Tuesday, 8 November 2011

ಕನ್ನಡ ರಾಜ್ಯೋತ್ಸವ


ನಾವ್ಯಾರು ಈ ಮಾತನು ಹೇಳೋಕ್ಕೆ....
ನೀವ್ಯಾರು ಈ ಮಾತನು ಕೇಳೋಕ್ಕೆ....
ಮನಸ್ಸಿರಬೇಕು ಕನ್ನಡನ ಪ್ರೀತಿಸೋಕ್ಕೆ....
ಧೈರ್ಯ ಮಾಡಬೇಕು ಭಾಷೆ ಬೆಳೆಸೋಕ್ಕೆ....

ಹುಡುಕುತ್ತಾ ಹೋದರೆ ಎಷ್ಟೋ ಪದಗಳು ಹೇಳೋಕ್ಕೆ....
ಪುಸ್ತಕಗಳೇ ಕಳೆದು ಹೋಗಿವೆ ಅದನ್ನೆಲ್ಲಾ ಓದೋಕ್ಕೆ....
ಒಂದೊಳ್ಳೆ ಅಂಗಡಿ ಇಲ್ಲಿಲ್ಲಾ ಅವುಗಳನ್ನ ಕೊಳ್ಳೋಕ್ಕೆ....
ಪುಸ್ತಕದ ಅಂಗಡಿಯವರಿಗೆ ಕಷ್ಟ ಅಂತೆ ಮಾರೋಕ್ಕೆ....

ನವೆಂಬರ್ ಒಂದಕ್ಕೆ ಉತ್ಸವ ನಮ್ಮ ಕನ್ನಡಕ್ಕೆ....
ಕನ್ನಡ ಇಲ್ಲಿ ಉಳಿದಿದೆ ಕೇವಲ ಒಂದೇ ದಿನಕ್ಕೆ....
ಅವಕಾಶ ಕಮ್ಮಿ ಸ್ವಾಮಿ ಕನ್ನಡ ಇಲ್ಲಿ ಬಳಸೋಕ್ಕೆ....
ಕೇವಲ ಅದಿಲ್ಲಿ ಉಳಿದಿದೆ ಆಡೋಕ್ಕೆ ಹಾಡೋಕ್ಕೆ....

ಸಮಯ ಇಲ್ಲ ಅಂತಾರಿಲ್ಲಿ ಜನ ಕನ್ನಡ ಓದೋಕ್ಕೆ....
ಹೊಸ ರೀತಿಗಳು ಬೇಕಿಲ್ಲಿ ಕನ್ನಡವ  ಕಲಿಸೋಕ್ಕೆ....
ಮರೆತು ಹೋಗಿರುವ ಕನ್ನಡತನವ ನೆನಪಿಸೋಕ್ಕೆ....
ಕನ್ನಡ ಬಾವುಟವ ಹಿಡಿದು ಬನ್ನಿ ಜೈ ಎನ್ನೋಣ ಕನ್ನಡಕ್ಕೆ....

ಎಲ್ಲರಿಗೂ ಕನ್ನಡ ರಾಜ್ಯೋತ್ಸವದ
ಹಾರ್ದಿಕ ಶುಭಾಶಯಗಳು.... :)

|| ಪ್ರಶಾಂತ್ ಖಟಾವಕರ್ ||


5 comments: