ನನ್ನವಳು ನನ್ನ ನೋಡಿ ನಕ್ಕಿದ್ದು ಎಂದು .. ಆದರೆ ಈ ಕ್ಷಣ ಅದಕ್ಕೆ ಉತ್ತರ ಸಿಕ್ಕಿತು ನಾನು ಏನನ್ನೇ ಮರೆತರು ಸಹ ಅದರ ನೆನಪು ಮಾಡಿಸುವ ನನ್ನ ಹೆಂಡತಿಯ ಮುದ್ದಾದ ನಗು , ಅವಳ ಕಣ್ಣುಗಳಲ್ಲಿ ಕಾಣುವ ಪ್ರೀತಿ , ಸೊಗಸಾದ ಕೇಶರಾಶಿ , ಆಕೆಯ ಸಿಹಿಯಾದ ಸುಂದರ ತುಟಿಗಳು , ನನ್ನ ಪ್ರೀತಿ ಮಾತುಗಳನ್ನು ಕೇಳುವ ಕಿವಿಗಳು , ಮೆತ್ತನೆಯ ಗಲ್ಲ , ನಾನು ಅದನ್ನು ಹಿಡಿದು ಮುದ್ದಿಸುವಾಗ ಏನ್ ನಲ್ಲ ನೀನ್ ಈ ದಿನ ತುಂಬಾ ಖುಷಿಯಾಗಿದ್ದಿಯ ಎನ್ನುವ ಮಾತುಗಳು , ಅವಳ ಬೆಳ್ಳನೆಯ . ಬಣ್ಣ , ಸೀರೆಯಲ್ಲಿ ಸುಂದರವಾಗಿ ಕಾಣುವ ಅವಳು ಸಣ್ಣ ಸೊಂಟ , ನನ್ನ ಪ್ರೀತಿಯಿಂದ ಕೂಗುತ್ತಾ ಹಾಡುವ ಅವಳ ಕಂಠ... ಎಲ್ಲವನ್ನು ಸೇರಿಸಿ ನನ್ನ ಮುದ್ದಾದ ಹೆಂಡತಿಯ ಸೌಂದರ್ಯ ರಾಶಿಯನ್ನು ವರ್ಣಿಸುತ್ತ , ಉದ್ದನೆಯ ಹಾಳೆಯಲ್ಲಿ ಬರೆದ ಹಾಡಿನ ಚೀಟಿಯು ಕಳೆದು ಹೋಗಿದ್ದು ಎಂದು ನೆನಪಾಯಿತು.. ಇದನ್ನು ಅವಳಿಗೆ ಹೇಳಿದ್ದಕ್ಕೆ ಇರಲಿ ಬಿಡು ಮತ್ತೆ ಬೇರೆ ಬರೆದರಾಯಿತು .. ನೀನ್ಯಾಗೆ ಆ ಚಿಂತೆ ಈಗ ಹಾಗು ಈ ಮಾತುಗಳನ್ನು , ನಿನ್ನ ಕವನಗಳನ್ನು ದಿನವೂ ಕೇಳ್ತಾನೆ ಇದ್ದೇನೆ .. ನನ್ನ ಮೇಲೆ ಎಷ್ಟು ಪ್ರೀತಿ ಇದೆ ಅಂತ ಗೊತ್ತು .. ಈಗ ಆ ಹಾಡಿನ ಯೋಚನೆ ಮಾಡುತ್ತಾ ಇಲ್ಲಿ ನಿಂತರೆ ಅಂಗಡಿಯವರು ಬಾಗಿಲು ಮುಚ್ಚಿ ಮನೆಗೆ ಹೋಗ್ತಾರೆ .. ಅದಕ್ಕೆ ಮೊದಲು ಬೇಕಾದ ಎಲ್ಲಾ ವಸ್ತುಗಳನ್ನು ಖರೀದಿಸಬೇಕು ಅಂತ ಪ್ರೀತಿಯಿಂದಲೇ ಹೇಳುತ್ತಾ ನಕ್ಕಳು .. ಆಗ ಆ ದಿನದ ನಗು ಮತ್ತು ಈ ದಿನದ ನಗು ಎರಡರ ನಡುವಿನ ಪ್ರೀತಿಯು ಮತ್ತು ನನ್ನ ಪರಿಸ್ಥಿತಿ ಹೇಗೆ ಇದ್ದರೂ ಸಹ ನಗುನಗುತ್ತಾ ಎಲ್ಲವನ್ನು ಉತ್ತಮವಾಗಿ ಲೆಕ್ಕಹಾಕಿ , ನನಗೆ ಯಾವ ರೀತಿಯ ತೊಂದರೆಯೂ ಆಗದಂತೆ ಸಂಸಾರ ನಡೆಸುವ ಆವಳ ಜಾಣ್ಮೆಯನ್ನು ತಿಳಿದು ಮತ್ತಷ್ಟು ಪ್ರೀತಿ ಹುಟ್ಟಿತು .. ಇರುವ ಸ್ಥಳದೆಲ್ಲೇ ಅವಳನ್ನು ಬಿಗಿಯಾಗಿ ತಬ್ಬಿಕೊಂಡು ಮುತ್ತಿಡೋಣ ಎನ್ನುವಷ್ಟರಲ್ಲಿ , ನನ್ನ ಹೆಂಡತಿಯ ಸ್ಕೂಟಿ ಗಾಡಿಯ ಕನ್ನಡಿಯಲ್ಲಿ ಒಂದು ಹಾಳೆಯು ನನ್ನದೇ ಸ್ಕೂಟರ್ ಚಕ್ರದ ಕಡ್ಡಿಗಳ ನಡುವೆ ಸಿಕ್ಕಿ ಹಾಕಿಕೊಂಡಿರುವುದು ಕಾಣಿಸಿತು .. ಒಮ್ಮೆ ತಿರುಗಿ ನೋಡಿದೆ ಅದು ಅಲ್ಲಿಯೇ ಇತ್ತು .. ತುಂಬಾ ತುಂಬಾ ಖುಷಿಯಿಂದ ಅದನ್ನು ಕೈಯಲ್ಲಿ ಎತ್ತಿಕೊಂಡು ನನ್ನ ಹೆಂಡತಿ ಕಡೆ ತಿರುಗಿ ಹೇಳಿದೆ ನೋಡಿಲ್ಲಿ ಚಿನ್ನು ಡಿಯರ್ ನಮ್ಮ ಪ್ರೀತಿ ಎಷ್ಟು ಗಟ್ಟಿ ಅನ್ನೋಕ್ಕೆ ಇದೆ ಸಾಕ್ಷಿ ಇದೆ.. ಆ ದೇವರು ನಿಜವಾದ ಪ್ರೇಮಿಗಳ ಎಂದು ಕೈ ಬಿಡೋದಿಲ್ಲ .. ಯಾವಾಗಲು ಕಾಪಾಡ್ತಾನೆ .. ಆಗಾಗ ಸ್ವಲ್ಪ ಕಷ್ಟ ಅನ್ನಿಸಿದರೂ ಸಹ ಆಗುವುದೆಲ್ಲಾ ಒಳ್ಳೆಯದಕ್ಕೆ ಆನ್ನೋದು ಇದಕ್ಕೆ ನೋಡಿಲ್ಲಿ.. ನನ್ನ ಕೈಜಾರಿ ಬಿದ್ದು ಹೋಗಿದ್ದ ಹಾಡಿನ ಚೀಟಿ ಚಕ್ರದಲ್ಲಿ ಸಿಕ್ಕಿ ಹಾಕಿಕೊಂಡಿರಬೇಕು ಅನ್ನಿಸುತ್ತೆ .. ಇರು ಚಿನ್ನು ಈಗಲೇ ನೋಡಿ ಹೇಳುವೆ ಎಂದು ಆ ಚೀಟಿಯನ್ನು ಬಿಚ್ಚಿ ನೋಡಿದೆ .. ಆಗ ಎಲ್ಲಿಲ್ಲದ ಸಂತಸ ಖುಷಿ ತಡೆಯಲು ಸಾಧ್ಯವಿಲ್ಲದಷ್ಟು ಮಹದಾನಂದ .. ಆಹಾ ಅದೆಂತಹಾ ಖುಷಿ .. ಅಬ್ಬಬ್ಬಾ .. ಒಮ್ಮೆ ನನ್ನ ಮೆಚ್ಚಿನ ಶ್ರೀ ಗಣೇಶನನ್ನು ನೆನೆಯುತ್ತ "ಓಂ ಶ್ರೀ ಗಣೇಶಾಯ ನಮಃ" ಎಂದು ಮನದಲ್ಲೇ ಹೇಳಿಕೊಂಡು ಒಮ್ಮೆ ಜೈ ಹನುಮಾನ್ ಎಂದು ಮನಸ್ಸನ್ನು ಗಟ್ಟಿ ಮಾಡಿಕೊಂಡು , ಹಾಡನ್ನು ಅಲ್ಲಿಯೇ ಆ ರಸ್ತೆಯಲ್ಲಿ ತಂಪಾದ ಮರದ ಕೆಳಗೆ ನಿಂತು , ಎಷ್ಟೇ ಸದ್ದು ಗದ್ದಲ ಇದ್ದರೂ ನನಗಲ್ಲಿ ನನ್ನ ಹೆಂಡತಿ ಬಿಟ್ಟರೆ ಬೇರಾರು ಇಲ್ಲ ಎನ್ನುವಷ್ಟು ಮೌನದ ಸುಖ .. ಹಾಗು ಪದೇ ಪದೇ ಅವಳ ನಗು .. ಎಲ್ಲವು ನನ್ನನ್ನು ಜೋರಾಗಿ ಖುಷಿಯಿಂದ , ಹೃದಯದಾಳದಿಂದ ಹಾಡುವಂತೆ ಮಾಡಿತು .. ಆ ಹಾಡು ಹೀಗಿದೆ ಇಲ್ಲಿ ನೋಡಿ ಒಮ್ಮೆ ಎಲ್ಲರೂ ...!!!!!!!!!!!

ಲವ್ ಯು ಜಾಣೇ... ನನ್ನ ಹೃದಯದ ಮೇಲಾಣೆ... :)

ತಂಪಾದ ವಾತಾವರಣ
ಎಂದೂ ಇಲ್ಲದ ಮೌನ
ನನ್ನಾಕೆಯೂ ತುಸು ನಕ್ಕಳು
ಕಾರಣ ಏನೆಂದು ಇನ್ನೂ ತಿಳಿದಿಲ್ಲ


ಲವ್ ಯು ಜಾಣೇ... ನನ್ನ ಹೃದಯದ ಮೇಲಾಣೆ... :)

ಮರೆತರು ನಾನು ಆಗಾಗ
ನಗ್ತಾಳೆ ನನ್ನ ಹೆಂಡತಿ
ಅಹಹ ಅದೇನು ಸುಖ
ಅವಳ ಆ ನಗು ಮುಖ


ಲವ್ ಯು ಜಾಣೇ... ನನ್ನ ಹೃದಯದ ಮೇಲಾಣೆ... :)

ಪ್ರೀತಿಯಲ್ಲಿ ಐಶ್ವರ್ಯ
ರೀತಿಯಲ್ಲಿ ಭಾರತೀಯ
ಹಾಡಿದರೆ ಕನ್ನಡದ ಕೋಗಿಲೆ
ಸೌಂದರ್ಯ ದೇವತೆ ನನ್ನ ನಲ್ಲೆ


ಲವ್ ಯು ಜಾಣೇ... ನನ್ನ ಹೃದಯದ ಮೇಲಾಣೆ... :)

ಮಸನ್ನು ಇವಳದ್ದು ಬಲು ಮೆತ್ತ
ಕೆನ್ನೆ ಕೆಂಪು ನನ್ನ ನೋಡಿ ನಾಚುತ್ತಾ
ಯಾರೇ ಇರಲಿ ಚಿನ್ನು ನಿನ್ನ ಸುತ್ತ ಮುತ್ತ
ಕೊಡ್ತೀನಿ ನಾನು ನಿನಗೊಂದು ಸಿಹಿ ಮುತ್ತ


ಲವ್ ಯು ಜಾಣೇ... ನನ್ನ ಹೃದಯದ ಮೇಲಾಣೆ... :)

|| ಪ್ರಶಾಂತ್ ಖಟಾವಕರ್ ||

Monday, 2 April 2012

ಗುಂಡಿನಾಟ


ಗುಂಡಿನಾಟ
********************

ಮುಂಜಾನೆಯಲ್ಲೊಂದು ಗುಂಡಿನಾಟ
ಅಣ್ಣನ ಜೊತೆಯಲ್ಲಿ ಆಡಲು ಕೂಗುತ..!!

ಮುಂಜಾನೆಯ ಮಂಜಿನ ಹನಿ
ಜುಮು ಜುಮು ಚಳಿ ಚಳಿ ಗಾಳಿ
ಬಾ ಇಲ್ಲಿ ಓಡೋಡಿ ಹೋಗೋಣ
ಮೈದಾನ ಸೇರಿ ಆಟವ ಆಡೋಣ

ಮುಂಜಾನೆಯಲ್ಲೊಂದು ಗುಂಡಿನಾಟ
ಅಣ್ಣನ ಜೊತೆಯಲ್ಲಿ ಆಡಲು ಕೂಗುತ..!!

ಕಬ್ಬಿಣದ ಗುಂಡನ್ನು ಎತ್ತೆಸೆಯುತ
ಬಿದ್ದ ಜಾಗದ ದೂರದಳತೆ ಹಾಕುತ
ಗುರುತು ಇಡಬೇಕು ನನ್ನಳತೆಯನ್ನು
ನಾನೆಸೆದ ಕಬ್ಬಿಣದ ಗುಂಡಿನ ದೂರ

ಮುಂಜಾನೆಯಲ್ಲೊಂದು ಗುಂಡಿನಾಟ
ಅಣ್ಣನ ಜೊತೆಯಲ್ಲಿ ಆಡಲು ಕೂಗುತ..!!

ನೀನೆಸೆಯುವ ಮುನ್ನವೇ ಮರೆಯದಂತೆ
ಮತ್ತೊಮ್ಮೆ ಲೆಕ್ಕ ಹಾಕು ಗುಂಡಿನ ಭಾರ
ಹೆಚ್ಚು ಕಡಿಮೆ ಇದ್ದರೆ ಆಗುವ ಲೆಕ್ಕಾಚಾರ
ತಪ್ಪಿದರದು ಪಂದ್ಯವಲ್ಲ ಈ ಗುಂಡಿನಾಟ

ಮುಂಜಾನೆಯಲ್ಲೊಂದು ಗುಂಡಿನಾಟ
ಅಣ್ಣನ ಜೊತೆಯಲ್ಲಿ ಆಡಲು ಕೂಗುತ..!!

|| ಪ್ರಶಾಂತ್ ಖಟಾವಕರ್ ||

http://www.poetryofpictures.blogspot.com/