Saturday, 16 February 2013

ಏನೂ ಆಗದಂತೆ .. ಎಲ್ಲವೂ ಮೊದಲಿನಂತೆ .. !!


ಏನೂ ಆಗದಂತೆ .. ಎಲ್ಲವೂ ಮೊದಲಿನಂತೆ .. !!
************************

ಅವನಿವನಿಗೆ ಹೊಡೆದ
ಇವನವನಿಗೆ ಹೊಡೆದ
ಎಲ್ಲೆಲ್ಲಿ ಎಷ್ಟು ರಕ್ತ
ಯಾರ್ಯಾರು ಅನಾಥರು

ಅವನಲ್ಲಿ ಏನೇನು ಗೆದ್ದ
ಇವನಿಲ್ಲಿ ಎಷ್ಟೆಷ್ಟು ಕದ್ದ
ಎಲ್ಲೆಲ್ಲಿ ಹೇಗೆ ಕದ್ದರು
ಯಾರನ್ನು ಎಲ್ಲಿ ಕೊಂದರು

ಬರಿ ಮಾಹಿತಿಯ ಮಾತಲ್ಲ
ಆ ಸುದ್ದಿ ಸಮಯಗಳು
ಧಾರಾವಾಹಿಗಳಂತೆ
ಇದ್ದಷ್ಟು ಇರದಷ್ಟು ಎಳೆದೆಳೆದು

ಮಾತಾನಾಡಿದರೆ ಆಗಬವುದು
ಹೆಚ್ಚು ರಾಜಕೀಯ ಸಂಸಾರದಲ್ಲೂ
ಮುಂದಾಗುವುದು ಒಂದೆರಡು ಗಂಟೆ 
ತಿದ್ದಿ ತೀಡಿದ ಸುದ್ದಿ ಮುಗಿದ ಮೇಲೆ 

ಏನೂ ಆಗದಂತೆ .. ಎಲ್ಲವೂ ಮೊದಲಿನಂತೆ .. !!

|| ಪ್ರಶಾಂತ್ ಖಟಾವಕರ್ ||

No comments:

Post a Comment