Tuesday, 19 June 2012

ಅವಳ ನಗುವಿನ ಮಳೆಯೇ ನನ್ನ ಉಸಿರಾಗಿದೆ.....!!

ಅವಳ ನಗುವಿನ ಮಳೆಯೇ ನನ್ನ ಉಸಿರಾಗಿದೆ ..... !!



ಅವಳ ನಗುವಿನ ಮಳೆಯೇ
ನನ್ನ ಉಸಿರಾಗಿದೆ ..... !!

ಅಲ್ಲೆಲ್ಲೋ ಸುರಿದ ಮಳೆಗೆ
ಧರೆಯೆಲ್ಲ ಹಸಿರಾಗಿದೆ
ನೀನಿಲ್ಲಿ ಚೆಲ್ಲಿದ ನಗುವಿಗೆ
ಸದ್ದೆಲ್ಲಾ ಸಂಗೀತವಾಗಿದೆ

ಮನದಲ್ಲಿ ಮೂಡಿದ ಬೆಳಕಿಗೆ
ಎದೆ ತುಂಬಿ ನಾ ಹಾಡಿದೆ
ಆ ಬೆಳಕಲ್ಲಿ ಕಂಡ ಚೆಲುವೆಗೆ
ಪ್ರೀತಿಯಿಂದ ನಾ ಶರಣಾದೆ

ಚೆಲುವೆಯ ಮುಗ್ದ ನಗುವಿಗೆ
ನಾ ಮೊದಲ ಕವನ ಬರೆದೆ
ನನ್ನ ಪ್ರತೀ ಪದ ಪದಗಳಿಗೆ
ಅವಳ ನಗುವನ್ನೇ ಸೇರಿಸಿದೆ

ಅಲ್ಲೆಲ್ಲೋ ಸುರಿದ ಮಳೆಗೆ
ಧರೆಯೆಲ್ಲ ಹಸಿರಾಗಿದೆ
ಅವಳ ನಗುವಿನ ಮಳೆಯೇ
ನನ್ನ ಉಸಿರಾಗಿದೆ ….. :)

|| ಪ್ರಶಾಂತ್ ಖಟಾವಕರ್ ||





6 comments:

  1. ಇದು ಚೆಂದವಾಗಿ ಬಂದಿದೆ . ಇಷ್ಟವಾಯ್ತು .

    ReplyDelete
  2. ಕವನ ಚೆನ್ನಾಗಿ ಮೂಡಿಬಂದಿದೆ, ಅಭಿನಂದನೆಗಳು.
    ಕನ್ನಡದಲ್ಲಿ ಬರೆಯಿರಿ - ಯನ್ನು ನಮ್ಮ ಬ್ಲಾಗಿಗೆ ಸೇರಿಸುವ ವಿಧಾನ ತಿಳಿಸುವಿರಾ ...?

    ReplyDelete
    Replies
    1. Thank you madam.. :)

      Transliteration is available in Blogger, Gmail, Knol, Orkut and as a bookmarklet. You can also enable it on your website using the transliteration API.

      plzz.. visit this >> http://www.google.com/transliterate/kannada

      Delete
    2. This comment has been removed by the author.

      Delete