Friday, 27 July 2012

ಬೆಂಕಿ ಕಡ್ಡಿಯ ಬದುಕಿದು .. :)

ಬೆಂಕಿ ಕಡ್ಡಿಯ ಬದುಕಿದು
*********************************
ಒಂದು ಕಿಡಿ ದ್ವೇಷ ಹರಡಿ
ಈ ಪ್ರೀತಿಯ ಹೃದಯ ನಾಶ
ಬೆಂಕಿ ಕಡ್ಡಿಯ ಬದುಕಿದು
ಕಡ್ಡಿ ಉರಿಯದೆ ಬೆಳಕು ಇಲ್ಲ

ಕಡ್ಡಿ ಉರಿದ ಮೇಲೆ
ಉಳಿಯುವುದೆಲ್ಲ ಬೂದಿ
ಡಬ್ಬಿಯಿಂದ ಇನ್ನೊಂದು
ಕಡ್ಡಿ ಹೊರಬರುವುದು ಬೆಳಗಲು

ಈ ಜಗದ ನಿಯಮ
ಹುಟ್ಟು ಸಾವು ಬೆಂಕಿ
ಕಡ್ಡಿಯ ಜೀವನದಂತೆ
ಡಬ್ಬಿಯ ಒಳಗೆ ಕತ್ತಲು
ಹೊರಗೆ ಬಂದರೆ ಬೆಳಕು
ಉರಿದು ಸಾಯುವ ಅಳುಕು
ಆದರೂ ಬೆಳಕು ಬೇಕು
ತೋರಿಸಲು ಜಗದ ಕೊಳಕು

ಓ ಮಾನವ 
ಮೊದಲು ನಿನ್ನ ಮನದ
ಕೊಳಕ ತಿಳಿಯಲು , ತೊಳೆಯಲು
ಸ್ನೇಹದ ಕಡ್ಡಿಯ ಗೀರು
ಪ್ರೀತಿಯ ಬೆಳಕನ್ನು ಬೀರು
ನಿನ್ನೆದೆಯು ಹತ್ತಿ ಉರಿದರೂ
       ಶಾಂತಿಯ ಮಂತ್ರವ ಸಾರು .. :)

     || ಪ್ರಶಾಂತ್ ಖಟಾವಕರ್ ||


1 comment:

  1. ಒಳ್ಳೆಯ ಸಂದೇಶಯುಕ್ತ ಕವನ.

    ಕುತ್ಸಿತ ಮನಸ್ಸುಗಳು ತಮ್ಮ ಕೊಳಕನ್ನು ಬೆಂಕಿಗಡ್ಡಿ ಗೀರೂವ ಮೂಲಕ ಕತ್ತಲನ್ನು ಹೋಗಲಾಡಿಸಿ, ಬೆಳಕ ತುಂಬಿಕೊಳ್ಳಬೇಕು.

    ReplyDelete