ಹೊಸತು ಹೊಸತು ಈ ದಿನ
ನಿನ್ನಲ್ಲಿ ನಾ ಕಂಡೆ ಹೊಸತನ
ಮೊದಮೊದಲ ಈ ಗೆಳೆತನ
ಪರಿಚಯಕೂ ಮುನ್ನ ತುಸು ಮೌನ
ಮಾತು ಮಾತಿಗೂ ನಿನ್ನ ನಗು
ಮರೆಯದೇ ಉಳಿಯುವುದು ಎಂದೆಂದಿಗೂ
ಮೆಲ್ಲಮೆಲ್ಲನೇ ಮರೆಯಾಗುತ ಮೌನವು
ಬೆಳೆಯುವುದು ಆತ್ಮೀಯ ಭಾವವು
ನಂಬಿಕೆಯ ಕೈ ಬಿಡದೇ ಜೊತೆಗಿರಲು
ನನ್ನೆದೆಯೊಳು ನೀ ನೆನೆಪಾಗಿರಲು
ನನ್ನ ಪ್ರತೀ ನುಡಿಗಳು ಶುಭ ಕೋರಲು
ನಾನೆಂದೆಂದಿಗೂ ನಿಮ್ಮವನೆಂದು ಹೇಳಲು .. :)
|| ಪ್ರಶಾಂತ್ ಖಟಾವಕರ್ ||
No comments:
Post a Comment