Tuesday, 8 November 2011

ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು ….


ಬನ್ನಿ ಬನ್ನಿ ಗೆಳಯರೇ ಬನ್ನಿ ಬನ್ನಿ
ಬನ್ನಿ ಬನ್ನಿ ಗೆಳತಿಯರೇ ಬನ್ನಿ ನ್ನಿ
ಬನ್ನಿ ಎಲ್ಲರೂ ದಸರಾ ಹಬ್ಬವ ಮಾಡೋಣ ಬನ್ನೀ....

"ಬನ್ನಿ" ಹಬ್ಬವ ಮಾಡೋಣ ಬನ್ನಿ
"ಬನ್ನಿ" ಕೊಟ್ಟು ಬಂಗಾರ ಬಯಸೋಣ ಬನ್ನಿ
"ಬನ್ನಿ" ಪಡೆದು ಬಾಳನ್ನು ಬಂಗಾರವಾಗಿಸುವ ಬನ್ನೀ….

ಬನ್ನಿ ದೇವಿಯ ಪೂಜೆಯ ಮಾಡೋಣ ಬನ್ನಿ
ಬನ್ನಿ ಎಲ್ಲರೂ ನಂದಾ ದೀಪವ ಹಚ್ಚೋಣ ಬನ್ನಿ
ಬನ್ನಿ ಎಲ್ಲರೂ ಸಿಹಿ ಊಟವ ಮಾಡೋಣ ಬನ್ನೀ….

ಬನ್ನಿ ಎಲ್ಲರೂ ದೇವರ ಆಶಿರ್ವಾದವ ಪಡೆಯೋಣ ಬನ್ನಿ
ಬನ್ನಿ ಹಂಚಿ .. ಸಿಹಿ ತಿನಿಸಿ .. ಸುಖ ಶಾಂತಿಯ ಕೋರೋಣ ಬನ್ನಿ
"ಬನ್ನಿ" ತೊಗೋಳಿ ಬನ್ನಿ. ನಾವು ನೀವು ಬಂಗಾರದ ಹಾಗಿರೋಣ ಬನ್ನೀ….

ಎಲ್ಲರಿಗೂ ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು …. J
  || ಪ್ರಶಾಂತ್ ಖಟಾವಕರ್ ||

No comments:

Post a Comment