Saturday 10 December 2011

ಪ್ರೇಮದ ಓಲೆಯ ಓದಿದ ಮೇಲೆ


ಪ್ರೇಮದ ಓಲೆಯ ಓದಿದ ಮೇಲೆ
**********************
ನೀ ಕೊಟ್ಟ ಓಲೆಯನು
ಓದಿದ ಮೇಲೆ
ಪ್ರೀತಿಯು ಮೂಡಿತು
ಮನದಲ್ಲಿ

ನೀ ಬರೆದ ನೆನಪುಗಳು
ನನ್ನನ್ನು ಕಾಡಿರಲು
ಆ ದಿನಗಳ
ನಾ ಮರೆತಿಲ್ಲ

ಹೊಸ ಹೊಸ ಭಾವನೆ
ಹೊಸತನವಿದೆ
ಪ್ರೀತಿಯ ನುಡಿಗಳ
ಹೂಮಾಲೆ

ಸವಿಗಂಪನು ಸೂಸುತ
ಪ್ರೇಮವ ಹರಡಿದೆ
ನನ್ನೆದೆಯೊಳು
ನೀ ಮನೆ ಮಾಡಿದೆ
ಓಲೆಯಲಿ ಇರಲಿಲ್ಲ
ನಿನ್ನ ರೂಪವು
ನನ್ನ ಪುಸ್ತಕದೊಳು
ನಿನ್ನ ಹಳೆಯ ಭಾವಚಿತ್ರವು

ನೋಡಿದಾಗ ನನ್ನೆದುರು
ನೀ ಬಂದು ನಿಂತಂತೆ
ನವಿಲಿನಂತಹಾ ನಡಿಗೆ
ರೇಷ್ಮೆ ಸೀರೆಯ ಉಡುಗೆ

ಅದೇನು ಮಾಯೆಯೋ
ಆ ನಿನ್ನ ಚೆಲುವು
ಬೇಡುತಿದೆ ಪ್ರತಿದಿನವೂ
ನಿನ್ನನೇ ನನ್ನ ಮನವು

ನೀ ಕೊಟ್ಟ ಓಲೆಯನು
ಓದಿದ ಮೇಲೆ
ಪ್ರೀತಿಯು ಮೂಡಿತು
ಮನದಲ್ಲಿ
ಇಂದು ನಾ ಬರೆದಿರುವೆ
ಚೆಲುವೆಯೇ ನಿನ್ನ ನೆನಪಲಿ

ನೆನಪಿರಲಿ ಈ ಕವನ
ಮರೆಯದಿರು ಈ ಪ್ರಶಾಂತನ
ಪ್ರಶಾಂತ ಮನಸ್ಸಿನ 
        ಒಂದು ಪುಟ್ಟ ಪ್ರೇಮ ಕವನ.... :)
         

       || ಪ್ರಶಾಂತ್ ಖಟಾವಕರ್ ||
           

4 comments:

  1. ಸೊಗಸಾದ ಪ್ರೇಮ ನಿವೇದನೆ.ಸುಂದರವಾಗಿದೆ.ಆದರೆ ಕೊನೆಯ ಕವನ ಇಡೀ ಕವಿತೆಯನ್ನು ಸಮರ್ಥಿಸುವುದಿಲ್ಲ ಅನಿಸುತ್ತೆ.ಅದಕ್ಕೆ ಬೇರೆಯ ಪದಗಳನ್ನು ಸೇರ್ಪಡಿಸಿ ಎಲ್ಲರೂ ಅನ್ವಯಿಸಿಕೊಳ್ಳುವ ಹಾಗೆ ಕವಿತೆಯನ್ನು ಕಟ್ಟಲು ಪ್ದರಯತ್ನಿಸಿ ಗೆಳೆಯರೇ.

    ReplyDelete
  2. @ Banavasi Somashekhar... ಮನಸ್ಪೂರ್ವಕ ಧನ್ಯವಾದಗಳು ಸರ್... :)
    ನಿಮ್ಮ ಸಲಹೆ ಸಹಕಾರಗಳೇ ಹೊಸತನಕ್ಕೆ ಒಂದು ಮಾರ್ಗ...
    ಕವನವು ಎಲ್ಲರಿಗೂ ಅನ್ವಯ ಆಗುವ ಹಾಗೆಂದರೆ...
    ನಮ್ಮ ಹೆಸರಿನ ಬದಲು... "ಗೆಳಯನ" ಎಂಬ ಪದ ಸೇರಿಸಿದರೆ ಸಾಕಲ್ಲವೇ.. ?

    ನೆನಪಿರಲಿ ಈ ಕವನ
    ಮರೆಯದಿರು ಈ ಗೆಳಯನ
    ಪ್ರಶಾಂತ ಮನಸ್ಸಿನ
    ಒಂದು ಪುಟ್ಟ ಪ್ರೇಮ ಕವನ... :)
    ----------------------------------------
    ಓದುವವರು , ಅವರವರ ಹೆಸರನ್ನು ಸೇರಿಸಿಕೊಂಡು ಓದಿಕೊಳ್ಳಿ...
    "ಅವರವರ ಭಾವಕ್ಕೆ , ಅವರವರ ಭಕ್ತಿಗೆ , ಅವರವರ ತರನಾಗಿ ಇರುತಿಹನು ಶಿವಯೋಗಿ"
    ಎನ್ನುವ ರೀತಿಯಲ್ಲಿ...
    "ಅವರವರ ಭಾವನೆಯಲ್ಲಿ , ಅವರವರ ಪ್ರೇಮದಲ್ಲಿ , ಅವರವರ ಪ್ರೀತಿಗಾಗಿ ಇರುತಿಹನು ಪ್ರೇಮಿಯು ಕವಿಯಾಗಿ"
    ------------------------------------------
    ಅಥವಾ ಕೊನೆಯಲ್ಲಿ ಸಂಪೂರ್ಣ ಬದಲಿಯಾಗಬೇಕಾದಲ್ಲಿ..

    ನೆನಪಿರಲಿ ಈ ಪದಗಳು
    ನಾ ಕಟ್ಟಿರಲು
    ನನ್ನ ತನುಮನಗಳ
    ಗುಡಿಯೊಳು....

    ನೀನೆ ನನ್ನ ದೇವತೆ
    ಅದರೊಳು ಗೆಳತಿ
    ಮರೆಯದಿರು ನನ್ನನು
    ಈ ಪ್ರೆಮ ಕವಿತೆಯನ್ನು.... :)

    ಈ ಒಂದು ಬದಲಾವಣೆ ಹೇಗಿದೆ... ನಿಮ್ಮೆಲ್ಲರ ಅನಿಸಿಕೆಯ ಬಯಸುತ...
    ಪ್ರಶಾಂತ್ ಖಟಾವಕರ್ :)

    ReplyDelete
  3. ತುಂಬಾ ಚೆನ್ನಾಗಿದೆ ಸರ್ ನಿಮ್ಮ ಸಾಲುಗಳು
    ನಾನು ನನ್ನ ಮಿತ್ರನ ಭಾವನೆಗಳನ್ನು
    ನನ್ನ ಬರವಣಿಗೆ ಶೈಲಿಯಲ್ಲಿ ಬರೆದು ಕೊಟ್ಟೆ
    ಅವನ ಪ್ರೇಯಸಿ ನೋಡಿ ಒಂದು ದಿನ ಅವನ ಪ್ರೀತಿ ಗೆದ್ದು ಬಿಟ್ಟಿತು ...!!
    ನಿಮ್ಮ ಸಾಲುಗಳನ್ನು ನೋಡಿದರೆ ನನಗೆ ನೆನಪಾಯಿತು !!

    ReplyDelete
  4. ನೆನಪಿರಲಿ ಈ ಕವನ,ಮರೆಯದಿರು ಈ ಗೆಳೆಯನ,ಪ್ರಶಾಂತ ಮನಸಿನ ಈ ಪುಟ್ಟ ಪ್ರೇಮ ಕವನ. ಚೆಂದದ ಸಾಲುಗಳು ಗೆಳೆಯರೇ.ಹೀಗಿದ್ದಾಗ ಪ್ರತಿಯೊಬ್ಬರನ್ನೂ ಅನ್ವಯಿಸಿಕೊಳ್ಳುವುದು

    ReplyDelete