ಇಲ್ಲ ಇಲ್ಲ ಹೇಳೋದಿಲ್ಲ
ನಾ ನಿನಗೆ "ಐ ಲವ್ ಯು"
ಸಣ್ಣದೊಂದು ಸಾಲಿನಲ್ಲಿ
ನನ್ನ ಪ್ರೀತಿ ಹೇಗೆ ಹೇಳಲಿ
ಮಾತೃಭಾಷೆ ಪ್ರೀತಿಯಲ್ಲಿ
ಆಂಗ್ಲಭಾಷೆ ಏಕೆ ಬಳಸಲಿ.. !!
ಇಲ್ಲ ಇಲ್ಲ ಹೇಳೋದಿಲ್ಲ
ನಾ ನಿನಗೆ "ಐ ಲವ್ ಯು"
ಗಣಕಯಂತ್ರ ತಂತ್ರ ವಿಶೇಷ ನಿನ್ನ ಕೆಲಸ
ಕೂಡಿ ಕಳೆದು ಗುಣಿಸು ನನ್ನ ವಿದ್ಯಾಭ್ಯಾಸ
ನಿನ್ನ ಕಂಡ ಆ ಕ್ಷಣವೇ ನಾನಾದೆ ನಿನ್ನ ದಾಸ
ಒಪ್ಪಿಕೋ ಪ್ರೀತಿಯ, ನಾನಾಗಲಾರೆ ದೇವದಾಸ.. !!
ಇಲ್ಲ ಇಲ್ಲ ಹೇಳೋದಿಲ್ಲ
ನಾ ನಿನಗೆ "ಐ ಲವ್ ಯು"
ಇದ್ದಿರಬಹುದು ನಿನಗಿಂತ ಸುಂದರಿಯರು
ಬೇಡವೇ ಬೇಡ ದೇವಲೋಕದ ಅಪ್ಸರೆಯರು
ಬರದಿರಬಹುದು ಆಂಗ್ಲಭಾಷೆ ನನಗೊಂದ್ಚೂರು
ಕೇಳೇ ಹುಡುಗಿ ಕನ್ನಡವೇ ನನ್ನುಸಿರು ನನ್ನುಸಿರು.. !!
ಇಲ್ಲ ಇಲ್ಲ ಹೇಳೋದಿಲ್ಲ
ನಾ ನಿನಗೆ "ಐ ಲವ್ ಯು"
ಒಪ್ಪಿಕೋ ಪ್ರೀತಿಯ.. ಒಪ್ಪಿಕೋ ಪ್ರೀತಿಯ.. ಒಪ್ಪಿಕೋ ಪ್ರೀತಿಯ.. !!
|| ಪ್ರಶಾಂತ್ ಖಟಾವಕರ್ ||