ನಾನು & ಸೋನು (ಮುಂದುವರೆದ ಭಾಗ : 1 )
********************************************
ನಾನು » ಆ ಕೆಲಸ ಯಾವುದು ಅಂತಾ ಹೇಳೋದಕ್ಕೂ ಮೊದಲು ನೀನ್ ಇವಾಗ ಧೈರ್ಯವಾಗಿರಬೇಕು .. ನೀನ್ ಹೆದರಿದರೆ ನಾನು ಏನೂ ಹೇಳೋದಿಲ್ಲ..
ಸೋನು » ಅಯ್ಯೋ ನೀನ್ ಹೇಳೋದನ್ನೇ ಹೆದರಿಸಿ ಹೇಳ್ತಿದ್ರೆ ನಂಗೆ ನಿಜವಾಗಲು ಹೆದರಿಕೆ ಆಗುತ್ತೆ , ಬೇಗ ಬೇಗ ಏನು ಅಂತಾ ಹೇಳ್ಬಿಡು , ಜಾಸ್ತಿ ಕಾಯೋದಿಕ್ಕೆ ಆಗೋಲ್ಲಾ..
ನಾನು » ಸರಿ ಹಾಗಿದ್ರೆ ಇಲ್ಲಿ ಕೇಳು ನೀನು ಯಾವಾಗಾದರೂ ಒಬ್ಬಳೇ ರಾತ್ರಿ ಹೊತ್ತು ಬಸ್ಸಲ್ಲಿ ಆರೇಳು ಗಂಟೆ ಪ್ರಯಾಣ ಮಾಡಿದ್ದೀಯ ?
ಸೋನು » ಇಲ್ಲಾ , ಆ ರೀತಿ ಎಲ್ಲೂ ಹೋಗಿಲ್ಲಾ , ಒಬ್ಬಳೇ ಪ್ರಯಾಣ ಮಾಡೋಕ್ಕೆ ಮನೆಲ್ಲಿ ಯಾರು ಬಿಡೋದಿಲ್ಲಾ , ಯಾರಾದರೂ ನನ್ ಜೊತೆ ಬರ್ತಾರೆ ..
ನಾನು » ಒಹ್ ಹಾಗ , ಸರಿ ಆದರೆ ಈಗ ನೀನ್ ಒಬ್ಬಳೇ ರಾತ್ರಿ ಪ್ರಯಾಣ ಮಾಡೋಕ್ಕೆ ರೆಡಿ ಇದ್ದೀಯಾ ?
ಸೋನು » ಮ್ ಮ್ ಯಾಕೆ ಒಬ್ಬಳೇ ? ಹು ಹು ಅಷ್ಟೊಂದು ಧೈರ್ಯ ನನಗ್ಯಾಕೋ ಬರ್ತಾ ಇಲ್ಲಾ .. ಏನ್ ಮಾಡೋದು ?
ನಾನು » ನೋಡು ಸರಿಯಾಗಿ ಯೋಚನೆ ಮಾಡಿ , ತೀರ್ಮಾನ ತಗೋ ... ಇದು ತುಂಬಾ ಮುಖ್ಯ , ಆಮೇಲೆ ಆ ಕೆಲಸ ಏನು ಅಂತಾ ತಿಳಿಸ್ತೀನಿ ..
ಸೋನು » ಅಯ್ಯೋ ದೇವರೇ .. ಹೇಳು ಏನ್ ಕೆಲಸ ಅಂತಾ , ಆಮೇಲೆ ಅದುಕ್ಕಾದರೂ ಧೈರ್ಯ ಹುಟ್ಟುತ್ತೇನೋ ನನ್ನಲ್ಲಿ ..
ನಾನು » ನೋ ನೋ ಸೋನು ಪ್ರತಿಯೊಂದನ್ನೂ ಸ್ವಲ್ಪ ಸ್ವಲ್ಪ ಯೋಚನೆ ಮಾಡಿ ಮುಂದುವರೆಯಬೇಕು , ಇದು ತುಂಬಾ ಮುಖ್ಯವಾದ ಕೆಲಸ... ಹಾಗೆಲ್ಲಾ ಹಗುರವಾಗಿ ಯೋಚನೆ ಮಾಡಬಾರದು ..
ಸೋನು » ಹೋ ಹೋ ಹೌದಾ ಸರಿ .. ಅದು ಯಾವ ಕೆಲಸ ಆಮೇಲೆ ಹೇಳು , ಆದ್ರೆ ಒಬ್ಬಳೇ ಯಾಕೆ ಮಾಡಬೇಕು , ಮೊದಲು ಅದಕ್ಕೆ ಕಾರಣ ಏನು ಹೇಳು ..
ನಾನು » ನೀನ್ ಯಾಕೆ ಇವಾಗಲೇ ಎಲ್ಲಾ ಕೇಳ್ತೀಯಾ . ಅದು ನಿನಗೆ ಒಳ್ಳೆಯದಲ್ಲಾ .. ನೀನ್ ಜಾಸ್ತಿ ಯೋಚನೆ ಮಾಡೋದೇ ನಿನ್ನ ಹೆದರಿಕೆಗೆ ಕಾರಣ ..
ಸೋನು » ಮತ್ತಿನ್ನೇನು ನೀನ್ ಮಾತೆಲ್ಲಾ ಹಾಗೆ ಇದೆ . ನೀನ್ ಮಾತಲ್ಲೇ ತುಂಬಾ ಹೆದರಿಸ್ತೀಯ .. ನಾನೇನ್ ಮಾಡ್ಲಿ .. ಅದಕ್ಕೆ ಎಲ್ಲಾ ಡೀಟೇಲ್ ಕೇಳ್ತಾ ಇದ್ದೀನಿ ..
ನಾನು » ಓ ಹೋ ಸೋನು .. ನೀನ್ ತುಂಬಾ ಇಷ್ಟಾ ಕಣೆ .. ನಿನಗೇನೂ ಕಷ್ಟ ಕೊಡಬೇಕು ಅಂತಾ ನನ್ನ ಮನಸ್ಸಲ್ಲಿ ಇಲ್ಲಾ.. ಅದಕ್ಕೆ ಹೇಳ್ತಾ ಇರೋದು .. ನೀನು ಸುಮ್ಮನೆ ಹೆದರಬೇಡ .. ಈ ಕೆಲಸ ನಿನ್ನಿಂದ ಸುಲಭವಾಗಿ ಆಗುತ್ತೆ .. ನನ್ ಮಾತೆಲ್ಲಾ ನಿನ್ ಒಳ್ಳೇದಕ್ಕೆ ಹೊರತು , ನಿನ್ನಾ ಹೆದರಿಸೋಕ್ಕೆ ಅಲ್ಲಾ...
ಸೋನು » ಮ್ ಮ್ .. ಸರಿ ಸರಿ .. ಓಕೆ ಓಕೆ .. ಏನೋ ಒಳಗೊಳಗೇ ಇವಾಗ ಚೂರು ಚೂರು ಧೈರ್ಯ ಬರ್ತಾ ಇದೆ .. ಹೀಗೆ ಸ್ವಲ್ಪ ಹೊತ್ತು ನನ್ ಜೊತೆ ಮಾತಾಡು .. ಆ ಕೆಲಸ ಏನು ಅಂತಾ ಆಮೇಲೆ ಹೇಳು , ನಾನ್ ಈಗ ನಿನ್ ಮಾತುಗಳನ್ನ ಕೇಳ್ತಾ ಇದ್ರೆ ತುಂಬಾ ಧೈರ್ಯ ಬರ್ತಾ ಇದೆ ..
(ಮುಂದುವರೆಯುವುದು .....)
(ಇದು ಮಾತುಗಳ ಕಥೆ .. ಎಲ್ಲವನ್ನೂ ಒಳಗೊಂಡ ಒಂದು ಪ್ರೇಮಕಥೆ.. ಸೋನು ಯಾರು ಅಂತಾ ಮಾತ್ರ ಕೇಳಬೇಡಿ .. ಇದು ಕಾಲ್ಪನಿಕ ಕಥೆ)
(ಇದು ಮಾತುಗಳ ಕಥೆ .. ಎಲ್ಲವನ್ನೂ ಒಳಗೊಂಡ ಒಂದು ಪ್ರೇಮಕಥೆ.. ಸೋನು ಯಾರು ಅಂತಾ ಮಾತ್ರ ಕೇಳಬೇಡಿ .. ಇದು ಕಾಲ್ಪನಿಕ ಕಥೆ)