Wednesday, 11 July 2012

ಮಾತು ನಿನ್ನ ಮಾತು

ಮಾತು ನಿನ್ನ ಮಾತು
******************************************

ಮಾತು ನಿನ್ನ ಮಾತು
ಹೃದಯದ ಕದ ತಟ್ಟಿತು
ಆ ಸದ್ದಿಗೆ ಮನ ಹಾಡಿತು
ಪ್ರೀತಿಯಿಂದ ನಿನ್ನ ಕೂಗಿತು

ಸಂಗಾತಿ ನಿನ್ನ ಪ್ರೀತಿ
ಸವಿ ಘಳಿಗೆಯ ಸಂಗತಿ
ಸುಮ್ಮನೇಕೆ ನನ್ನ ಕಾಡುತಿ
ಎದೆ ತಟ್ಟಿ ನೀನೇಕೆ ಓಡುತಿ

ಬಾರೆ ಚೆಲುವೆ ನೀನೆನ್ನ ಬಳಿಗೆ
ನಿನ್ನ ಗೆಜ್ಜೆ ಸದ್ದುಗಳ ಆ ಘಳಿಗೆ
ಚಿಗುರುವುದು ಪ್ರೀತಿಯ ಸಂಪಿಗೆ
ಗಮಗಮ ಪರಿಮಳ ಮನದೊಳಗೆ

ಹತ್ತಿರ ಬಂದು ನೀನೆನ್ನ ಬಳಿಯಲ್ಲಿ
ತೋಳಿಂದ ಬಳಸಿ ನಿನ್ನಪ್ಪುಗೆಯಲ್ಲಿ
ಮುತ್ತೊಂದ ಕೊಡು ನಡು ರಾತ್ರಿಯಲ್ಲಿ
           ಹತ್ತಿಕೊಳ್ಳಲಿ ಪ್ರೀತಿಯ ಬೆಳಕು ಮನದಲ್ಲಿ .. :) :)

|| ಪ್ರಶಾಂತ್ ಖಟಾವಕರ್ ||
ಆಜಾದ್ ಸರ್ ಅವರಿಂದ ಕೊನೆಯ ಸಾಲಿನಲ್ಲಿ ಒಂದು ಚೆಂದದ ಬದಲಾವಣೆ ...  >>
ಹತ್ತಿಕೊಳ್ಳಲಿ ಒಣಗಿದೆದೆ ಪ್ರೀತಿ ಹೊತ್ತಿನಲ್ಲಿ

1 comment:

  1. ಕರೆಯೋಲೆ ಚೆನ್ನಾಗಿದೆ. ಬಂದರೆ ಆಕೆಗೂ ಅಕ್ಕರೆಯ ಲಾಭವೇ ಇದೆ.

    ಒಳ್ಳೆಯ ಲಯ ಪೂರ್ಣ ಕವನ ಗೆಳೆಯ.

    ReplyDelete