Saturday, 30 June 2012

ಕನಸಿನಲ್ಲೂ ಕನಸು ..!!




ನಾನಿದ್ದೆ ಮನೆಯಲ್ಲಿ


ಮಾಡುತ್ತ ಸುಖ ನಿದ್ದೆ





ನೀನೆದ್ದು ಸುಮ್ಮನಿರದೇ


ಬೇಗ ಏಳೆಂದು ಕೂಗಿದ್ದೆ





ನಾನಿದ್ದೆ ಕನಸಿನ ಲೋಕದಲ್ಲಿ


ಕನಸಿನಲ್ಲೊಂದು ಕನಸು ಕಂಡಿದ್ದೆ





ಸದ್ದಿಲ್ಲದೇ ಸುಮ್ಮನೆ ಮಲಗಿದ್ದೆ


ಕನಸಿನಲ್ಲೂ ಕನಸು ಕಾಣುತ್ತಿದ್ದೆ





ಎದ್ದು ಈಗೇನು ಮಾಡಲಿ ಹೇಳು


ನಿದ್ದೆಯಲ್ಲಿ ನಿದ್ದೆಯ ಕನಸು ಈಗ ಹಾಳು.......!!!!!!!!!!!!





|| ಪ್ರಶಾಂತ್ ಖಟಾವಕರ್ ||


Friday, 29 June 2012

|| ಪ್ರಶಾಂತ್ ಖಟಾವಕರ್ ||: "ಭಗವಂತ ಬರೆದ ಹಣೆ ಬರಹ"


"ಭಗವಂತ ಬರೆದ ಹಣೆ ಬರಹ" 
***************************

"ಭಗವಂತ ಬರೆದ ಹಣೆ ಬರಹ"
ನಾ ಬರೆದ ಕಥೆಯ ತಲೆ ಬರಹ

ಕಥೆಯಲ್ಲಿದೆ ಪ್ರೇಮಿಗಳ ವಿರಹ
ಹಳೆಯ ಕಥೆಯು ಹೊಸ ತರಹ

ಸೇರುವರು ಹೇಗೆ ಅವರು ಸನಿಹ
ತಿಳಿದಿಲ್ಲ ಯಾರಿಗೂ ನನ್ನ ವಿನಹ
ಊರಾಚೆ ಕಾರ್ಮಿಕರ ಸಮೂಹ
ಆಗಿತ್ತಲ್ಲೊಂದು ರಹಸ್ಯ ವಿವಾಹ

ನಿಧಿ ಇದೆ ಎಂಬ ಊಹಾ ಪೂಹ
ಹಿಡಿದಿತ್ತು ಹಣದ ಹುಚ್ಚು ಮೋಹ
ನಡೆಯುತ್ತಿತ್ತು ನಿಲ್ಲದ ರಕ್ತದ ದಾಹ
ನೆಲ ಅಗೆದಾಗ ಸಿಕ್ಕಿತ್ತು ಹೂತಿಟ್ಟ ದೇಹ

|| ಪ್ರಶಾಂತ್ ಖಟಾವಕರ್ ||
"ಭಗವಂತ ಬರೆದ ಹಣೆ ಬರಹ"
ಈ ಒಂದು ಕಾಲ್ಪನಿಕ ಕಥೆಯ ಆರಂಭವು ಜುಲೈ ಒಂದರಂದು .. ಸಸ್ಪೆನ್ಸ್ ಸ್ಟೋರಿ ಬ್ಲಾಗಿನಲ್ಲಿ .... ನೋಡಿ , ಓದಿ , ಅನಿಸಿಕೆ ಹಂಚಿಕೊಳ್ಳಿ .. ಏನು ಎಲ್ಲಿ ಹೇಗೆ ಏಕೆ ಎಲ್ಲದರ ವಿವರ 
ಜುಲೈ ಒಂದನೇ ತಾರೀಕು .. >>>>>"ಭಗವಂತ ಬರೆದ ಹಣೆ ಬರಹ"

Sunday, 24 June 2012

ನೀ ಮಾಡಿದ ಮೋಸಕ್ಕೆ ನನ್ನೆದೆಯು ಉರಿದಿದೆ


*********************************************************************************

ನೀ ಮಾಡಿದ ಮೋಸಕ್ಕೆ
ನನ್ನೆದೆಯು ಉರಿದಿದೆ

****************************************


ಕಡ್ಡಿಯ ಗೀರದೆ
ಬೆಂಕಿಯ ಹಚ್ಚಿದೆ
ಬೀಡಿಯ ಸೇದದೆ
ಹೊಗೆಯ ಊದಿದೆ

ನೀ ಮಾಡಿದ ಮೋಸಕ್ಕೆ
ನನ್ನೆದೆಯು ಉರಿದಿದೆ
ಹಚ್ಚಿದ ಪ್ರೇಮ ಜ್ವಾಲೆಯ
ನಂದಿಸಿ ನೀ ಹೋದೆ

ದ್ವೇಷದ ಹೊಗೆಯು
ಮನದಲ್ಲಿ ದಗೆಯು
ಪ್ರೇಮದ ಕಾಣಿಕೆಯು
ಉಸಿರಿನ ಕೊನೆಯು

ಕಡ್ಡಿಯ ಗೀರದೆ
ಬೆಂಕಿಯ ಹಚ್ಚಿದೆ
ಹಚ್ಚಿದ ಪ್ರೇಮ ಜ್ವಾಲೆಯ
ನಂದಿಸಿ ನೀ ಹೋದೆ

ಬೀಡಿಯ ಸೇದದೆ
ಹೊಗೆಯ ಊದಿದೆ
ನೀ ಮಾಡಿದ ಮೋಸಕ್ಕೆ
ನನ್ನೆದೆಯು ಉರಿದಿದೆ

|| ಪ್ರಶಾಂತ್ ಖಟಾವಕರ್ ||

Friday, 15 June 2012

टिपक टुपुक ಟಿಪಕ್ ಟುಪುಕ್ Tipak Tupuk


टिपक टुपुक ( हिंदी कविता )
******************************

टिपक टुपुक
पानी की बूंदे
वो बादलों से बरसे
सरर सरर
हवा से बाते करते
भीगा मै तन बदन
तेरी  ही खयालो में ..........

कितना करू इंतज़ार
अब तो आवोना
मेरी जिन्दगी में
कांपने लगा है
भीगा हुवा मेरा तन बदन
अकेला हू तेरी यादो में ...........


प्यार की दिया जलावो
और वो बुझ ना पाए
जब तक सूरज चाँद रहें
हमेशा जलता रहें
प्यार की कहानी बन कर
लोग सदियों तक याद रखे
अमर प्यार की मधुर मिसाल बनाकर ...........


टिपक टुपुक
पानी की बूंदे
वो बादलों से बरसे
भीगा मै  तन बदन ....... ........ ........ ........ :) :)

।। प्रशांत खटावकर ।।





ಟಿಪಕ್ ಟುಪುಕ್  Tipak Tupuk  (ಹಿಂದಿ ಕವನ hindi poem)
*******************************************


ಟಿಪಕ್ ಟುಪುಕ್

ಪಾನೀ ಕೀ ಬೂಂದೇ
ವೋ ಬಾದಲೊಂಸೆ ಬರ್ಸೇ
ಸರರ ಸರರ
ಹವಾಸೆ ಬಾತೆ ಕರ್ತೆ
ಭೀಗಾ ಮೈ ತನ್`ಬದನ್
ತೇರೀ ಹೀ ಖಯಾಲೋಮೆ


ಕಿತನಾ ಕರೂ ಇಂತಜಾರ್
ಅಬ್ ತೋ ಆವೋನಾ
ಮೇರಿ ಜಿಂದಗೀ ಮೇ
ಕಾಂಪ್`ನೇ ಲಗಾ ಹೈ
ಭೀಗಾ ಹುವಾ ಮೇರಾ ತನ್`ಬದನ್
ಅಕೇಲಾ ಹೂ ತೇರೀ ಯಾದೋಮೆ


ಪ್ಯಾರ್ ಕೀ ದಿಯಾ ಜಲಾವೋ
ಔರ್ ವೋ ಬುಜ್ ನಾ ಪಾಯೇ
ಜಬ್ ತಕ್ ಸೂರಜ್ ಚಾಂದ್ ರಹೇ
ಹಮೇಶಾ ಜಲ್ತಾ ರಹೇ
ಪ್ಯಾರ್ ಕೀ ಕಹಾನೀ ಬನಕರ್
ಲೋಗ್ ಸದೊಯೋನ್ತಕ್ ಯಾದ್ ರಕ್ಕೇ
ಅಮರ್ ಪ್ಯಾರ್ ಕೀ ಮಧುರ್ ಮಿಸಾಲ್ ಬನಾಕರ್


ಟಿಪಕ್ ಟುಪುಕ್
ಪಾನೀ ಕೀ ಬೂಂದೇ
ವೋ ಬಾದಲೊಂಸೆ ಬರ್ಸೇ
ಭೀಗಾ ಮೈ ತನ್`ಬದನ್ .. .. .. .. .. :)


|| ಪ್ರಶಾಂತ್ ಖಟಾವಕರ್ ||


ಟಿಪಕ್ ಟುಪಕ್  Tipak Tupuk  (ಹಿಂದಿ ಕವನ hindi poem)
*******************************************



Tipak Tupuk
paani ki boonde
wo baadalonse barse
sarara sarara
hawase baate karte
bheega mai tanbadan
teri hi kayaalome


kitnaa karu intzaar
ab to aavona
meri zindagi me
khaampne lagaa hai
bheega huva meraa tanbadan
akelaa hu teri yaadhome


pyaar ki diya jalaavo
aur wo buj naa paaye
jab tak sooraj chaand rahe
hamesha jaltaa rahe
pyaar ki kahaani bankar
log sadiyontak yaadh rakke
amar pyaar ki madhur misaal banaakar


Tipak Tupuk
paani ki boonde
wo baadalonse barse
bheeg mai tanbadan .. :)


|| PPK.DVG ||



Wednesday, 13 June 2012

ನೆನೆನೆನೆದು ನೆನೆಯುತ್ತ ನಿನ್ನನ್ನೇ ನಾ !!!!!!!!!


ನೆನೆನೆನೆದು  ನೆನೆಯುತ್ತ  ನಿನ್ನನ್ನೇ  ನಾ !!!!!!!!!
********************************************

ನೆನೆನೆನೆದು ನಿನ್ನೆ ನಾಳೆಗಳ
ನಿನಗಾಗಿ ನಾನಿಂದು ನುಡಿಯುವೆ
ನನ್ನೆದೆಯಾಳದ ನಾಲ್ಕು ನುಡಿಗಳ
ನಿನ್ನುಸಿರಾಗಿ ನನ್ನೆದೆಯಲ್ಲವಿತಿವೆ
ನಿನ್ನಾ ನೂರಾರು ನೆನಪುಗಳು

ಸವಿ ಸುಂದರ ಸ್ನೇಹದ  ಸಮಯ
ಸಂಗಾತಿಯೇ ಸ್ವಪ್ನ ಸುಂದರಿಯೇ
ಸ್ಪೂರ್ತಿಯ ಸಂಗೀತವು ಸಾಹಿತ್ಯವು
ಸಪ್ತಸ್ವರಗಳ ಸುಮಧುರಾಮೃತವು
ಸಂಜೆ ಸೂರ್ಯನ ಸ್ವರ್ಣಾಲಂಕಾರವು

ನೆನೆನೆನೆದು ನಿನ್ನಾ ನೆನೆಪುಗಳ
ನೆನಪುಗಳೊಡನೆ ನೀರಿನೋಕುಳಿ
ನಾನಲ್ಲಿ ನೆನೆನೆನೆದು ನಡುಗಿದೆ
ನಾ ನಿಂತಲ್ಲೇ ನಿಂತು ನೆನೆಯುತ್ತ
ನಾ ನಿನ್ನನ್ನೇ ನೆನೆಯುತ್ತ ನೆನೆನೆನೆದು

|| ಪ್ರಶಾಂತ್ ಖಟಾವಕರ್ ||

Tuesday, 12 June 2012

ಇಂತೀ ನಿನ್ನ _._._ :)


ಇಂತೀ ನಿನ್ನ _._._ :)

ಸುಳ್ಳನೆಂದರೂ ಸರಿಯೇ
ಕಳ್ಳನೆಂದರೂ ಸರಿಯೇ
ತಪ್ಪು ಮಾಡದ ನಾನೇಕೆ
ಚಿಂತಿಸಿಲಿ ಪರರ ನುಡಿಗಳಿಗೆ

ನಾನೊಬ್ಬ ಸಾಮಾನ್ಯನನು
ಸುಮ್ಮನೆ ಮೌನಿಯಾಗುವೆ
ಸರಿ ತಪ್ಪುಗಳ ಲೆಕ್ಕ ಹಚ್ಚದೆ
ಸಾಕಿನ್ನು ಕಿತ್ತಾಟ ಓ ಗೆಳತಿ

ಬಾ ಇನ್ನು ಬರಿದಾದ ನನ್ನ ಬಾಳಿನೊಳು
ತುಂಬು ನೀ ನನ್ನ ಪ್ರೀತಿಯ ಹೃದಯವ
ಹಚ್ಚು ಪ್ರೇಮದ ಜ್ವಾಲೆಯ ನಗುನಗುತ
ಬೆಳಗಲದು ಇಡೀ ಜಗಕೆ ನಮ್ಮ ಪ್ರೀತಿಯ

ಇಂತೀ ನಿನ್ನ ಪ್ರೀತಿಯ

|| ಪ್ರಶಾಂತ್ ಖಟಾವಕರ್ ||

Monday, 4 June 2012

ಸ್ನೇಹದ ಮಳೆಯು




ಸ್ನೇಹದ ಮಳೆಯು
**********************************

ಗೆಳಯ/ಗೆಳತಿಯರ ಆರಿಸಿ
ಒಂದೆಡೆಯಲ್ಲಿ ಒಟ್ಟಾಗಿ ಇರಿಸಿ
ಸ್ನೇಹವೆಂಬ ಅಣೆಕಟ್ಟನ್ನು ನಿರ್ಮಿಸಿ
ಬಲು ಭದ್ರವಾಗಿ ಬಚ್ಚಿಟ್ಟುಕೊಂಡಿದ್ದೆ

ಸ್ನೇಹಿತರಿಲ್ಲದೇ ಏಕಾಂಗಿಯಾಗಿ
ಸುಖ ಹಂಚಿಕೊಳ್ಳದ ಮೌನಿಯಾಗಿ
ದುಃಖ ಮರೆಯಲಾಗದೆ ನೊಂದ ಜೀವವಾಗಿ
ನಾಲ್ಕು ನುಡಿ ನಗುವಿನ ಸವಿ ಬಯಸುವ

ಆ ಹೃದಯಗಳಿಗಾಗಿ ನಾ ಬಿಟ್ಟುಕೊಟ್ಟೆ
ಸ್ನೇಹದ ಅಣೆಕಟ್ಟಿನ ಬಾಗಿಲ ತೆರೆದು
ಸ್ನೇಹದ ಸವಿಯನ್ನು ಎಲ್ಲರಿಗೂ ಹಂಚಿದೆ
ಗುಂಪು ಮೆಲ್ಲಮೆಲ್ಲನೇ ಖಾಲಿಯಾಗುತ್ತಿದೆ

ಆಕಾಶದಿಂದ ನನ್ನತ್ತ ಬೀಳುವರೆನೋ
ಅಪ್ಸರೆಯರು , ದೇವದೂತರು
ಆಗುವುದೇನೋ ಸ್ನೇಹದ ಮಳೆಯು
ನಕ್ಷತ್ರ ಎಣಿಸುತ ಕನಸಿನೊಂದಿಗೆ ಮಲಗುವೆ

ಮುಂಜಾನೆದ್ದು ಶ್ರೀಗಣೇಶ ಓಂಕಾರ
ನಾ ಮುಗಿಸಿ ಸೂರ್ಯ ನಮಸ್ಕಾರ
ಚಿಂತಿಸುವೆ ಕನಸುಗಳ  ವಿಚಾರ
ಅಪ್ಸರೆಯರು , ದೇವದೂತರು

ಆಕಾಶದಿಂದ ನನ್ನತ್ತ ಬೀಳುವರೆನೋ
ಆಗುವುದೇನೋ ಸ್ನೇಹದ ಮಳೆಯು
ನನಗಿಲ್ಲಿ  ಅದೆಂದು ಸಿಕ್ಕುವರು
      ಮನದಲ್ಲಿ ಮಿಂಚುವ ತಾರೆಯರು .. :)

|| ಪ್ರಶಾಂತ್ ಖಟಾವಕರ್ ||

Saturday, 2 June 2012

nanna gelatiye .. [A poem by *PPK*] Lyrics, Music, Singer, Picture Editing : Prashanth P Khatavakar






ನನ್ನ ಗೆಳತಿಯೆ .. :) :)
*******************

ನನ್ನ ಗೆಳತಿಯೆ
ನನ್ನ ಗೆಳತಿಯೆ
ನಿನ್ನ ನೋಡಿ ತಿಂಗಳಾಗಿದೆ
ನನ್ನ ಬಿಟ್ಟು ನೀನೆಲ್ಲಿ ಹೋದೆ .. ?

....................................
....................................
.....................................
.....................................

|| ಪ್ರಶಾಂತ್ ಖಟಾವಕರ್ ||
*********************************
ಸಾಹಿತ್ಯ , ಚಿತ್ರ
&
ಸಂಗೀತ
ದ್ವನಿ , ಸಂಕಲನ
|| ಪ್ರಶಾಂತ್ ಖಟಾವಕರ್ ||