Friday 20 April 2012

ಯಾಂತ್ರಿಕ ನಗು :) :) :) :) :)


























ಯಾಂತ್ರಿಕ ನಗು :) :) :) :) :)
***************************************************************

ಮೇಲೊಂದು
ಕೆಳಗೊಂದು
ಸಣ್ಣ ಸಣ್ಣ ಚುಕ್ಕಿ
ಆ ಚುಕ್ಕಿ ಪಕ್ಕ
ಒಂದರ್ಧ ಚಂದ್ರ
ಅದುವೇ ಯಾಂತ್ರಿಕ ನಗು

ಆ ಚಂದ್ರನ  ಮುಂದೆ
ಮತ್ತಷ್ಟು ಅರ್ಧ ಚಂದ್ರಗಳು
ಸೇರಿದರದೇ ದೊಡ್ಡ ನಗು .. :)))))))))

ಚಂದ್ರನು ಅಲ್ಲಿ
ಮುಖ ತಿರುಗಿಸಿ ನಿಂತಲ್ಲಿ
ಅದುವೇ ಅಳುವು , ಬೇಸರವು .. :( :(

ಮಾತಿಗೊಂದು ಮುದ್ದು ನಗು
ಮೌನದ ಸಿಹಿ ಉತ್ತರಕ್ಕೂ
ಬೇಕೇ ಬೇಕು 
ಈ ಯಾಂತ್ರಿಕ ನಗು
ಯಾಂತ್ರಿಕ ಬದುಕಿನ
ಅನಿವಾರ್ಯ ಆಗಿದೆ
ಈ ಚುಕ್ಕಿ ಚಂದ್ರ ನಗು .. :) :) :) :) :)

  || ಪ್ರಶಾಂತ್ ಖಟಾವಕರ್ ||

1 comment:

  1. ಅಂತರ್ಜಾಲ ನಗೆಯೂ ತೀರಾ ಯಾಂತ್ರಿಕ ಎನ್ನುವುದು ನಿಮ್ಮ ಕವನದಿಂದ ನನಗೆ ಮನದಟ್ಟಾಯಿತು ಗೆಳೆಯ!!!!

    ReplyDelete