ನಾನೇನೂ ಬ್ರಹ್ಮನಲ್ಲ
ನನಗೇನೂ ತಿಳಿದಿಲ್ಲ
ಆದರೂ ಹೊಸದೊಂದ ಸೃಷ್ಟಿಸುವ ಬಯಕೆ
ಬರೆದೆ ನಾನು ನಾಲ್ಕು ನುಡಿಗಳ ನೆನಪಿಗಾಗಿ
ನಾನೇನೂ ಈಶ್ವರನಲ್ಲ
ನನಗೇನೂ ತಿಳಿದಿಲ್ಲ
ಆದರೂ ಜೀವನದ ಕಹಿಯನ್ನೆಲ್ಲಾ ಸವಿಯುವೆ
ನನ್ನ ನಾಲ್ಕು ದಿನದ ಸಿಹಿಯನ್ನು ಹಂಚುತ ಬಾಳುವೆ
ನಾನೇನೂ ವಿಶ್ವರೂಪಿ ವಿಷ್ಣುವಲ್ಲ
ನನಗೇನೂ ತಿಳಿದಿಲ್ಲ
ಆದರೂ ಹತ್ತಾರು ಮುಖಗಳು ನನ್ನಲ್ಲಿ ಮೂಡಲು
ಜನಮನಗಳ ದೃಷ್ಟಿ ದಿಕ್ಕುಗಳ ಚಿಂತನೆಗೆ ನಾನೇನ ಮಾಡಲಿ
ನಾನೇನೂ ಅಲ್ಲ .. ನಾನೇನೂ ಅಲ್ಲ ..
ನನಗೇನೂ ತಿಳಿದಿಲ್ಲಾ .. ನನಗೇನೂ ತಿಳಿದಿಲ್ಲಾ .. !!
|| ಪ್ರಶಾಂತ್ ಖಟಾವಕರ್ ||
No comments:
Post a Comment