Wednesday 30 November 2011

ಕನಸಿನ ರಾಣಿ


ಲವ್ ಮಾಡ್ಬೇಕ್ ಅಂತ ಮನಸ್ಸಾಯಿತಲ್ಲ
ಹುಡುಗಿನೇ ಸಿಗದೇ ತಲೆ ಕೆಟ್ಟೋಯಿತಲ್ಲ

ಕನಸಿನ ರಾಣಿ
``````````````````
ಲವ್ ಮಾಡ್ಬೇಕ್ ಅಂತ ಮನಸ್ಸಾಯಿತಲ್ಲ
ಹುಡುಗಿನೇ ಸಿಗದೇ ತಲೆ ಕೆಟ್ಟೋಯಿತಲ್ಲ
ಹಿಂಗ್ಯಾಕೋ ಹಿಂಗ್ಯಾಕೋ ಗೊತ್ತೇ ಇಲ್ಲ
ಕನಸೆಲ್ಲ ಅವಳೇನೆ, ಎದುರಲ್ಲಿ ಕಾಣೋದಿಲ್ಲ

ಏತಕೋ ಈ ರೀತಿ 
ಮನದಲಿ ಪಜೀತಿ
ಎಲ್ಲಿರುವಳು ಆ ಗೆಳತಿ
ನನ್ನ ಕನಸಿನ ಸಂಗಾತಿ

ಲವ್ ಮಾಡ್ಬೇಕ್ ಅಂತ ಮನಸ್ಸಾಯಿತಲ್ಲ
ಹುಡುಗಿನೇ ಸಿಗದೇ ತಲೆ ಕೆಟ್ಟೋಯಿತಲ್ಲ

ಕೆಂಪು ಸೀರೆ ಉಟ್ಟು 
ಕನಕಾಂಬರ ತಲೆಯಲ್ಲಿ ಇಟ್ಟು
ಕಾಸಗಲ ಕುಂಕುಮ
ಹಣೆಗದುವೆ ಸಿಂಗಾರ
ತಳುಕಿ ಬಳುಕಿ ನಡೆಯುವ
ಅದೇನು ಚೆಂದ ವಯ್ಯಾರ

ಲವ್ ಮಾಡ್ಬೇಕ್ ಅಂತ ಮನಸ್ಸಾಯಿತಲ್ಲ
ಹುಡುಗಿನೇ ಸಿಗದೇ ತಲೆ ಕೆಟ್ಟೋಯಿತಲ್ಲ

ಬರ್ತಾಳೆ ದಿನವೆಲ್ಲ
ನಿದ್ದೆಲ್ಲಿ ನನ್ನ ಕನಸಲ್ಲಿ
ಎದ್ದಿದ್ರೆ ಕಾಣೋಲ್ಲ
ಹುಡುಕಿದ್ರು ಸಿಕ್ಕೊಲ್ಲ

ಲವ್ ಮಾಡ್ಬೇಕ್ ಅಂತ ಮನಸ್ಸಾಯಿತಲ್ಲ
ಹುಡುಗಿನೇ ಸಿಗದೇ ತಲೆ ಕೆಟ್ಟೋಯಿತಲ್ಲ

ಹಾಲಿನಂತೆ ಬಣ್ಣ ಅವಳು ಬೆಳ್ಳಗೆ
ಸುಂದರಿಯ ಸೊಂಟ ಸ್ವಲ್ಪ ಸಣ್ಣಗೆ
ಕೊಡ್ತಾಳೆ ಅವಳೊಂದು ಕಿರುನಗೆ
ನೋಡ್ತಾಳೆ ಕಣ್ಣಿಟ್ಟು ಕಣ್ಣೊಳಗೆ
ಹಿಂಗ್ಯಾಕೋ ಹಿಂಗ್ಯಾಕೋ ಪ್ರೀತಿನೆ ಹೀಗೆ
ಕನಸಲ್ಲಿ ಮನಸಲ್ಲಿ ಅವಳೇನೆ ನನಗೆ

ಲವ್ ಮಾಡ್ಬೇಕ್ ಅಂತ ಮನಸ್ಸಾಯಿತಲ್ಲ
ಹುಡುಗಿನೇ ಸಿಗದೇ ತಲೆ ಕೆಟ್ಟೋಯಿತಲ್ಲ

ನನ್ನ ಕನಸಿನ ರಾಣಿಯು
ಕುಣಿತಾಳೆ ತಯ್ಯಾ ತಕ್ಕ
ಅವಳ ಹಾಡಿನ ಮೋಡಿಯು
ಮೈಯಲ್ಲೆಲ್ಲ ಜುಮ್ಮಾ ಜುಮ್ಕ
ಯಾರು ಇಲ್ಲ ನಮ್ಮಕ್ಕ ಪಕ್ಕ
ಆಹಾ ಚೆಲುವೆ ಎಂತಾ ಸುಖ

ಲವ್ ಮಾಡ್ಬೇಕ್ ಅಂತ ಮನಸ್ಸಾಯಿತಲ್ಲ
ಹುಡುಗಿನೇ ಸಿಗದೇ ತಲೆ ಕೆಟ್ಟೋಯಿತಲ್ಲ
ಹಿಂಗ್ಯಾಕೋ ಹಿಂಗ್ಯಾಕೋ ಗೊತ್ತೇ ಇಲ್ಲ
ಕನಸೆಲ್ಲ ಅವಳೇನೆ, ಎದುರಲ್ಲಿ ಕಾಣೋದಿಲ್ಲ

ಹಿಂಗ್ಯಾಕೋ ಹಿಂಗ್ಯಾಕೋ ಪ್ರೀತಿನೆ ಹೀಗೆ
ಕನಸಲ್ಲಿ ಮನಸಲ್ಲಿ ಅವಳೇನೆ ನನಗೆ
ಕಂಡ್ಳಲ್ಲೋ ಕಂಡ್ಳಲ್ಲೋ ನಮ್ಮೂರ ಸಂತ್ಯಾಗೆ
ಸಿಕ್ಕಳು ಕನಸಿನ ರಾಣಿಯು ಈಶ್ವರನ ಗುಡಿಯಾಗೆ

ಫೆಸ್`ಬುಕ್ ಅವಳಿಗಿಲ್ಲ, ಆರ್ಕುಟ್ ಗೊತ್ತಿಲ್ಲ
ಟ್ವೀಟರ್ ಇಟ್ಟಾವ್ಳೆ, ಕನಸಾಗೆ ಟಾರ್ಚರ್ ಕೊಡ್ತಾವ್ಳೆ

ಲವ್ ಮಾಡ್ಬೇಕ್ ಅಂತ ಮನಸ್ಸಾಯಿತಲ್ಲ
ಹುಡುಗಿನೇ ಸಿಗದೇ ತಲೆ ಕೆಟ್ಟೋಯಿತಲ್ಲ
ಲವ್ ಮಾಡ್ಬೇಕ್ ಅಂತ ಮನಸ್ಸಾಯಿತಲ್ಲ
ಹುಡುಗಿನೇ ಸಿಗದೇ ತಲೆ ಕೆಟ್ಟೋಯಿತಲ್ಲ

|| ಪ್ರಶಾಂತ್ ಖಟಾವಕರ್ ||

Sunday 27 November 2011

ಖಳ ನಾಯಕ ಆಗುವ ಆಸೆ...!!



ಖಳ ನಾಯಕ ಆಗುವ ಆಸೆ...!!
+++++++++++++++++++++++

ಹುಚ್ಚು ಆಸೆಗಳ ಬಿಡಿಸಿ ಹೇಳುವ ಆಸೆ
ಒಮ್ಮೆಯಾದರೂ ಖಳ ನಾಯಕ ಆಗುವ ಆಸೆ....!!

ಹತ್ತು ಜನರು ನನ್ನ ಹಿಂದೆ ಬರಬೇಕು..
ನಾನು ಮಾತ್ರ ಸದಾ ಮುಂದಿರಬೇಕು..
ನಾನೇ ನಾಯಕನೆಂದು ಎಲ್ಲರು ಹೇಳಬೇಕು..
ಒಪ್ಪದವರ ಹಿಡಿದು ಹೊಡೆದೆ ಒಪ್ಪಿಸಬೇಕು..

ಹುಚ್ಚು ಆಸೆಗಳ ಬಿಡಿಸಿ ಹೇಳುವ ಆಸೆ
ಒಮ್ಮೆಯಾದರೂ ಖಳ ನಾಯಕ ಆಗುವ ಆಸೆ....!!

ಕಂಡ ಕಂಡ ಜನರನ್ನು ಲೂಟಿ ಮಾಡಬೇಕು..
ಕೋಟಿ ಕೋಟಿ ಹಣವನ್ನು ಕೂಡಿ ಹಾಕಬೇಕು..
ಕೊಡದವರ ಕುತ್ತಿಗೆ ಹಿಡಿದು ಕಿತ್ತುಕೊಳ್ಳಬೇಕು..
ಕೊಟ್ಟವರ ಗುರುತು ಸಿಗದಂತೆ ಇರಬೇಕು...

ಹುಚ್ಚು ಆಸೆಗಳ ಬಿಡಿಸಿ ಹೇಳುವ ಆಸೆ
ಒಮ್ಮೆಯಾದರೂ ಖಳ ನಾಯಕ ಆಗುವ ಆಸೆ....!!

ಹುಡುಗಿಯರು ನನ್ನ ಸುತ್ತ ಸುತ್ತಬೇಕು..
ಕೇಳಿದಾಗಲೆಲ್ಲಾ ಮುತ್ತು ಕೊಡಬೇಕು..
ಕಳ್ಳನಾದರೂ ಕೃಷ್ಣನೆಂದು ಹೊಗಳಬೇಕು..
ನನ್ನ ಪ್ರೀತಿಯ ಎಲ್ಲ ಹುಡುಗಿಯರು ಮೆಚ್ಚಬೇಕು..

ಹುಚ್ಚು ಆಸೆಗಳ ಬಿಡಿಸಿ ಹೇಳುವ ಆಸೆ
ಒಮ್ಮೆಯಾದರೂ ಖಳ ನಾಯಕ ಆಗುವ ಆಸೆ....!!

ನನ್ನ ಕಂಡರೆ ಎಲ್ಲರೂ ಭಯಭೀತರಾಗಬೇಕು..
ಸಾಕ್ಷಿ ಹೇಳಲು ನಡುಗಿ ಹೆದರುವಂತಾಗಬೇಕು..
ಎಲ್ಲರೂ ನನ್ನನ್ನು ಅಣ್ಣಾ ಅಣ್ಣಾ ಎಂದು ಕರೆಯಬೇಕು..
ಭಯದಲ್ಲಿ ಎಲ್ಲರೂ ತಲೆಬಾಗಿ ನಡೆಯಬೇಕು..

ಹುಚ್ಚು ಆಸೆಗಳ ಬಿಡಿಸಿ ಹೇಳುವ ಆಸೆ
ಒಮ್ಮೆಯಾದರೂ ಖಳ ನಾಯಕ ಆಗುವ ಆಸೆ....!!

ಪೊಲೀಸರು ಹುಡುಕಲು ಹೆಚ್ಚು ಕಷ್ಟವಾಗಿರಬೇಕು..
ಅಂತಹಾ ಕೋಟೆಯಲ್ಲಿ ನಾನು ರಾಜನಾಗಿರಬೇಕು..
ನೀಲಿ ಬಣ್ಣದ ಸೈನ್ಯಕ್ಕೆ ನಾನೇ ನಾಯಕನಾಗಿರಬೇಕು..
ಎಲ್ಲರಿಗೂ ಅದೊಂದು ವಿಶೇಷ ಅವತಾರವಾಗಿ ಕಾಣಬೇಕು..

ಹುಚ್ಚು ಆಸೆಗಳ ಬಿಡಿಸಿ ಹೇಳುವ ಆಸೆ
ಒಮ್ಮೆಯಾದರೂ ಖಳ ನಾಯಕ ಆಗುವ ಆಸೆ....!!

ಮುಗಿಯದ ಆಸೆಗಳ ಪಟ್ಟಿಯು ಉದ್ದವಾಗಿರಬೇಕು..
ಆ ಬ್ರಹ್ಮ ಕೂಡ ಬರೆದ ಬರಹ ನನಗೆ ಹಿತವಾಗಿರಬೇಕು..
ವಿಷ್ಣುವಿನ ವಿರಾಟ ರೂಪದ ಶಕ್ತಿಯು ನನ್ನ ಪಾಲಾಗಬೇಕು...
ಮಾಹಾ ಶಕ್ತಿ ಶಿವನ ಮೂರನೇ ಕಣ್ಣು ನನ್ನ ಹಣೆಯಲ್ಲಿರಬೇಕು...

ಹುಚ್ಚು ಆಸೆಗಳ ಬಿಡಿಸಿ ಹೇಳುವ ಆಸೆ
ಒಮ್ಮೆಯಾದರೂ ಖಳ ನಾಯಕ ಆಗುವ ಆಸೆ....!!

|| ಪ್ರಶಾಂತ್ ಖಟಾವಕರ್ ||

(ಬೆಳ್ಳಿ ಪರದೆಯಲ್ಲಿ ನಾಯಕನಾಗಿ ನಟಿಸಲು ಆಸೆ ಇರುವವರು ಎಷ್ಟೋ ಕಲಾವಿದರು
ಆದರೆ ಖಳ ನಾಯಕ ಆಗಲು ಆಸೆ ಪಡುವವರು ತೀರಾ ಕಡಿಮೆ.. ಅಂತವರ ಕಲ್ಪನೆಯಲ್ಲಿ ಈ ಕಥೆ..)


Thursday 24 November 2011

ಹೊಸ ಪ್ರೇಮ ಬಯಸುತ...



ಅಬ್ಬಬ್ಬಾ ಪ್ರೀತಿ ತುಂಬಿದ ಕವಿತೆಗಳಿಗಿಂತ...
ಪ್ರೀತಿ ಸಿಗದ ಕವನಗಳಿಗೆ ಅದೆಷ್ಟು ಸೆಳೆತ...
ಓದುತ್ತಾ ಹೋದಂತೆಲ್ಲ ಮನದಲ್ಲಿ ಕೊರೆತ...
ಅತಿಯಾಗಿ ಇಷ್ಟ ಪಟ್ಟರೆ , ಕಣ್ಣೀರು ಸುರಿಯುತ...

ಓದುವ ಕವಿತೆಯೇ ಒದ್ದೆಯಾಗಿ ಹೊಗುತ...
ಕಹಿಯಾದ ನೆನಪನೆಲ್ಲಾ ಅಲ್ಲಿ ಅಳಿಸಿ ಹಾಕುತ...
ಹೊಸ ಕವನಕೆ ಅಲ್ಲೇ ಜಾಗವ ತೋರಿಸುತ...
ಬರೆಯಲು ಹೇಳುವುದು ಹೊಸ ಪ್ರೇಮ ಬಯಸುತ... :)

|| ಪ್ರಶಾಂತ್ ಖಟಾವಕರ್ ||

Tuesday 22 November 2011

ಕೃತ್ತಿಕ ರವೀಂದ್ರ -> ರಾಧಾ -> ಎಲ್ಲಿ ಇಲ್ಲಿ....


ಕೃತ್ತಿಕ ರವೀಂದ್ರ -> ರಾಧಾ -> ಎಲ್ಲಿ ಇಲ್ಲಿ....
-------------------------
ಪ್ರಕೃತಿ ಸೌಂದರ್ಯ ಸವಿಯಲು ಈ ರಂಭೆ
ಹತ್ತಿ ಕುಳಿತಿರುವಳು ಮರದ ಒಂದು ರೆಂಬೆ
ಲಕಲಕನೆ ಹೊಳೆಯುವ, ಜೀ ಕನ್ನಡದ ಗೊಂಬೆ

ತರ ತರ ಕನಸುಗಳ ಕಾಣುವ ರಾಧೆ ನಗುತಿರಲು
ಪ್ರವೀಣೆ ಇವಳು, ನೈಜ ನಟನೆಯನ್ನು  ಮಾಡಲು
ಶಾoತವಾಗಿ ಪ್ರಶಾಂತ ಪ್ರಕೃತಿಯನ್ನು ನೋಡಲು
ಭದ್ರವಾದ ಕೊಂಬೆಯನ್ನೇ ಹತ್ತಿರುವಳು ಹುಡುಕಲು

ರಾತ್ರಿಯಲ್ಲಿ ಕಾಣುವ ಕೃತ್ತಿಕ ನಕ್ಷತ್ರವನ್ನು ಹಗಲಲ್ಲಿ
ಧಾರಾವಾಹಿಯ ರಾಧೆ, ಜೀ ಟಿವಿಯಲ್ಲಿ ಸಂಜೆಯಲ್ಲಿ
ಎಲ್ಲಿ ಅಂತ ಹುಡುಕಲಿ ಕನ್ನಡದ ಹುಡುಗಿ ಹಳೇ ನೆನಪಲ್ಲಿ
ಇಲ್ಲಿ ಕವನದ ಮೊದಲ ಏಳು ಸಾಲಿನ ಎರಡನೇ ಅಕ್ಷರದಲ್ಲಿ

ಕೃತ್ತಿಕ ರವೀಂದ್ರ -> ರಾಧಾ -> ಎಲ್ಲಿ ಇಲ್ಲಿ....
ಸ್ವತ್`ಪ್ರೀತಿಯ ಕವಿತೆಗಳ ಸ್ಪೂರ್ತಿಯಲ್ಲಿ....
ರಾಜುರವರ ವಿಮರ್ಶೆಗಳ ನೆನಪುಗಳಲ್ಲಿ....
"ಚಿತ್ರಗಳ ಕವನ" ಪ್ರಶಾಂತನ ಮನಸ್ಸಿನಲ್ಲಿ...  :)

|| ಪ್ರಶಾಂತ್ ಖಟಾವಕರ್ ||

Saturday 19 November 2011

ಗುಡ್ಡದ ಭೂತ


caution : not for weak hearted people ....
ಎಚ್ಚರಿಕೆ : ದುರ್ಬಲ ಹೃದಯದವರು ಇದನ್ನು ಓದಬೇಡಿ....




ಗುಡ್ಡದ ಮೇಲೊಂದು
ಭೂತವು ಇದೆಯೆಂದು
ಕಂಡಿದ್ದೆ ಕನಸೊಂದು
ಹೆದರಿದ್ದೆ ನಾ ಅಂದು....

ಕನಸನ್ನು ಮತ್ತೊಮ್ಮೆ ನೆನೆದು
ಭಯದಲ್ಲಿ ಮನದಲ್ಲೇ ನೊಂದು
ಕೇಳಿದೆ ಗೆಳಯರ ನಿಜ ಏನೆಂದು
ಯಾರ ಬಳಿಯೂ ಉತ್ತರ ಸಿಗದು...

ಹೆದರದ ಗೆಳಯರೆಲ್ಲ ಕೂಡಿ
ಹಲವಾರು ಚಿಂತೆಯ ಮಾಡಿ
ಒಮ್ಮೆ ಆ ಗುಡ್ಡವನ್ನು ನೋಡಿ
ಬಂದೆವು ಅಲ್ಲಿಂದ ಓಡೋಡಿ...

ಗುಡ್ಡದ ಮೇಲೊಂದು ಬೆಳ್ಳನೆ ಆಕಾರ
ಅಲ್ಲಿತ್ತು ಮಾತಾಡೋ ಅಸ್ಥಿಪಂಜರ
ನೋಟದಲ್ಲಿ ಅದೊಂದು ವಿಚಿತ್ರ ಅವತಾರ
ಹೇಗೆ ಹೇಳೋದು ಅದರ ವಿಕಾರ ವಿಚಾರ.....

ಕುಣಿಯುತ್ತೆ ಅದು ತಯ್ಯಾ ತಕ್ಕ
ಬಂದು ನಿಲ್ಲುತ್ತೆ ನಮ್ಮಾ ಪಕ್ಕ
ಅದಕಿಲ್ಲಿ ಸಿಗುತ್ತೆ ಭಾರೀ ಸುಖ
ನಮಗಂತೂ ಇಲ್ಲಿ ಅಯ್ಯೋ ದುಃಖ....

ಕರಿಯುತ್ತೆ ನಮ್ಮ ಹೆಸರ
ತರಿಸುತ್ತೆ ನಮಗಿಲ್ಲಿ ಬೆವರ
ತಿರುಗಿದರಿಲ್ಲಿ ಬಲು ಘೋರ
ಇರುತ್ತೆ ನಮ್ಮ ಬೆನ್ನ ಹತ್ತಿರ...

(ಕಥೆ ಇನ್ನೂ... ಇದೆ.. ಮುಂದುವರೆಯುವುದು.).. 

|| ಪ್ರಶಾಂತ್ ಖಟಾವಕರ್ ||

+++++++++++++++++++++++++++++++++++




ಗುಡ್ಡದ ಮೇಲೊಂದು
ಭೂತವು ಇದೆಯೆಂದು
ಕಂಡಿದ್ದೆ ಕನಸೊಂದು
ಹೆದರಿದ್ದೆ ನಾ ಅಂದು....


ಕನಸನ್ನು ಮತ್ತೊಮ್ಮೆ ನೆನೆದು
ಭಯದಲ್ಲಿ ಮನದಲ್ಲೇ ನೊಂದು
ಕೇಳಿದೆ ಗೆಳಯರ ನಿಜ ಏನೆಂದು
ಯಾರ ಬಳಿಯೂ ಉತ್ತರ ಸಿಗದು...


ಹೆದರದ ಗೆಳಯರೆಲ್ಲ ಕೂಡಿ
ಹಲವಾರು ಚಿಂತೆಯ ಮಾಡಿ
ಒಮ್ಮೆ ಆ ಗುಡ್ಡವನ್ನು ನೋಡಿ
ಬಂದೆವು ಅಲ್ಲಿಂದ ಓಡೋಡಿ...


ಗುಡ್ಡದ ಮೇಲೊಂದು ಬೆಳ್ಳನೆ ಆಕಾರ
ಅಲ್ಲಿತ್ತು ಮಾತಾಡೋ ಅಸ್ಥಿಪಂಜರ
ನೋಟದಲ್ಲಿ ಅದೊಂದು ವಿಚಿತ್ರ ಅವತಾರ
ಹೇಗೆ ಹೇಳೋದು ಅದರ ವಿಕಾರ ವಿಚಾರ.....


ಕುಣಿಯುತ್ತೆ ಅದು ತಯ್ಯಾ ತಕ್ಕ
ಬಂದು ನಿಲ್ಲುತ್ತೆ ನಮ್ಮಾ ಪಕ್ಕ
ಅದಕಿಲ್ಲಿ ಸಿಗುತ್ತೆ ಭಾರೀ ಸುಖ
ನಮಗಂತೂ ಇಲ್ಲಿ ಅಯ್ಯೋ ದುಃಖ....


ಕರಿಯುತ್ತೆ ನಮ್ಮ ಹೆಸರ
ತರಿಸುತ್ತೆ ನಮಗಿಲ್ಲಿ ಬೆವರ
ತಿರುಗಿದರಿಲ್ಲಿ ಬಲು ಘೋರ
ಇರುತ್ತೆ ನಮ್ಮ ಬೆನ್ನ ಹತ್ತಿರ...

(ಕಥೆ ಇನ್ನೂ... ಇದೆ.. ಮುಂದುವರೆಯುವುದು.).. 

|| ಪ್ರಶಾಂತ್ ಖಟಾವಕರ್ ||

Wednesday 16 November 2011

ಪ್ರೇಮ ಪತ್ರದ ಒಂದು ಪ್ರಶ್ನೆ ?



ಪ್ರೀತಿಸು ಎಂದು ನಾನೆಂದರೆ..
ಪ್ರೇಮಪತ್ರ ಕೊಡು ಮೊದಲು ಎನ್ನುವಳು...
ಅದನ್ನು ನಾನು ಬರೆದು ಕೊಟ್ಟರೆ..
ಅರ್ಥವಾಗದು ಎಂದು ಅವಳು ಹೇಳುವಳು...

ಬೇರೆಯವಳಿಗೆ ನಾನು ಪತ್ರ ಬರೆದರೆ..
ಅವಳು ಅಳುವಳು , ಹತ್ರ ಬಂದು ಕೇಳುವಳು...
ನನಗೆ ಬರೆದು ಕೊಟ್ಟಿದ್ದನ್ನು ಅವಳಿಗೂ ಬರೆದಿರುವೆಯಾ... ?
ಅದನ್ನು ಅವಳು ನೋಡಿ..  ಏನೇಂದಳು ..?.... :)

|| ಪ್ರಶಾಂತ್ ಖಟಾವಕರ್ ||

Saturday 12 November 2011

ಓ ಗೆಳಯಾ ನಿನ್ನ ನೆನಪು ಕಾಡುತಿದೆ...


ಓ ಗೆಳಯಾ ನಿನ್ನ ನೆನಪು ಕಾಡುತಿದೆ...
ಇಷ್ಟ ಇದೆ ಅಂತ ಸ್ನೇಹ ಮಾಡಿದೆ...
ಕಷ್ಟ ಇದೆ ಅಂತ ನೀನು ಹೇಳಿದೆ...
ನಷ್ಟ ಬೇಡ ಅಂತ ಸಾಲ ನೀಡಿದೆ..

ಮೋಸ ಮಾಡಿ ಏಕೆ ಓಡ್ ಹೋದೆ..
ನಿನ್ನ ತುಂಬಾ ತುಂಬಾ ನಂಬಿದ್ದೆ...
ಅದೆಲ್ಲವನ್ನು ನೀನಿಲ್ಲಿ ಸುಳ್ಳಾಗಿಸಿದೆ..
ಇಂದು ನಿನ್ನ ನೆನಪು ಬಹಳ ಕಾಡುತಿದೆ.. 

ನಿನ್ನನ್ನು ಹುಡುಕಾಡಿ ಸಾಕಾಗಿ ಹೋಗಿದೆ..
ಎಲ್ಲಿದ್ದರು ಬೇಗನೆ ಬಂದು ಬಿಡಬಾರದೇ...
ನಾ ಕೊಟ್ಟ ಹಣವನ್ನು ಮರಳಿ ಕೊಡಬಾರದೇ...
ನೀ ಹೀಗೆ ನನ್ನ ಸ್ನೇಹಕ್ಕೆ ಮೋಸ ಮಾಡಬಹುದೇ..

ನೀ ಬೇಗನೆ ಬಂದು ನನ್ನ ನೋಡು...
ನಾ ಕೊಟ್ಟ ಸಾಲ ವಾಪಾಸ್ ಮಾಡು..
ಬಡ್ಡಿಯ ಚಿಂತೆಯನ್ನು ಮರೆತುಬಿಡು...
ನಾ ಕೊಟ್ಟ ದುಡ್ಡನ್ನು ಅಷ್ಟೇ ಬೇಗ ಕೊಡು... 

|| ಪ್ರಶಾಂತ್ ಖಟಾವಕರ್ ||

Friday 11 November 2011

ಗಾಜಿನ ಮನೆ...


ಮನಸ್ಸು ಎಂಬುದು ಒಂದು ಗಾಜಿನ ಮನೆ...
ಒಡೆದು ಹೋದರೆ ಬಲು ನಷ್ಟ ನಮಗೆ ತಾನೇ....
ಜೋಪಾನವಾಗಿ ನೋಡಿಕೊಳ್ಳಬೇಕು ತಾನೇ...
ಎಲ್ಲಾ ತುಂಬಿದರೆ , ಭಾರ ಹೆಚ್ಚುವುದು ತಾನೇ...

ಕೊಳಕು ಇದ್ದರೆ , ತೊಳೆದು ಇಡಬೇಕು ತಾನೇ...
ಆಗಲೇ ಗಾಜಿನಂತೆ ಹೊಳೆಯುವುದು ತಾನೇ...
ಎಲ್ಲರು ಮೆಚ್ಚುವುದು ಅಂತಹಾ ಮನಸ್ಸನ್ನೇ...
ಮನಸ್ಸು ಎಂಬುದು ಒಂದು ಗಾಜಿನ ಮನೆ...

ನಾನಂತೂ ಅದನ್ನು ಸ್ವಚ್ಚವಾಗಿ ಇಟ್ಟಿದ್ದೇನೆ... :)

|| ಪ್ರಶಾಂತ್ ಖಟಾವಕರ್ ||

Wednesday 9 November 2011

Bhumika Ak


ಹಸಿರುಟ್ಟ ಹೆಣ್ಣಿಲ್ಲಿ ನೋಡಲೆಷ್ಟು ಚೆಂದ
ಅಲ್ಪ ಅಲಂಕಾರದೇ ಹೆಚ್ಚಿರುವ ಅಂದ
ಮೀನಿನಂತಹ ನಯನದ ನೋಟವೇ ಚೆಂದ
ಮುದ್ದಾದ ಅಧರದ ಕೆಂಬಣ್ಣದ ಮೋಹಕ ಅಂದ

ಹೂವ ಬಣ್ಣ ಮಿಂಚು ಮೆರಗುಗಳೇ ಚೆಂದ
ಹೊಳೆವ ಕೇಶರಾಶಿ ಮನವ ಸೆಳೆವ ಅಂದ
ಒಂದೇ ಸರದಲ್ಲಿ ಕಾಣುತಿದೆ ಕೊರಳಿನ ಚೆಂದ
ಚಿಕ್ಕದೊಂದು ಬೊಟ್ಟು ಉದ್ದದ ಕಿವಿಯೋಲೆ ಅಂದ

ಕನಸ ಲೋಕದಿ ಮೂಡುವ ಅಲೆಗಳೇ ಚೆಂದ
ನೋಡಿರಿಲ್ಲಿ ಮಂಗಳೂರು ಮತ್ಸ್ಯ ಕನ್ಯೆಯಾ ಅಂದ
ಬೆಂಗಳೂರಿನ ಬೇಡಗಿಯ ರೂಪವಿಲ್ಲಿ ಚೆಂದ
ಅಂದ ಚೆಂದ , ಚೆಂದ ಅಂದ , ವರ್ಣನೆಗೂ ನಿಲುಕದ

ಅಪರೂಪದ ಭಾವಚಿತ್ರದಲ್ಲಿನ ಭಾವನೆಗಳ ಬರೆಯುತ್ತ
ಕಲ್ಪನೆಯಲ್ಲಿ  ಮನದ ಮಿಡಿತ , ಪದಗಳ ಸೇರಿಸುತ್ತ
ಅಂದ ಚೆಂದಗಳ ಚಿತ್ತಾರವ ಕಾವ್ಯದಿ ಸೆರೆ ಹಿಡಿಯುತ್ತ...
ಬರೆದಿರುವ ಶುಭವನ್ನು ಕೋರುತ್ತ ಈ ಗೆಳಯ ಪ್ರಶಾಂತ.... :)

|| ಪ್ರಶಾಂತ್ ಖಟಾವಕರ್ ||

ಕಲ್ಪನೆಗಳಿಗೆಲ್ಲಾ ನಾನೇ ಇಲ್ಲಿ ಕಥೆಗಾರ.... :)


ಜಂಭದ ಭಂಗಿಯೊಳು ನೀ ನಿಂತಿರಲು...
ಜಂಭದ ಆ ಹುಡುಗಿಯು ನೆನಪಾದಳು...
ಜಂಭದಾ ಹುಡುಗಿನಾ ಎಂದು ಕೇಳಲು...
ಬಿಂದಾಸ್ ಹುಡುಗಿ ಎಂದು ನೀ ಹೇಳಲು..
ಆ ನನ್ನ ಬೆಡಗಿಯು ನಿನ್ನಿಂದ ಬೇರಾದಳು..

ಎಲ್ಲಿಂದಲೋ ಬರುತಿವೆ ಹಳೆ ನೆನಪುಗಳು...
ಯಾರೋ ಒಬ್ಬಳು.. ಗೆಳತಿಯ ನೆನಪುಗಳು..
ಕೈ ಬಳೆಗಳ ನೋಡಲು.. ಬಂದವು ನೆನಪುಗಳು..
ಹುಡುಕಿದಾಗ ಮನದೊಳು.. ಕಾಣದ ನೆನಪುಗಳು..
ಅಲ್ಲೆಲ್ಲೋ ಬಚ್ಚಿಟ್ಟುಕೊಂಡಿವೆ ಆ ಎಲ್ಲಾ ನೆನಪುಗಳು..

ಎರಡು ಮೊಳ ಹೂವನ್ನು ಮುಡಿದು...
ನಾಲ್ಕು ಬಳೆಗಳ ಮಣಿಕಟ್ಟಲ್ಲಿ ಹಿಡಿದು..
ಮುತ್ತಿನ ಸರವಾ ಕೊರಳಲ್ಲಿ ಬಿಗಿದು..
ಹಣೆಯಲ್ಲಿ ಇರುವ ಸಿಂಧೂರವು ಸಣ್ಣದು..
ಶೃಂಗಾರ ಸೀರೆಯು ಸೊಗಸಾಗಿರುವುದು..

ನೀ ಕಂಡ ಹಾಗೆ ನನ್ನ ನೆನಪುಗಳು ಇಲ್ಲ..
ಆ ನನ್ನ ಬೆಡಗಿಯ ಸ್ವರೂಪವೇ ಇದಲ್ಲ....
ಎಲ್ಲೆಲ್ಲೋ ಕಾಣುವ ಆ ಕಪ್ಪು ಛಾಯೆ ನೀನಲ್ಲ..
ಆ ನಿನ್ನ ಕೈ ಬಳೆಗಳು ಮಾತ್ರ ನನ್ನ ಕಾಡುತಿವೆಯಲ್ಲ..
ಕನಸಲ್ಲಿ ಕಾಣುವ ಆ ನನ್ನ ಛಾಯೆಯ ನೆನಪಾಯಿತಲ್ಲ....

ನೆನಪುಗಳು ಮಾತ್ರ ಇರಲು ನನ್ನ ಹತ್ತಿರ
ನಾನು ಹೇಗೆ ಹೇಳಲಿ ಆ ಗೆಳತಿಯ ವಿವರ..
ಎಲ್ಲವೂ ಮರೆತು ಮುಗಿದು ಹೋಗಿದೆ ದೂರ...
ಅವಳ ನೆನಪಿನಲ್ಲಿ ನನ್ನ ಮನವು ಈಗ ಭಾರ...
ಕನಸಲ್ಲಿ ಕರಿ ಛಾಯೆಗಳೇ ಸಾವಿರ ಸಾವಿರ...

ಆ ಛಾಯೆಯ ವರ್ಣನೆಯ ಕಲ್ಪನೆಗಳಿಗೆಲ್ಲಾ ನಾನೇ ಇಲ್ಲಿ ಕಥೆಗಾರ.... :)

|| ಪ್ರಶಾಂತ್ ಖಟಾವಕರ್ ||

Tuesday 8 November 2011

ಹಿಂಗ್ಯಾಕೆ ನೀನ್ಯಾಕೆ ನೆನಪಾಗ್ತಿಯೇ....


ಹಿಂಗ್ಯಾಕೆ ನೀನ್ಯಾಕೆ ನೆನಪಾಗ್ತಿಯೇ.....

ಏ ಹುಡುಗಿಯೇ ಓ ಬೆಡಗಿಯೇ
ಸಂಗಾತಿಯೇ ಸ್ವಪ್ನಸುಂದರಿಯೇ

ಓ ನನ್ನ ಪ್ರಿಯ ಗೆಳತಿಯೇ
ಹಿಂಗ್ಯಾಕೆ ನೀನ್ಯಾಕೆ ನೆನಪಾಗ್ತಿಯೇ

ಕನಸಲ್ಲಿ ಬರ್ತೀಯ ಮುತ್ತನ್ನು ಕೊಡ್ತಿಯ
ನಿದ್ದೆನ ಕೆಡಸ್ತೀಯ ಕಷ್ಟನ ಕೊಡ್ತಿಯ
ಯಾಕೋ ಏನೋ ನೀನೆ ಇಷ್ಟ ಆಗ್ತೀಯ
ಹೃದಯದಲ್ಲಿ ಆಸೆಯ ಹೆಚ್ಚು ಮಾಡ್ತೀಯ

ಓ ನನ್ನ ಪ್ರಿಯ ಗೆಳತಿಯೇ
ಹಿಂಗ್ಯಾಕೆ ನೀನ್ಯಾಕೆ ನೆನಪಾಗ್ತಿಯೇ

ಕನಸಲ್ಲೂ ನೀನೆ ಮನಸ್ಸಲ್ಲೂ ನೀನೆ
ಎಲ್ಲೆಲ್ಲು ನೀನೆ ಹಿಂಗ್ಯಾಕೆ ಹೇಳೇ ಜಾಣೆ
ಸುಳ್ಳಲ್ಲ ನನ್ನ ಮಾತು ದೇವರಮೇಲಾಣೆ
ಈ ಹೃದಯದ ಮಾತನು ತಿಳಿಸುವ ದಾರಿಯ ನಾ ಕಾಣೆ

ಓ ನನ್ನ ಪ್ರಿಯ ಗೆಳತಿಯೇ
ಹಿಂಗ್ಯಾಕೆ ನೀನ್ಯಾಕೆ ನೆನಪಾಗ್ತಿಯೇ

ವಾರಕ್ಕೊಮ್ಮೆ ರಜೆಯ ದಿನದಲ್ಲಿ
ನಾನು ನೋಡುವ ಕನ್ನಡ ಸಿನೆಮಾದಲ್ಲಿ
ಪರದೆಯ ಮೇಲೆ ನೀನೆ ನಾಯಕಿಯಾಗಿರುವೆ
ಹಾಡನು ಹಾಡಿ ಡ್ಯಾನ್ಸ್ ಮಾಡಿ ಮನಸ್ಸನ್ನು ಕದ್ದಿರುವೆ
ನೀನು ನಡೆಯುವ ಸ್ಟೈಲಿಗೆ ನಿನ್ನ ಸ್ಮೈಲಿಗೆ ನಾನು ಸೋತಿರುವೆ

ಓ ನನ್ನ ಪ್ರಿಯ ಗೆಳತಿಯೇ
ಹಿಂಗ್ಯಾಕೆ ನೀನ್ಯಾಕೆ ನೆನಪಾಗ್ತಿಯೇ

ಏಕಾಂಗಿಯಾಗಿದ್ದೆ ನಾನು
ಸಂಗಾತಿಯಾಗಿ ಬಂದೆ ನೀನು
ಸಂತೋಷವಾಗಿದ್ದೆ ನಾನು
ಪ್ರೀತ್ಸೋದನ್ನ ಹೇಳಿ ಕೊಟ್ಟೆ ನೀನು
ಕನಸಲ್ಲಿ ಬರೋದನ್ನೇ ಪ್ರೀತಿ ಅಂತಾರೇನು
ಮನಸಲ್ಲಿ ಇರೋದನ್ನೇ ಹೇಳ್ತೀನಿ ನಾನು

ಓ ನನ್ನ ಪ್ರಿಯ ಗೆಳತಿಯೇ
ಹಿಂಗ್ಯಾಕೆ ನೀನ್ಯಾಕೆ ನೆನಪಾಗ್ತಿಯೇ

ನಿನ್ನಾ ಪ್ರೀತಿಸುವೆ
ನಿನಗಾಗಿ ಕಾದಿರುವೆ

ಓ ನನ್ನ ಪ್ರಿಯ ಗೆಳತಿಯೇ
ಹಿಂಗ್ಯಾಕೆ ನೀನ್ಯಾಕೆ ನೆನಪಾಗ್ತಿಯೇ....



ಶುಭೋದಯ .....

ಶುಭೋದಯ ..... ಸ್ನೇಹಿತರೆ ........
ಸರ್ವರಿಗೂ ಈ ದಿನ .. ಸುದಿನವಾಗಲಿ ....
ಸಕಲ ಇಷ್ಟಾರ್ಥಗಳು ಸುಲಭವಾಗಿ ಸಿಗಲಿ .....
ಶ್ರೀ ಗಣೇಶನ ಆಶೀರ್ವಾದ ನಮ್ಮೆಲ್ಲರ ಮೇಲು ಇರಲಿ....
" ಓಂ ಶ್ರೀ ಗಣೇಶಾಯ ನಮಃ "


ಪ್ರೀತಿಯ ಮಾತುಗಳಾ ಕಾಣಿಕೆ ಕೊಟ್ಟವಳೇ .....


ಸ್ನೇಹದ ಹೆಸರಲ್ಲಿ ಸನಿಹಕೆ ಬಂದವಳೇ

ಮೌನದಿ ಮನಸ್ಸಲ್ಲಿ ಹೃದಯವ ಗೆದ್ದವಳೇ

ಸುಮಧುರ ಆಸೆಗಳ ಚಿತ್ರವ ಬರೆದವಳೇ

ಪ್ರೀತಿಯ ಮಾತುಗಳಾ ಕಾಣಿಕೆ ಕೊಟ್ಟವಳೇ

ನನ್ನ ಪ್ರೀತಿಯ ನೀ ಬೇಗನೆ ಒಪ್ಪಿಕೊಳ್ಳೇ



ಕನಸಿನ ಲೋಕದಲ್ಲಿ ಮಹರಾಣಿಯು ನೀನೇ

ನಿನ್ನ ಕನಸಿನ ಕೋಟೆಯ ಆಳುವ ಮಹರಾಜನು ನಾನೇ

ಪ್ರೇಮರಾಜ್ಯವ ಕಟ್ಟಲು ಬೇಗನೆ ಕೊಡು ಹಸಿರು ನಿಶಾನೇ

ಕನಸ ಕಾಣುತಲೇ ಕಳೆದಿರುವೆ ನನ್ನ ಅರ್ಧ ಜೀವನವನ್ನೇ

ಪ್ರೀತಿಯ ಮಾತುಗಳಾ ಕಾಣಿಕೆ ಕೊಟ್ಟವಳೇ

ನನ್ನ ಪ್ರೀತಿಯ ನೀ ಬೇಗನೆ ಒಪ್ಪಿಕೊಳ್ಳೇ



ಮುದ್ದಾದ ಮೊಗದವಳೇ, ಹಾಲಿನ ಬಣ್ಣದವಳೇ

ಬಳ್ಳಿಯಂತೆ ಬಳುಕುವವಳೇ, ಮಿಂಚಿನಂತೆ ಮಿಂಚುವವಳೇ

ಬೊಂಬೆಯಂತ ಮೈಮಾಟ, ಬಲು ಸುಂದರ ನಿನ್ನ ಸೊಂಟ

ನನ್ನ ಜೊತೆ ಆಡಬೇಡ ಆಟ, ನಾನು ಸ್ವಲ್ಪ ತುಂಟ

ಪ್ರೀತಿಯ ಮಾತುಗಳಾ ಕಾಣಿಕೆ ಕೊಟ್ಟವಳೇ

ನನ್ನ ಪ್ರೀತಿಯ ನೀ ಬೇಗನೆ ಒಪ್ಪಿಕೊಳ್ಳೇ




Kannada Kavi --> ಕನ್ನಡ ಕವಿ....


ಹೊರಗಿನ ನಿಶಬ್ದ ವಾತಾವರಣದಲ್ಲಿ , ಮನದೊಳಗೆ ಶಬ್ದವಾಗುತ್ತದೆ


ಹೊರಗೆ ಬರುವಾಗ , ಹೃದಯವ ಮುಟ್ಟಿದರೆ ಅದು ಅದ್ಭುತವಾಗುತ್ತದೆ