Monday, 18 February 2013

ನಗುತಾಳೆ ನಗುತಾಳೆ




ನಗುತಾಳೆ ನಗುತಾಳೆ 
ಅವಳೂ ತುಂಬಾನೇ ..!!

ಯಾಕೋ ಏನೋ ಗೊತ್ತೇ ಇಲ್ಲ
ಅವಳ ನಗುವು ನಿಲ್ಲೋದಿಲ್ಲಾ 
ನೋಡೋಕ್ ಅವಳು ಒಳ್ಳೇ ಹುಡ್ಗಿ
ಹುಚ್ಚಿ ಅಲ್ಲ .. !!
ಅವಳೊಂದು ಮಣ್ಣಿನ ಬೊಂಬೆ .. !!

ನಗುತಾಳೆ ನಗುತಾಳೆ 
ಅವಳೂ ತುಂಬಾನೇ ..!!

ನೂರಾರು ದಿನಗಳ ಹಿಂದೆ
ಒಂದ್ ಹುಡ್ಗಿ ಬಂದಿದ್ಲು ನನ್ ಮುಂದೆ
ಯಾರೋ ಏನೋ ಅವಳು ಗೊತ್ತಿಲ್ಲಾ 
ಅವಳಾ ನೆನಪಲ್ಲಿ ನಾ ಗೀಚಿದ್ದ ಚಿತ್ರ 
ಈಗಲೂ ನಗುತಿದೆ ನನ್ನಾ ಮನದಲ್ಲಿ .. !!

ನಗುತಾಳೆ ನಗುತಾಳೆ 
ಅವಳೂ ತುಂಬಾನೇ ..!!

ಆನ್ಲೈನ್ ಸ್ನೇಹ ಪ್ರೀತಿ ಪ್ರೇಮ 
ಎಲ್ಲಾ ಸುಳ್ಳು ಬರಿ ಡ್ರಾಮ 
ಜೀವನ ಅಲ್ಲಾ ಇದು ಸುಳ್ಳು ಸಂತೆ
ಕಳ್ಳ ಹೆಸರಲ್ಲಿ , ಸುಳ್ಳು ಮಾತಿನಲ್ಲಿ 
ಅವನವಳ ಅವಳವನ ಹುಡುಗಾಟದ
ಹುಚ್ಚು ನಗು , ಹುಚ್ಚು ನಗು , ಹುಚ್ಚು ನಗು .. !!

ನಗುತಾಳೆ ನಗುತಾಳೆ 
ಅವಳೂ ತುಂಬಾನೇ ..!!

|| ಪ್ರಶಾಂತ್ ಖಟಾವಕರ್ ||

Saturday, 16 February 2013

ಏನೂ ಆಗದಂತೆ .. ಎಲ್ಲವೂ ಮೊದಲಿನಂತೆ .. !!


ಏನೂ ಆಗದಂತೆ .. ಎಲ್ಲವೂ ಮೊದಲಿನಂತೆ .. !!
************************

ಅವನಿವನಿಗೆ ಹೊಡೆದ
ಇವನವನಿಗೆ ಹೊಡೆದ
ಎಲ್ಲೆಲ್ಲಿ ಎಷ್ಟು ರಕ್ತ
ಯಾರ್ಯಾರು ಅನಾಥರು

ಅವನಲ್ಲಿ ಏನೇನು ಗೆದ್ದ
ಇವನಿಲ್ಲಿ ಎಷ್ಟೆಷ್ಟು ಕದ್ದ
ಎಲ್ಲೆಲ್ಲಿ ಹೇಗೆ ಕದ್ದರು
ಯಾರನ್ನು ಎಲ್ಲಿ ಕೊಂದರು

ಬರಿ ಮಾಹಿತಿಯ ಮಾತಲ್ಲ
ಆ ಸುದ್ದಿ ಸಮಯಗಳು
ಧಾರಾವಾಹಿಗಳಂತೆ
ಇದ್ದಷ್ಟು ಇರದಷ್ಟು ಎಳೆದೆಳೆದು

ಮಾತಾನಾಡಿದರೆ ಆಗಬವುದು
ಹೆಚ್ಚು ರಾಜಕೀಯ ಸಂಸಾರದಲ್ಲೂ
ಮುಂದಾಗುವುದು ಒಂದೆರಡು ಗಂಟೆ 
ತಿದ್ದಿ ತೀಡಿದ ಸುದ್ದಿ ಮುಗಿದ ಮೇಲೆ 

ಏನೂ ಆಗದಂತೆ .. ಎಲ್ಲವೂ ಮೊದಲಿನಂತೆ .. !!

|| ಪ್ರಶಾಂತ್ ಖಟಾವಕರ್ ||

Wednesday, 13 February 2013

ಚುಂಬನ ದಿನ.. :)

Happy KISS Day .. :)

ಪ್ರೀತಿಸುವುದು ತಪ್ಪಲ್ಲ
ಪ್ರೀತಿಸುವ ರೀತಿಯಲ್ಲಿ
ತಪ್ಪು ಇರಬಾರದಷ್ಟೇ

ಚುಂಬಿಸುವುದು ತಪ್ಪಲ್ಲ
ಚುಂಬಿಸುವ ರೀತಿಯಲ್ಲಿ
ತಪ್ಪು ಇರಬಾರದಷ್ಟೇ

ಚಿಂತಿಸುವುದು ತಪ್ಪಲ್ಲ
ಚಿಂತಿಸುವ ರೀತಿಯಲ್ಲಿ
ತಪ್ಪು ಇರಬಾರದಷ್ಟೇ

ಪ್ರೀತಿಸೋ ಹೃದಯಗಳ
ಮೊದಲ ಚುಂಬನದ ಸಿಹಿ
ನೆನಪುಗಳ ಚಿಂತನೆಯಲ್ಲಿ ..!!

|| ಪ್ರಶಾಂತ್ ಖಟಾವಕರ್ ||

❤❤❤❤❤❤❤❤❤❤❤❤❤❤
♥♥♥♥♥♥♥♥♥♥♥♥♥♥♥♥♥ 
ಚುಂಬನ ದಿನದ ಶುಭಾಷಯಗಳು
♥♥♥♥♥♥♥♥♥♥♥♥♥♥♥♥♥
❤❤❤❤❤❤❤❤❤❤❤❤❤❤


Saturday, 9 February 2013

ಖಾಲಿ ಖಾಲಿ .. :( :(


ಖಾಲಿ ಹಾಳೆಯ ಕೊಟ್ಟು ಅವಳು
ಬರೆಯಲು ಹೇಳಿ ಪ್ರೀತಿ ಪದಗಳು
ಖಾಲಿ ಹೃದಯಕೆ ಹೆಜ್ಜೆ ಇಟ್ಟಳು
ಬಣ್ಣ ಬಣ್ಣದ ಕನಸುಗಳ ಕೊಟ್ಟಳು

ಬರೆದೆನು ನಾನು ನೆನಪಿನ ಹಾಡು
ಅವಳಾ ಮುಖದಲ್ಲಿ ನಗುವ ಕಂಡು
ಬರೆದಳು ಅವಳು ಮರೆಯದ ಸಾಲು
ಅಚ್ಚರಿಯ ಆಘಾತ ನನ್ನೆದೆ ನಡುಗಲು

ನಾ ಬರೆದು ಕೊಟ್ಟ ಹಾಡಿನ ಕೆಳಗೆ
ಬರೆದಳವಳು ಪ್ರೀತಿಯ ಇನಿಯನಿಗೆ
ನಾ ನೋಡಲು ನನ್ನ ಹೆಸರಿಲ್ಲ ಅಲ್ಲಿ
          ಬಣ್ಣ ಬಣ್ಣದ ಕನಸುಗಳು ಖಾಲಿ ಖಾಲಿ .. :( :(

|| ಪ್ರಶಾಂತ್ ಖಟಾವಕರ್ ||

Friday, 8 February 2013

ರಾಂಗ್ ನಂಬರ್ .. !!


ಸುಮ್ಮನೆ ನಾ ನಿದ್ದೆ ಮಾಡುತ್ತಿದೆ 
ನನ್ನ ಮೊಬೈಲ್ ಗುಯ್ಯ್ ಗುಟ್ಟಿತು 
ಸ್ವಲ್ಪ ಬೆಳಕು ಮೂಡಿ ಕೋಣೆಯಲ್ಲಿ
ಏನೋ ಆಯಿತೆಂಬ ಆಲೋಚನೆ 

ಕಣ್ಗಳನುಜ್ಜಿ ಮೆಲ್ಲನೇ ಸುತ್ತ ನೋಡಲು
ತುಂಬಾ ತುಂಬಾ ಕತ್ತಲು ಕತ್ತಲು
ಮತ್ತೆ ಕತ್ತನೊರಳಿಸಿ ಇತ್ತ ಮೊಬೈಲ್
ಅದರಲ್ಲೇನು ಮೆಸೇಜು, ಮಿಸ್ ಕಾಲ್ 

ಅಚ್ಚರಿಯ ಸುದ್ದಿ, ಖರ್ಚಾಯಿತು ಬುದ್ಧಿ
ಆದರೂ ಹೊಳೆಯಲಿಲ್ಲ ಯಾರೆಂಬುದು
ನೋಡಲು ಬಲು ವಿಭಿನ್ನ ಆ ನಂಬರ್
ನಿದ್ದೆ ಕೆಡಿಸಿದ್ದದು, ಪ್ರಸ್ತುತ ರಾಂಗ್ ನಂಬರ್ .. !!

|| ಪ್ರಶಾಂತ್ ಖಟಾವಕರ್ ||