Saturday, 10 December 2011

ವಿಶೇಷ ಅರ್ಥ


ಮರವೊಂದು ಕೈ ಬೀಸಿ ಕರೆಯುತಿದೆ 
ಹಸಿರ ಕೂಗಿಗೆ ಜಲಧಾರೆ ಹರಿಯುತಿದೆ

ಕಲ್ಲು ಕಣಿವೆಗಳ ದಾಟಿ ಸರ ಸರನೆ ಓಡುತ
ಹಾಲಿನ ರೂಪದೊಳು ಸೌಂದರ್ಯ ತೋರುತ

ಸೇರಲು ಹೊರಟಿದೆ ಸಾಗರದ ಮಡಿಲನು
ತಿಳಿಯಬೇಕು ಇದರ ವಿಶೇಷ ಅರ್ಥವನು

ಬದುಕಿನಲಿ ಎಲ್ಲ ಕಷ್ಟಗಳ ದಾಟಿ ಹೊರಟರು
ನಾವಿಲ್ಲಿ ಏನೇ ಮಾಡಿದರೂ ಬಲು ಚಿಕ್ಕವರು

ಸಾಗರದಷ್ಟು ಅಪಾರ ಜನಮೆಚ್ಚಿದ ನಾಯಕರು
         ಇರುವರು ನಮಗಿಂತ ಮಹಾನ್ ಸಾಧಕರು....  :)

|| ಪ್ರಶಾಂತ್ ಖಟಾವಕರ್ ||

No comments:

Post a Comment