Friday, 10 August 2012

ಈಗ ನನ್ನ ಹೆಸರು ಕೆಟ್ಟಿದೆ .. !!



ಈಗ ನನ್ನ ಹೆಸರು ಕೆಟ್ಟಿದೆ
 *************************

ತಪ್ಪಲ್ಲದ ತಪ್ಪುಗಳು
ಯಾರದ್ದೋ ಸ್ನೇಹಕ್ಕೆ
ಬಲಿಪಶು ನಾನಿಲ್ಲಿ
ಈಗ ನನ್ನ ಹೆಸರು ಕೆಟ್ಟಿದೆ

ಮಾತಿಲ್ಲದ ಮೌನದೊಳು
ಸಮಯದ ಪ್ರಭಾವಕ್ಕೆ
ಬಲಿಪಶು ನಾನಿಲ್ಲಿ
ಈಗ ನನ್ನ ಹೆಸರು ಕೆಟ್ಟಿದೆ

ಅವರಿವರ ಮಾತಿನೊಳು
ಆಪತ್ತು ವ್ಯಕ್ತಿತ್ವಕ್ಕೆ
ಅವರಿವರ ಗುಟ್ಟುಗಳ ನಡುವೆ
ನನ್ನ ಹೆಸರೇ ಕೆಟ್ಟಿದೆ

ಬೇಡವಾದ ಸುದ್ದಿಗಳು
ನೂಕುತ್ತಿವೆ ನರಕಕ್ಕೆ
ಅವರಿವರ ಕಲ್ಪನೆಗಳ ನಡುವೆ
ನನ್ನ ಹೆಸರೇ ಕೆಟ್ಟಿದೆ

ಕೆಟ್ಟ ಹೆಸರು 
ಮತ್ತಷ್ಟು ಕೆಡುವ ಮೊದಲೇ
ಎಲ್ಲವನ್ನು ಬಿಟ್ಟು
ನಾನಿಲ್ಲಿಂದ ದೂರ ಸಾಗಲೇ

ಪ್ರಪಂಚವನ್ನು ಅರಿಯದ
ಮುಗ್ದ ಮನದ ನೋವಿದು
ಮೌನವನ್ನು ಮುರಿದ
     ಮನದಾಳದ ಮಾತಿದು .. !!

     ಈಗ ನನ್ನ ಹೆಸರು ಕೆಟ್ಟಿದೆ .. !!

     || ಪ್ರಶಾಂತ್ ಖಟಾವಕರ್ ||

1 comment:

  1. ತುಂಬಾ ತುಂಬಾ ಧನ್ಯವಾದಗಳು ಸರ್.. ಸಾಲುಗಳ ರಚನೆ ತುಂಬಾ ಚೆಂದ ಇದೆ.. :)

    ReplyDelete