Wednesday, 21 March 2012

ಬನ್ನಿ ಎಲ್ಲರೂ ಇಲ್ಲಿ .. ಇದು "ಕನ್ನಡಮಲ್ಲಿ"

ಊರೂರು ಸುತ್ತಿ ಹೊರದೇಶದಲ್ಲಿ .. ಭಾರಿ ಜೋರು ನಮ್ಮ "ಕನ್ನಡಮಲ್ಲಿ"

ವಿದ್ಯಾರ್ಥಿ ಜೀವನದೊಳು ಮೂಡಿತು ಹೊಸತನ 
ನಗೆ ನಾಟಕಗಳ ಸಮಾರಂಭ , ಚುಟುಕು ಹನಿವನ 
ದೇಶ ವಿದೇಶದಲ್ಲೂ ಹಚ್ಚಿದರು ಕನ್ನಡದ ದೀಪ
"ಕನ್ನಡಮಲ್ಲಿ" ಎಲ್ಲರಿಗೂ ಸ್ಪೂರ್ತಿಯ ಪ್ರತಿರೂಪ

ಊರೂರು ಸುತ್ತಿ ಹೊರದೇಶದಲ್ಲಿ .. ಭಾರಿ ಜೋರು ನಮ್ಮ "ಕನ್ನಡಮಲ್ಲಿ"

ಸಾಧನೆಯ ಹಾದಿ ನೋಡ ಬನ್ನಿ ಈ ತಾಣದೊಳು
"ಕನ್ನಡಮಲ್ಲಿ" ಬೆಳೆದು ಬಂದ ವಿಶಿಷ್ಟ ವಿಸ್ಮಯಗಳು
ಅರಿಯದವರಿಗಾಶ್ಚರ್ಯ , ಅಪ್ತರಿಗಿವು ಸಿಹಿ ನೆನಪುಗಳು
"ಕನ್ನಡಮಲ್ಲಿ" ಪರಿಚಯ , ಪತ್ನಿಯ 'ಮಧು'ರ ಮಾತುಗಳು

ಊರೂರು ಸುತ್ತಿ ಹೊರದೇಶದಲ್ಲಿ .. ಭಾರಿ ಜೋರು ನಮ್ಮ "ಕನ್ನಡಮಲ್ಲಿ"

ಅಮೇರಿಕಾದಲ್ಲಿ ಯಮರಾಜ , ಸಂಸಾರದಲ್ಲಿ ಶಿವರಾತ್ರಿ
ಅಮೇರಿಕಾದಲ್ಲಿ ಬಸವಣ್ಣ , ದಂಡಪಿಂಡಗಳು , ಹಾಸ್ಯ
ಪ್ರಹಸನ ಅನಾವರಣವಾಯಿತು ಚಿಕಾಗೋ , ಬಾಸ್ಟನ್
ಸೌತ್ ಕರೋಲಿನ , ನ್ಯೂಯಾರ್ಕ್ , ಫ್ಲೋರಿಡಗಳಲ್ಲಿ ....

ಊರೂರು ಸುತ್ತಿ ಹೊರದೇಶದಲ್ಲಿ .. ಭಾರಿ ಜೋರು ನಮ್ಮ "ಕನ್ನಡಮಲ್ಲಿ"

ಹಲವಾರು ಪ್ರದೇಶ , ಅನೇಕ ಪ್ರದರ್ಶನ , ಜನ ಮೆಚ್ಚಿದರು
ಅನಿಮೇಶನ್ ಅದ್ಬುತಗಳ ಸೃಷ್ಟಿ , ಹೊಸ ಸಾಹಿತ್ಯ ರಚನೆ
ಸಂಗೀತ ಸಂಯೋಜನೆ , ಸೇರಿ ಎಲ್ಲವೂ ಜನಪ್ರಿಯವಾದವು
ಇಂಟರ್`ನೆಟ್ ಪರಮಾತ್ಮ , ಫೇಸ್`ಬುಕ್ ಇಷ್ಟೇನೇ ....

ಊರೂರು ಸುತ್ತಿ ಹೊರದೇಶದಲ್ಲಿ .. ಭಾರಿ ಜೋರು ನಮ್ಮ "ಕನ್ನಡಮಲ್ಲಿ"

ಹಾಸ್ಯ ಹಂಚುತ ಸುದ್ದಿ ಸಾರುವ ಹೊಸ ರೂಪದೊಳು
 "ಶ್ರೀ ಯಡಿಯೂರಪ್ಪ ಮಹಾತ್ಮೆ" , "ಜೈಲಿನಲ್ಲಿ ಪರಮಾತ್ಮ"
"ಸೋನಿಯಾ ದೊಂಬರಾಟ" , "ವಿಧಾನ ಸೌದದ ಡರ್ಟಿ ಪಿಕ್ಚರ್"
"ಮುಂಗಾರು ಮಳೆ ಸಿದ್ರಾಮಣ್ಣ" , "ನೀವು ಸುಪರೋ ಅಣ್ಣಾ"

ಊರೂರು ಸುತ್ತಿ ಹೊರದೇಶದಲ್ಲಿ .. ಭಾರಿ ಜೋರು ನಮ್ಮ "ಕನ್ನಡಮಲ್ಲಿ"

ಕೇಳ್ರಪ್ಪೋ ಕೇಳ್ರಿ ಕರ್ನಾಟಕದ ರಾಜಕೀಯ ಸ್ಥಿತಿಯ ಹಾಸ್ಯ ಕವನ
ಸಿಹಿ ತಿನಿಸು ಊಟಗಳ ಮಾತುಗಳು "ಸಂಕ್ರಾಂತಿ ಶುಭಾಶಯಗಳು"
ಎಲ್ಲವೂ ಮನಸೆಳೆಯುವ ಮಜವಾದ ಹಾಸ್ಯದ ಚಿತ್ರ ವಿಚಿತ್ರ ಅವತಾರ
ಸುದ್ದಿ ವಾಹಿನಿ , ಟೀವಿ ಮಾಧ್ಯಮಗಳಲ್ಲೂ ಆಗುವುದು ದೃಶ್ಯಗಳ ಪ್ರಸಾರ

ಊರೂರು ಸುತ್ತಿ ಹೊರದೇಶದಲ್ಲಿ .. ಭಾರಿ ಜೋರು ನಮ್ಮ "ಕನ್ನಡಮಲ್ಲಿ"

ನಟ , ನಿರ್ದೇಶಕ , ಸಾಹಿತಿ , ಗಾಯಕ , ನೃತ್ಯಗಾರ , ಸಕಲ ಕಲಾ ಪ್ರವೀಣರು
ಮ್ಯಾನ್`ಹ್ಯಾಟನ್ ನಗರದ ಹಣಕಾಸಿನ ಕಂಪೆನಿಯೊಂದರ ನಿರ್ದೇಶಕರು
ದಾವಣಗೆರೆಯಲ್ಲಿ ಓದಿ ಬೆಳೆದವರು .. ಗಣಕಯಂತ್ರ ಅಭಿಯಂತರರು
ನ್ಯೂಯಾರ್ಕ ಅಲ್ಲಿ ನೆಲೆಸಿರುವ ಕನ್ನಡಿಗರು .. ನಮ್ಮೂರಿನವರು ಇವರು

ಊರೂರು ಸುತ್ತಿ ಹೊರದೇಶದಲ್ಲಿ .. ಭಾರಿ ಜೋರು ನಮ್ಮ "ಕನ್ನಡಮಲ್ಲಿ"

"ಕನ್ನಡಮಲ್ಲಿ" ಪರಿಚಯದ ಕವನ , ಸರಳ ಪದಗಳ ಸಮ್ಮಿಲನ
ಕನ್ನಡಿಗರ ಸುಂದರ ತಾಣ , ಈ ಕವನ ವಿಭಿನ್ನ ಆಮಂತ್ರಣ
ಬನ್ನಿ ಎಲ್ಲರೂ ಇಲ್ಲಿ .. ಇದು "ಕನ್ನಡಮಲ್ಲಿ"
ಬನ್ನಿ ಎಲ್ಲರೂ ಇಲ್ಲಿ .. ಇದು "ಕನ್ನಡಮಲ್ಲಿ"

ಊರೂರು ಸುತ್ತಿ ಹೊರದೇಶದಲ್ಲಿ .. ಭಾರಿ ಜೋರು ನಮ್ಮ "ಕನ್ನಡಮಲ್ಲಿ"

|| ಪ್ರಶಾಂತ್ ಖಟಾವಕರ್ ||

click here to visit (ತಾಣಕ್ಕೆ ಭೇಟಿ ಕೊಡಲು) >>>>>  "ಕನ್ನಡಮಲ್ಲಿ" (kannadamalli)1 comment:

  1. ಹೊರನಾಡ ಕನ್ನಡಿಗರು ನಮಗಿಂತಲೂ ಅದ್ಭುತವಾಗಿ ಕನ್ನಡ ಕೆಲಸ ಮಾಡುತ್ತಿದ್ದಾರೆ ಪ್ರಶಾಂತು. ಉದಾಹರಣೆಗೆ Suguna Mahesh, Azad IS, Triveni Rao,

    ದಿನ ಕವನ ಪುಷ್ಪಗಳ ಮೂಲಕ ಕನ್ನಡಮ್ಮನ ಸೇವಿಸುತ್ತಿರುವ ನೀವೇ ಧನ್ಯ.

    ಉಗಾದಿ ತರಲಿ ತುಂಬು ಸಂಭ್ರಮ.

    ReplyDelete