ಕಿರುನಗೆಯ ನನ್ಮೇಲೆ ಹಾಕೆ .. :) :)
***********************************
ಏಕೆ ನೀನೇಕೆ ಹೀಗೇಕೆ .. ?
ನನ್ನ ಮೇಲೆ ಮುನಿಸೇಕೆ
ತುಟಿಯಂಚಿಂದ ಬಿಸಾಕೆ
ಕಿರುನಗೆಯ ನನ್ಮೇಲೆ ಹಾಕೆ
ಹಸಿರು ಗಾಜಿನ ಬಳೆಗಳು ಸಾಕೆ
ಬೆಳ್ಳಿ ಬಂಗಾರದ ಒಡವೆಗಳು ಬೇಕೇ
ನೀನೆನ್ನ ಬಳಿ ಇರಲು ನನಗದು ಸಾಕೆ
ನೀನೊಮ್ಮೆ ನಗಲು ನಿನಗೇನು ಬೇಕೇ
ಅಕ್ಕಪಕ್ಕದವರ ಮನೆಯ ಚಿಂತೆ ಏಕೆ
ಅವರೇನಾದರೂ ತರಲಿ ಬಿಡು ನಿನಗೇಕೆ
ನಾಲ್ಕು ಗಾಲಿಯೋ , ಗೋಲಿಯೋ ಅದೇಕೆ
ನಾನಿಲ್ಲವೇ ನಿನಗೇನು ಬೇಕು ಕೊಡಿಸೋಕೆ
ನನ್ನ ಮೇಲೆ ಮುನಿಸೇಕೆ
ಏಕೆ ನೀನೇಕೆ ಹೀಗೇಕೆ .. ?
|| ಪ್ರಶಾಂತ್ ಖಟಾವಕರ್ ||
ನೋಡಮ್ಮ ಹುಡುಗಿ,
ReplyDeleteನಮ್ಮ ಪ್ರಶಾಂತು ನಿನಗಾಗಿ ಏನೆಲ್ಲಾ ಹೊತ್ತು ತರಲು ತಯಾರಿದ್ದಾನೆ ಅಂತ. ಇನ್ನಾದರೂ ನಗು ಬಿಸಾಕಿ ನಮ್ಮ ಹುಡುಗನನ್ನೂ ನಗಿಸು.
ಅಕ್ಕಪಕ್ಕದವರ ಮನೆಯ ಚಿಂತೆ ಏಕೆ
ReplyDeleteಅವರೇನಾದರೂ ತರಲಿ ಬಿಡು ನಿನಗೇಕೆ
ನಾಲ್ಕು ಗಾಲಿಯೋ , ಗೋಲಿಯೋ ಅದೇಕೆ
ನಾನಿಲ್ಲವೇ ನಿನಗೇನು ಬೇಕು ಕೊಡಿಸೋಕೆ
ನನ್ನ ಮೇಲೆ ಮುನಿಸೇಕೆ
ಏಕೆ ನೀನೇಕೆ ಹೀಗೇಕೆ ......hahaha..Chennagide...