ಗೆಳೆತನ ಎನ್ನುವುದು "ಚಿವಿಂಗಂ" (chewing gum)
************************************************
ಗೆಳೆತನವು
ಅಂಟು ಜಗಿದಂತೆ
ಮೊದಮೊದಲು
ಸಿಹಿಯ ಅನುಭವ
ಮುಂದೆ ಮುಂದೆ
ಸಿಹಿಯೇ ಇಲ್ಲದಂಟು
ಸ್ವಾದವಿಲ್ಲದ ಸ್ನೇಹದ ನಂಟು
ದೂರವಾದರದರಿಂದ
ಸಿಹಿ ನೆನಪು ಕ್ಷಣಕಾಲ ಮಾತ್ರ
ಕಾಲದ ಓಟದಲ್ಲಿ
ಬದಲಾವಣೆ ನೋಟದಲ್ಲಿ
ಬೆಲೆಯಿಲ್ಲ ಉತ್ತಮರಿಗಿಲ್ಲಿ
ಅವರವರ ಉದ್ಯೋಗಗಳು
ಅಡ್ಡವಾಗಿದೆ ಹಳೇ ಗೆಳೆತನಕ್ಕೆ
ಬಿಟ್ಟು ಹೋದ ಸ್ನೇಹದ
ಸವಿ ನೆನಪು ಕ್ಷಣಕಾಲ ಮಾತ್ರ
ರುಚಿಯು , ಅಭಿರುಚಿಯು
ಅದಲು ಬದಲಾಗಲು
ಗೆಳತನವು
ಧರೆಗುರಿಳಿದ ಮರದಂತೆ
ಅದು ಮುಂದೆಂದೂ ಬೆಳೆಯದು
ಅದರುಪಯೋಗದ ಬದಲಾವಣೆಯಲ್ಲಿ
ಮರದ ನೆರಳ ನೆನಪು , ನೆನಪಷ್ಟೇ
ಮರದ ಹೂವು - ಹಣ್ಣುಗಳ
ಗಮದ ನೆನಪು ಕ್ಷಣಕಾಲ ಮಾತ್ರ
ಅಂಟು ಜಗಿದಂತೆ
ಈ ಸ್ನೇಹದ ನಂಟು
ಕೊನೆಗಾಲದವರೆಗೆನ್ನುವುದು
ನೆಪಮಾತ್ರ ಮಾತಿಗುಂಟು
ಭಾವನೆಗಳ ಭಾರವನ್ನು ಬಿಟ್ಟು
ಬದುಕುವ ಬದಲಾವಣೆ ಯುಗದಲ್ಲಿ
ಆತ್ಮೀಯ ಸ್ನೇಹದ ಭಾಗ್ಯ ಯಾರಿಗುಂಟು
ಅವರವರ ಬದುಕಿನ ಬೆಳಗಿಗಾಗಿ
ಇನ್ನೊಬ್ಬರ ಸ್ನೇಹಕ್ಕೆ ಬೆಂಕಿ ಹಚ್ಚಿ
ಉರಿದು ಬೂದಿಯಾದ ಮೇಲೆ
ಮತ್ತೊಬ್ಬರ ಸ್ನೇಹಕ್ಕೆ ಬೆಂಕಿ ಹಾಕಲು
ಹೊಂಚು ಹಾಕುವ ಸ್ವಾರ್ಥ ಜನಗಳ
ಈ ಕಲಿಯುಗದಲ್ಲಿ
ಸ್ನೇಹ ನೆನಪು ಮಾತ್ರ
ಗೆಳತನವು ಅಂಟು ಜಗಿದಂತೆ ...... !!
|| ಪ್ರಶಾಂತ್ ಖಟಾವಕರ್ ||
No comments:
Post a Comment