ಆತ್ಮ ಬಂಧನ
******** ********
ಹಾಳೆ ಪೂರ ಖಾಲಿ ಇತ್ತು
ಬರೆಯಲು ಕವನ ನೆನಪಲ್ಲಿತ್ತು
ಕೈಯಲ್ಲಿ ಕೆಂಪು ಬಣ್ಣದ ಕುಂಚ
ಪ್ರೀತಿಯ ಕಲ್ಪನೆಯ ಚಿತ್ರಿಸಲು
ಪದಗಳಿಗೆ ಚಿತ್ರ ರೂಪ ನೀಡಲು
ಎದುರಾಯಿತು ಒಂದು ಸವಾಲು
ಆರಂಭ ಹೇಗೆಂಬ ಹೊಸ ದಿಗಿಲು
ಹಾಳೆ ಪೂರ ಖಾಲಿ ಇತ್ತು
ಬರೆಯಲು ಕವನ ನೆನಪಲ್ಲಿತ್ತು
ಮಾವನ ಮಗಳ ಮುದ್ದಿನ ಗೊಂಬೆ
ಮೇಜಿನ ಮೇಲೆ ಕೂತು ಕರೆದಂತೆ
ಕರಾಳ ರಾತ್ರಿಯಲ್ಲಿ ವಿಚಿತ್ರ ಚಿಂತೆ
ಗೊಂಬೆಯ ಕಣ್ಣು ಕೆಂಪು ಕೆಂಡದಂತೆ
ಆತ್ಮಬಂಧನ ಆ ದಿನಗಳ ನೆನಪಿನಂತೆ
ಹಾಳೆ ಪೂರ ಖಾಲಿ ಇತ್ತು
ಬರೆಯಲು ಕವನ ನೆನಪಲ್ಲಿತ್ತು
ಕೂತೂಹಲ ಕಲ್ಪನೆ ನಾನೇ ಶಶಿಕುಮಾರ
ಜಯಪ್ರದ ಕನಸು ಕಾಣುವ ಕನಸುಗಾರ
ಪದಗಳ ಸೇರಿಸುವಲ್ಲಿ ಗೊಂಬೆಯ ಗೀತೆ
ಕೂಗಿತ್ತು ನನ್ನನ್ನು ಬಾ..!! ಇದು ಗೊತ್ತೇ.. ?
ಅಯ್ಯೋ ದೇವ ಕನಸೋ ನನಸೋ ನಾ ಸತ್ತೆ..
ಹಾಳೆ ಪೂರ ಖಾಲಿ ಇತ್ತು
ಬರೆಯಲು ಕವನ ನೆನಪಲ್ಲಿತ್ತು
ಕೊನೆಗೂ ಎದ್ದೆ ನಾನು ನಿದ್ದೆಯಿಂದ
ಕನಸಿನ ಕಥೆಯ ಕವನವಾಗಿ ಕಟ್ಟಲು
ಭಯದಲ್ಲೂ ಬರೆಯುವ ಆಸೆ ಹುಟ್ಟಲು
ಕಥೆಗಾರ ನಾನು ಬರೆಯುವೆ ಕನಸಲ್ಲೂ
ವಿಸ್ಮಯ ರಹಸ್ಯ ಪ್ರತಿ ಸಾಲು ಸಾಲಿನಲ್ಲೂ.. :)
ಹಾಳೆ ಪೂರ ಖಾಲಿ ಇತ್ತು
ಬರೆಯಲು ಕವನ ನೆನಪಲ್ಲಿತ್ತು
ಕನಸಲ್ಲಿ ಮಾತ್ರ ಹೀಗೆ ಇತ್ತು
ನೀವ್ಯಾರು ನಂಬೋದಿಲ್ಲ ಗೊತ್ತು
ಆದರೂ ಈ ಕವನ ಬೇಕೇ ಬೇಕಿತ್ತು .. :)
|| ಪ್ರಶಾಂತ್ ಖಟಾವಕರ್ ||
No comments:
Post a Comment