ಪ್ರತಿನಿತ್ಯ
*********
ಪ್ರತಿ ದಿನವೂ ಪ್ರತಿ ಕ್ಷಣವೂ ಕನ್ನಡವೇ ಆಗಿರಲಿ ಪ್ರತಿನಿತ್ಯ
ಕನ್ನಡವೇ ಸತ್ಯ
ಬರೆಯುತ ಬಾಳು ನೀ
ಸುವರ್ಣ ಅಕ್ಷರಗಳಲ್ಲಿ
ಕನ್ನಡವ ಪ್ರತಿನಿತ್ಯ
ಪ್ರತಿ ದಿನವೂ ಪ್ರತಿ ಕ್ಷಣವೂ ಕನ್ನಡವೇ ಆಗಿರಲಿ ಪ್ರತಿನಿತ್ಯ
ಓದಲು , ನೋಡಲು
ಕೇಳಲು , ಕಲಿಯಲು
ತಿಳಿಯಲು , ಬರೆಯಲು
ಸುಂದರ ಈ ಕನ್ನಡ ಸಾಹಿತ್ಯ
ಪ್ರತಿ ದಿನವೂ ಪ್ರತಿ ಕ್ಷಣವೂ ಕನ್ನಡವೇ ಆಗಿರಲಿ ಪ್ರತಿನಿತ್ಯ
ಅರಿಯಬೇಕು ಓ ಕನ್ನಡಿಗ ನೀ
ಮಾತೃ ಭಾಷೆಯ ಉಳಿಸಿ
ಬೆಳೆಸುವ ಭವಿಷ್ಯದ ಅಗತ್ಯ
ನುಡಿ ನೀ ಕನ್ನಡವೇ ಸತ್ಯ
ಪ್ರತಿ ದಿನವೂ ಪ್ರತಿ ಕ್ಷಣವೂ ಕನ್ನಡವೇ ಆಗಿರಲಿ ಪ್ರತಿನಿತ್ಯ
|| ಪ್ರಶಾಂತ್ ಖಟಾವಕರ್ ||
No comments:
Post a Comment