ಕಥೆ ಕವನ ನಗೆಹನಿ ಹಾಡುಗಳು.... ಮನದಿ ಮೂಡಿದ ಸುಂದರ ಸಾಲುಗಳು.... ಹೊಸ ವಿಷಯ ಬರೆವ ಹಂಬಲ.... ಪ್ರೀತಿಯ ದೇಗುಲದ ಕದ ತೆರೆಯುವ ಕಾಲ.... ಕನಸನ್ನು ಕಥೆಯಾಗಿಸಿ , ಮನ ಮೆಚ್ಚಿಸುವ.... ಅಕ್ಷರ ರೂಪದಿ ಸತ್ಯದ ಅರಿವನ್ನು ತೋರುವ.... ಕ್ಷಣ ಮಾತ್ರದಿ ಸ್ನೇಹದ ಸಾಗರ ನಿರ್ಮಿಸುವ.... ಈ ಸುಂದರ ಸಾಹಿತ್ಯ ಲೋಕಕೆ ಸರ್ವರಿಗೂ ಸುಸ್ವಾಗತ.... :)
Saturday, 5 January 2013
Wednesday, 2 January 2013
|| ಪ್ರಶಾಂತ್ ಖಟಾವಕರ್ ||: ಸ್ನೇಹ ಪ್ರೀತಿ .. ಸುಮ್ಮನೇ ಒಂದು ಸ್ಟೋರಿ
|| ಪ್ರಶಾಂತ್ ಖಟಾವಕರ್ ||: ಸ್ನೇಹ ಪ್ರೀತಿ .. ಸುಮ್ಮನೇ ಒಂದು ಸ್ಟೋರಿ: ಸ್ನೇಹ ಪ್ರೀತಿ .. ಸುಮ್ಮನೇ ಒಂದು ಸ್ಟೋರಿ *************************************** ಭಾಸ್ಕರ್ : ಪ್ರಶಾಂತ್ ಹೊಸ ವರ್ಷದ ಶುಭಾಶಯಗಳು........
Tuesday, 18 December 2012
ನೀನೇ ಹೇಳು ಗೆಳತಿ .... :)
ನೀನೇ ಹೇಳು ಗೆಳತಿ .... :)
**************************
ನಿದ್ದೆಯು ಬಾರದೆ
ನಡು ರಾತ್ರಿಯಲ್ಲಿ
ನಿನ್ನ ನೆನಪಾದರೆ
ನಾನೇನ ಮಾಡಲಿ
ನೀನೇ ಹೇಳು ಗೆಳತಿ ....
ನಡುಗುತ ಚಳಿಯಲಿ
ನಾನೊಬ್ಬನೇ ಕೋಣೆಯಲಿ
ನೀನೇಕೆ ಬರಲಿಲ್ಲ ಕನಸಲಿ
ನನಗೀಗ ನಿದ್ದೆಯೇ ಇಲ್ಲ
ನಾನೇನ ಮಾಡಲಿ
ನೀನೇ ಹೇಳು ಗೆಳತಿ ....
ನೀ ನೆನೆದಾಗೆಲ್ಲಾ
ನಾ ನಿನ್ನ ಬಳಿ ಬರುವೆನೆಂದು
ನೀನೇ ಹೇಳಿದ ಮಾತು ಮರೆತೆಯಾ
ನಾನೇನ ಮಾಡಲಿ ಈಗ
ನೀನೇ ಹೇಳು ಗೆಳತಿ .... :)
|| ಪ್ರಶಾಂತ್ ಖಟಾವಕರ್ ||
Thursday, 13 December 2012
ಯಾರೋ ಒಬ್ಬಳು ಚೆಲುವಿ .. :)
ಯಪ್ಪೋ ಯಪ್ಪೋ
ಯವ್ವೋ ಯವ್ವೋ
ಯಾರೋ ಒಬ್ಬಳು ಚೆಲುವಿ
ಬರ್ತಾಳಲ್ಲೋ ಕನಸಿನಾಗ
ಕುಣಿತಾಳಲ್ಲೋ ಮನಸಿನಾಗ
ನಡುರಾತ್ರಿಯಲ್ಲಿ ಮಲಗಿದ್ದಾಗ
ನಾನೊಬ್ಬನೇ ಕೋಣೆಯೊಳಗ
ಥಯ್ಯಾ ಥಕ .. ಥಕ ಥಕ .. ಥಯ್ಯಾ ಥಕ ..
ಥಯ್ಯಾ ಥಕ .. ಥಕ ಥಕ .. ಥಯ್ಯಾ ಥಕ ..
ಹೆಜ್ಜಿ ಇಟ್ಟರ ಎದಿ ಮ್ಯಾಲ
ಒಳಗೊಳಗೆಲ್ಲಾ ಕಿಲ ಕಿಲ
ಕಣ್ಣು ಬಿಟ್ರ ಕಾಣೋದಿಲ್ಲ
ಹೊರಗೆಲ್ಲಾ ಭಾರಿ ತಳಮಳ
ಥಯ್ಯಾ ಥಕ .. ಥಕ ಥಕ .. ಥಯ್ಯಾ ಥಕ ..
ಥಯ್ಯಾ ಥಕ .. ಥಕ ಥಕ .. ಥಯ್ಯಾ ಥಕ ..
ಯಾರೋ ಯಾರೋ ಅವಳ್ಯಾರೋ
ಅವಳು ಬಂದ್ಲಂದ್ರ ನಂಗ ನಿದ್ದಿ ಬರೋದಿಲ್ಲ
ಯಾಕೋ ಏನೋ ಹಿಂಗ್ಯಾಕೋ
ಅವಳು ನಕ್ಳಂದ್ರ ನಂಗ ಕೈ ಕಾಲಾಡೋದಿಲ್ಲ
ಯಪ್ಪೋ ಯಪ್ಪೋ
ಯವ್ವೋ ಯವ್ವೋ
ಯಾರೋ ಒಬ್ಬಳು ಚೆಲುವಿ .. :)
ಥಯ್ಯಾ ಥಕ .. ಥಕ ಥಕ .. ಥಯ್ಯಾ ಥಕ ..
ಥಯ್ಯಾ ಥಕ .. ಥಕ ಥಕ .. ಥಯ್ಯಾ ಥಕ .. !!
Friday, 7 December 2012
ಅಯ್ಯಯ್ಯೋ ಅಯ್ಯಯ್ಯೋ ಅಯ್ಯಯ್ಯಯೋ ...... !!
ಅಯ್ಯಯ್ಯೋ
ಅಯ್ಯಯ್ಯೋ
ಅಯ್ಯಯ್ಯಯೋ
ಹೊಡೆದಾಟ
ಬಡೆದಾಟ
ಏತಕೀ ಹೋರಾಟ
ಇದು ನನ್ನ ಗುಂಪು
ಅದು ನಿನ್ನ ಗುಂಪು
ಅಧಿಕಾರ ನನಗೆ ಬೇಕು
ನಾ ಹೇಳಿದ್ದೆ ಆಗಬೇಕು
ಹಿಂಗೆಲ್ಲಾ
ಜಗ್ಗಡ್ತಾ ಕಿತ್ತಾಡ್ತಾ
ಅದ್ಯಾವ ಸೇವೆಯೋ
ಮನುಷ್ಯ ಮನುಷ್ಯನ
ಕುಸ್ತಿ ಇದ್ದಂಗೆ
ಮನಸ್ಸು ಮನಸ್ಸಿನ
ಜಗಳದಾಗೆ
ಪ್ರಳಯ ಆಗದೆ ಇದ್ರು
ಜನರ ಪ್ರಾಣ ಹೋಗುತ್ತೆ
ಈ ಭೂಮಿ ಖಾಲಿ ಆಗುತ್ತೆ
ಪ್ರಳಯಕ್ಕಿಂತ ದೊಡ್ಡ ಪ್ರಳಯ
ಮನುಷ್ಯ ಮನುಷ್ಯ
ಹಿಂಗ್ಯಾಕೆ ಹೊಡೆದಾಡ್ತಾನಯ್ಯೋ ....
ಅಯ್ಯಯ್ಯೋ
ಅಯ್ಯಯ್ಯೋ
ಅಯ್ಯಯ್ಯಯೋ ........
|| ಪ್ರಶಾಂತ್ ಖಟಾವಕರ್ ||
Subscribe to:
Posts (Atom)


