Monday 4 June 2012

ಸ್ನೇಹದ ಮಳೆಯು




ಸ್ನೇಹದ ಮಳೆಯು
**********************************

ಗೆಳಯ/ಗೆಳತಿಯರ ಆರಿಸಿ
ಒಂದೆಡೆಯಲ್ಲಿ ಒಟ್ಟಾಗಿ ಇರಿಸಿ
ಸ್ನೇಹವೆಂಬ ಅಣೆಕಟ್ಟನ್ನು ನಿರ್ಮಿಸಿ
ಬಲು ಭದ್ರವಾಗಿ ಬಚ್ಚಿಟ್ಟುಕೊಂಡಿದ್ದೆ

ಸ್ನೇಹಿತರಿಲ್ಲದೇ ಏಕಾಂಗಿಯಾಗಿ
ಸುಖ ಹಂಚಿಕೊಳ್ಳದ ಮೌನಿಯಾಗಿ
ದುಃಖ ಮರೆಯಲಾಗದೆ ನೊಂದ ಜೀವವಾಗಿ
ನಾಲ್ಕು ನುಡಿ ನಗುವಿನ ಸವಿ ಬಯಸುವ

ಆ ಹೃದಯಗಳಿಗಾಗಿ ನಾ ಬಿಟ್ಟುಕೊಟ್ಟೆ
ಸ್ನೇಹದ ಅಣೆಕಟ್ಟಿನ ಬಾಗಿಲ ತೆರೆದು
ಸ್ನೇಹದ ಸವಿಯನ್ನು ಎಲ್ಲರಿಗೂ ಹಂಚಿದೆ
ಗುಂಪು ಮೆಲ್ಲಮೆಲ್ಲನೇ ಖಾಲಿಯಾಗುತ್ತಿದೆ

ಆಕಾಶದಿಂದ ನನ್ನತ್ತ ಬೀಳುವರೆನೋ
ಅಪ್ಸರೆಯರು , ದೇವದೂತರು
ಆಗುವುದೇನೋ ಸ್ನೇಹದ ಮಳೆಯು
ನಕ್ಷತ್ರ ಎಣಿಸುತ ಕನಸಿನೊಂದಿಗೆ ಮಲಗುವೆ

ಮುಂಜಾನೆದ್ದು ಶ್ರೀಗಣೇಶ ಓಂಕಾರ
ನಾ ಮುಗಿಸಿ ಸೂರ್ಯ ನಮಸ್ಕಾರ
ಚಿಂತಿಸುವೆ ಕನಸುಗಳ  ವಿಚಾರ
ಅಪ್ಸರೆಯರು , ದೇವದೂತರು

ಆಕಾಶದಿಂದ ನನ್ನತ್ತ ಬೀಳುವರೆನೋ
ಆಗುವುದೇನೋ ಸ್ನೇಹದ ಮಳೆಯು
ನನಗಿಲ್ಲಿ  ಅದೆಂದು ಸಿಕ್ಕುವರು
      ಮನದಲ್ಲಿ ಮಿಂಚುವ ತಾರೆಯರು .. :)

|| ಪ್ರಶಾಂತ್ ಖಟಾವಕರ್ ||

1 comment:

  1. ಅಣೆಕಟ್ಟು ಕಟ್ಟಿ ಬಚ್ಚಿಟ್ಟುಕೊಂಡ್ರೆ ಹುಶಾರು ಕಟ್ಟೆ ಒಡೆದೀತು....ಪ್ರಾಶಾಂತ್...ಹಹಹ ಚನ್ನಾಗಿದೆ ಭಾವನೆಗಳ ಕಟ್ಟೆ ಚನ್ನಾಗೇ ಕಟ್ತೀರಾ ಪದಗಳ ಇಟ್ಟಿಗೆ, ಭಾವನೆಯ ಅತುಕಿನಿಂದ...

    ReplyDelete