ಗುಲಾಬಿ
~~~~~
~~~~~
ನೀನೊಂದು ಸುಂದರ ಗುಲಾಬಿಯಂತೆ
ತುಂಬಾನೇ ಮೃದುವಾದ ಹುಡುಗಿಯಂತೆ..
ನಿನ್ನ ಸುತ್ತಲೂ ಹಚ್ಚ ಹಸಿರು ಮನಸ್ಸಿನ
ಮುದ್ದ ಗೆಳಯ ಗೆಳತಿಯರು ಇರುವರು..
ಬಾಳಿನ ಉದ್ದಗಲ ದಾರಿಯಂತೆ
ಅಲ್ಲಲ್ಲಿ ರೆಂಬೆ ಕೊಂಬೆ ಕಡ್ಡಿಗಳು
ನಡುವಲ್ಲಿ ನೋವನ್ನು ನೆನಪಿಸುವ
ನುಣುಪಾದ ಅಂಚಿನ ಮುಳ್ಳುಗಳು..
ಯಾವುದೋ ಒಂದು ಶುಭ ದಿನದಂದು
ನೀ ಸೇರುವೆ ಇನ್ಯಾರದೋ ಮುಡಿಯಲ್ಲಿ ,
ದೇವರ ಗುಡಿಯಲ್ಲಿ , ಪೂಜೆ ನಡೆಯುವಲ್ಲಿ
ಶೃಂಗಾರದ ವಸ್ತುವಾಗಿ ಅಲ್ಲಲ್ಲಿ ಅದ್ಬುತವಾಗಿ..
ಆಗ ನೀನು ಮರೆಯದಿರು ನಿನ್ನ ಜೊತೆಗಿನ
ಸವಿ ಸುದಿನಗಳ, ನಮ್ಮ ನೆನಪುಗಳ, ಮಾತುಗಳ,
ಮನಸ್ಸುಗಳ, ಭಾವನೆಗಳ, ಮಧುರ ಸಿಹಿ ಕ್ಷಣಗಳ,
ಎಂದೆಂದೂ ನಿನ್ನ ಸುಖ ಬಯಸಿದವರು ನಾವೆಂದು..
ನಮ್ಮ ಜೊತೆ ಇರುವವರೆಗೂ ನಿನಗಿಲ್ಲಿ
ನೋವಾಗದಂತೆ ನೋಡಿಕೊಂಡವರು..
ನಿನ್ನ ನಗುವಿಗಾಗಿ ಹಾಡುತ್ತ ಆಡುತ್ತ
ತಂಗಾಳಿಯಲ್ಲಿ ಜೊತೆಗೂಡಿ ಕುಣಿದಾಡುತ್ತಾ..
ಹೊಸ ಹೊಸ ಆಸೆಗಳಿಗೆ ಕನಸು ಕಟ್ಟುತ್ತಾ
ನಿನ್ನ ಬಾಳಿನುದ್ದಕ್ಕೂ ನಮ್ಮ ಹೋರಾಟ
ಪ್ರೀತಿಯ ಸ್ನೇಹವನ್ನು ಶಾಶ್ವತವಾಗಿ ಉಳಿಸಲು
ಹೂವು ಎಲೆ ಕಾಯಿ ಕಾಂಡಗಳ ಕಥೆಯಿದು..
ನಿನ್ನ ಸೌಂದರ್ಯ ಹೆಚ್ಚಿಸಲು ಹಸಿರಿನ ಸಾಲು..
ಅಲ್ಲಲ್ಲಿ ಮುಳ್ಳುಗಳು ಇದ್ದರೂ ಲೆಕ್ಕಿಸದೇ..
ಪ್ರೀತಿಯಿಂದ ನಿನ್ನ ಸುಖ ಬಯಸುವ ನಾವುಗಳು
ಬಾಳಿನ ದಾರಿಯುದ್ದಕ್ಕೂ ಎಲೆ ಮರೆಯ ಕಾಯಿಗಳು.. :)
|| ಪ್ರಶಾಂತ್ ಖಟಾವಕರ್ ||
ಇಲ್ಲಿ ಗುಲಾಬಿಯನ್ನು ಹುಡುಗಿಯರಿಗೆ ಹೋಲಿಸಿ ಬರೆದದ್ದು .. ನಮ್ಮ ಅಕ್ಕ-ತಂಗಿಯರು , ಸ್ನೇಹಿತೆಯರು ಮತ್ತು ಪರಿಚಯದ ಯಾವುದೇ ಹುಡುಗಿ ಮದುವೆ ಆದ ಮೇಲೆ ನಮ್ಮನ್ನು ಮರೆಯಬಾರದು ಅನ್ನುವ ಕಲ್ಪನೆಯಲ್ಲಿ ಬರೆದ ಕವನ.. :)
ಇಲ್ಲಿ ಗುಲಾಬಿಯನ್ನು ಹುಡುಗಿಯರಿಗೆ ಹೋಲಿಸಿ ಬರೆದದ್ದು .. ನಮ್ಮ ಅಕ್ಕ-ತಂಗಿಯರು , ಸ್ನೇಹಿತೆಯರು ಮತ್ತು ಪರಿಚಯದ ಯಾವುದೇ ಹುಡುಗಿ ಮದುವೆ ಆದ ಮೇಲೆ ನಮ್ಮನ್ನು ಮರೆಯಬಾರದು ಅನ್ನುವ ಕಲ್ಪನೆಯಲ್ಲಿ ಬರೆದ ಕವನ.. :)
ಗುಲಾಬಿ ಮತ್ತು ಹೆಣ್ಣು ಎರಡರ ಅವಿನಾಭಾವ ಸಂಬಂಧ ಮತ್ತು ಹೋಲಿಕೆಯನ್ನು ಸಮರ್ಥಿಸುವಲ್ಲಿ ಗೆದ್ದಿದ್ದೀರಿ.
ReplyDeleteಶಭಾಷ್!