ಬ್ರಹ್ಮನಿಗೊಂದು ಪತ್ರವ ಬರೆದೆ
ನನ್ನ ಪ್ರೇಯಸಿ ಹೇಗಿರಬೇಕೆಂದು
ವಾಯುದೇವನು ಉತ್ತರ ತಂದನು
ಬಿರುಗಾಳಿಯಲ್ಲಿ ತೇಲಿ ಬಂತು ಬಟ್ಟೆಯೊಂದು
ನನ್ನ ಮುಖವನು ಮುಚ್ಚಿ , ನಡುಕವು ಹೆಚ್ಚಿ
ನಿಂತಲ್ಲೇ ನಿಂತೇ ನಾನು , ಏನಿದೇನಿದು ?
ದೂರದಿಂದ ಹಾರಿ ಬಂದ "ದುಪಟ್ಟಾ"
ಪತ್ರದ ಉತ್ತರ ಬ್ರಹ್ಮದೇವ ಕೊಟ್ಟ
ಹಸಿರು ಬಣ್ಣದ ಬಟ್ಟೆಯ ಹಾರಿ ಬಿಟ್ಟ
ಅದು ಹಾರಿ ಬಂದ ದಿಕ್ಕಿನೆಡೆಗೆ ನನ್ನ ನೋಟ
ಮನವು ಬಯಸಿದ ಚೆಲುವೆಯ ಕಂಡು
ಆರಂಭವಾಯಿತು ಅವಳೆಡೆಗೆ ನನ್ನ ಓಟ
ಮರೆತು ಹೋದೆ ನಾನಲ್ಲೇ ಸಕಲ ಆಟ ಪಾಠ
ಅವಳಿಗಾಗಿ ಎಲ್ಲರಿಗೂ ಹೇಳಿದೆ ... ಟಾಟಾ ಟಾಟಾ .. !! ...... :)
|| ಪ್ರಶಾಂತ್ ಖಟಾವಕರ್ ||
No comments:
Post a Comment