ಬದಲಾಯ್ತು ಬದಲಾಯ್ತು
ಎಲ್ಲಾನು ಬದಲಾಯ್ತು.....
ಬಿಟ್ಟೋದ್ರು ಬಿಟ್ಟೋದ್ರು
ಹಳೆ ಸ್ನೇಹಿತರು ಬಿಟ್ಟೋದ್ರು
ಮಾತಿಗಷ್ಟೇ ಚೆನ್ನ
"ಈ ಸ್ನೇಹ ಶಾಶ್ವತ"
ಮೂರೊರುಷ ಮುಗಿದ ಮೇಲೆ
ಮುಂದ್ಯಾರು ಕಾಣೋದಿಲ್ಲ
ಈ ಲೋಕದಲ್ಲುಂಟು
ಸ್ನೇಹದ ಕಥೆಗಳ ಗಂಟು
ಬಲ್ಲವರಾರು ಒಳಗಿನ ಗುಟ್ಟು
ಸಾಗುತಿದೆ ಬಗೆಬಗೆಯ ಬದುಕು
ಸ್ನೇಹದ ಚಿಂತೆಯ ಬಿಟ್ಟು .....
|| ಪ್ರಶಾಂತ್ ಖಟಾವಕರ್ ||
********************
ಸತ್ಯವನ್ನೇ ಬರೆಯಬೇಕು ಅಂತಾ ಬರೆದಾಗ ..
ಈ ಲೋಕದಲ್ಲಿ ಒಬ್ಬರಾದರೂ ಅದನ್ನು ಸುಳ್ಳು ಅಂತಾ ಸಾಧಿಸಿ ತೋರಿಸಲು ಸದಾ ಸಿದ್ದರಾಗಿರುತ್ತಾರೆ ...
ಅವರಿಗೆಲ್ಲಾ ಕೇವಲ ಪ್ರಚಾರ ಬೇಕು ಅಷ್ಟೇ .. ಬೇರೆಯವರ ಬದುಕಿನ ಚಿಂತೆ ಎಳ್ಳಷ್ಟು ಇರೋದಿಲ್ಲಾ...
ಅದೇನೇ ಇರಲಿ .. ನಾವು ಬರೆದದ್ದು ಹತ್ತಾರು ಜನಕ್ಕೆ ಒಳ್ಳೇದು ಆದ್ರೆ ಸಾಕು ಆಲ್ವಾ ...
ಒಟ್ಟಿನಲ್ಲಿ ಓದುಗರು ಇಷ್ಟಾ ಪಟ್ಟು ಓದಿದರಷ್ಟೇ ಸಾಕು ... !!!!!
No comments:
Post a Comment