ನಗುತಾಳೆ ನಗುತಾಳೆ
ಅವಳೂ ತುಂಬಾನೇ ..!!
ಯಾಕೋ ಏನೋ ಗೊತ್ತೇ ಇಲ್ಲ
ಅವಳ ನಗುವು ನಿಲ್ಲೋದಿಲ್ಲಾ
ನೋಡೋಕ್ ಅವಳು ಒಳ್ಳೇ ಹುಡ್ಗಿ
ಹುಚ್ಚಿ ಅಲ್ಲ .. !!
ಅವಳೊಂದು ಮಣ್ಣಿನ ಬೊಂಬೆ .. !!
ನಗುತಾಳೆ ನಗುತಾಳೆ
ಅವಳೂ ತುಂಬಾನೇ ..!!
ನೂರಾರು ದಿನಗಳ ಹಿಂದೆ
ಒಂದ್ ಹುಡ್ಗಿ ಬಂದಿದ್ಲು ನನ್ ಮುಂದೆ
ಯಾರೋ ಏನೋ ಅವಳು ಗೊತ್ತಿಲ್ಲಾ
ಅವಳಾ ನೆನಪಲ್ಲಿ ನಾ ಗೀಚಿದ್ದ ಚಿತ್ರ
ಈಗಲೂ ನಗುತಿದೆ ನನ್ನಾ ಮನದಲ್ಲಿ .. !!
ನಗುತಾಳೆ ನಗುತಾಳೆ
ಅವಳೂ ತುಂಬಾನೇ ..!!
ಆನ್ಲೈನ್ ಸ್ನೇಹ ಪ್ರೀತಿ ಪ್ರೇಮ
ಎಲ್ಲಾ ಸುಳ್ಳು ಬರಿ ಡ್ರಾಮ
ಜೀವನ ಅಲ್ಲಾ ಇದು ಸುಳ್ಳು ಸಂತೆ
ಕಳ್ಳ ಹೆಸರಲ್ಲಿ , ಸುಳ್ಳು ಮಾತಿನಲ್ಲಿ
ಅವನವಳ ಅವಳವನ ಹುಡುಗಾಟದ
ಹುಚ್ಚು ನಗು , ಹುಚ್ಚು ನಗು , ಹುಚ್ಚು ನಗು .. !!
ನಗುತಾಳೆ ನಗುತಾಳೆ
ಅವಳೂ ತುಂಬಾನೇ ..!!
|| ಪ್ರಶಾಂತ್ ಖಟಾವಕರ್ ||
ಬಹಳ ಜೀವನ ತತ್ವ ಇರುವ ಕವನವಿದು.
ReplyDelete