ಗೆಳತಿಯರಿಗೊಂದು ಸ್ನೇಹ ಪ್ರೀತಿಗಳ ಕವನ
***************************************
ನಮ್ಮ ಈ ಸ್ನೇಹ ಸಂಭಂದಗಳು
ಎಂದೂ ನಿಲ್ಲದ ಪ್ರಯಾಣವಾಗಲಿ
ಸುಂದರ ಸುಖ ಶಾಂತಿ ನೆಮ್ಮದಿಯ
ನಿಲ್ದಾಣಗಳಲ್ಲಿ ನಿಂತರೂ ಸಹ
ಮತ್ತೆ ಮತ್ತೆ ಜೊತೆ ಜೊತೆಯಲ್ಲಿಯೇ
ನಮ್ಮ ಸಂಚಾರವು ಸಾಗಲಿ..
ಇಲ್ಲಿ ಸವಿ ಸವಿ ನೆನಪುಗಳೇ ಟಿಕೇಟ್`ಗಳು
ನಮಗೆ ನಾವೇ ಕಂಡಕ್ಟರ್ರು ಡ್ರೈವರ್ರುಗಳು
ನಮ್ಮ ಸುಂದರ ಸ್ನೇಹದ ವಾಹನದಲ್ಲಿ
ಜೋತೆಗಿಲ್ಲಿ ನಾವೇ ಸಹ ಪ್ರಯಾಣಿಕರು..
ಏಕ ಪಾತ್ರ , ದ್ವಿಪಾತ್ರ , ತ್ರೀಪಾತ್ರ ..
ನಾವು ನೀವು ಇಲ್ಲಿ ನಾಯಕ ನಾಯಕಿಯರು
ಸ್ನೇಹ ಪ್ರೀತಿಗಳ ಈ ಬಾಳಿನ ನಾಟಕ ರಂಗದಲ್ಲಿ
ಬಾಳೋದು ಚದುರಂಗದಾಟ..
ಅದರಲ್ಲಿ ಬಹು ಮುಖ್ಯ ಪಾತ್ರ
.. ರಾಜ ರಾಣಿ ..
ರಾಣಿಯೇ ಅಲ್ಲಿ ರಾಜನಿಗೆ ಕಾವಲು
ನೀವೇ ಈಗ ಇಲ್ಲಿ ನಮ್ಮ ಈ ಸುಂದರ..
ಸವಿ ನೆನಪುಗಳ ಸ್ನೇಹಕ್ಕೆ ಕಾವಲು.. :)
ಹೊಸ ವರ್ಷದ ನೆನಪಿನ ಉಡುಗೊರೆಯು..
ಕಲ್ಪನೆಯ ಕವನದ ಸಿಹಿಯಾದ ಸಾಲುಗಳು
ಈ ಪ್ರಶಾಂತ ಮನಸ್ಸಿನ ಭಾವನೆಗಳ
ಸ್ನೇಹವನ್ನು ಎಂದೆಂದಿಗೂ ಮರೆಯದಿರಲು.. :)
|| ಪ್ರಶಾಂತ್ ಖಟಾವಕರ್ ||
ನಿಲ್ಲುವಾ ಮಾತುಗಳ ಕೊಡಲಾರೆವು...
ReplyDeleteಜೊತೆ ಇರುವಾ ಕ್ಷಣಗಳ ನೆನಪುಗಳ ಮಾಸಲು ಬಿಡಲಾರೆವು.
ಪ್ರೀತಿ ಮತ್ತು ಅದರ ತೀವ್ರ ಮನೋ ಕಂಪನದ ಒಳ್ಳೆಯ ಚಿತ್ರಣ.
ReplyDeleteಈ ೨೦೧೨ ಪ್ರಶಾಂತರ ೩೬೫ ಕವನಗಳಿಗೆ ಸಾಕ್ಷಿಯಾಗಲಿ.
ಗೆಳಯರ ಮೊಬೈಲ್ ಸಂಪರ್ಕ ಇರುತ್ತೆ .. ಫೋನ್ ಮಾಡಿ ..ನ್ಯೂ ಇಯರ್ ವಿಶ್ ಮಾಡಬಹುದು ... ಆದರೆ ಗೆಳತಿಯರ ಮೊಬೈಲ್ ಸಂಪರ್ಕ ಇದ್ದರೂ ಕೂಡ ಫೋನ್ ಮಾಡೋ ಅವಕಾಶ ಕಡಿಮೆ.. ಎಲ್ಲಾರು ಮದುವೆಯ ನಂತರ ಅವರೇ ಫೋನ್ ಮಾಡಿದಾಗ ಮಾತ್ರ ಮಾತಾಡುವ ಪರಿಸ್ಥಿತಿಯ ಕಾರಣ ಅವರಿಗಾಗಿ ಈ ಕವನ.. :)
ReplyDeleteನಿಮ್ಮ ಹಾರೈಕೆ ನಿಜವಾಗಲು ನಮ್ಮ ಪ್ರಯತ್ನ ಸದಾ ಸಾಗುತ್ತಲೇ ಇರುತ್ತದೆ.. ಮತ್ತು ಚಿತ್ರಗಳ ಕವನಗಳು ಎಲ್ಲರ ಮನದಲ್ಲಿ ಸಂಚಾರ ಮಾಡಲೆಂದೇ ನಮ್ಮ ಕಲ್ಪನೆಗಳ ಕಥೆಗಳೇ ಆಧಾರ.. ನಿಮ್ಮ ಮಾತುಗಳಿಗೆ ಮನಸ್ಪೂರ್ವಕ ಧನ್ಯವಾದಗಳು .. :)
ಪ್ರತಾಪ್ ನಿಮಗೂ ಕೂಡ ಮನಸ್ಪೂರ್ವಕ ಧನ್ಯವಾದಗಳು .. :)
ReplyDeleteಮುತ್ತಂತೆ ನೀವು
ReplyDeleteಮಣಿಯಂತೆ ನಾನು
ಸಿಲುಕಿದರೆ ದಾರದ ಮಧ್ಯೆ
ಅದೇ ನಮ್ಮಿಬ್ಬರ ಸ್ನೇಹ
ಪ್ರೀತಿಯೇ ನನ್ನ ಹಸಿರು ಇವೆರಡೂ ಜೊತೆಗಿದ್ದರೆ ಆಗುವುದಿಲ್ಲ ಹಸಿವು ಇವೆರಡನ್ನೂ ಕಳೆದುಕೊಂಡರೆ ಇರುವುದಿಲ್ಲ ಜೀವನ ಸ್ನೇಹದಲ್ಲಿ ಕಲ್ಮಶವಿರಬಾರದು ಪ್ರೀತಿಯಲ್ಲಿ ಮೊಸವಿರಬಾರದು ಸ್ನೇಹ ಪ್ರೀತಿಗಳೆರಡೊ ಸೇರಿದರೆ ಪಾವನ ಅದರಿಂದ ಆಗುವುದುನೋವು ನಲಿವಿನ ಜೀವನ
ReplyDelete