Sunday, 25 November 2012

ಹೇ ಪ್ರೀತಿ .. ಹೇ ಪ್ರೀತಿ ..



ಹೇ ಪ್ರೀತಿ .. ಹೇ ಪ್ರೀತಿ ..
ನೀನೇಕೇ .. ಈ ರೀತಿ .. !!

ನನ್ನಷ್ಟಕ್ಕೆ ನಾ ಸುಮ್ಮನೆ ಇದ್ದೆ
ಏನೋ ಹೇಳಲು ನೀನೇ ಕರೆದೆ
ಬಂದರೆ ನಾ ನಿನ್ನಾ ಬಳಿಗೆ
ಬಂಧಿಸಿದೆ ನೀ ನಿನ್ನಾ ಎದೆಯೊಳಗೆ

ಪಕ್ಕದಲ್ಲೇ ಇತ್ತು ನಿನ್ನಾ ಹೃದಯ
ಮಾತಾನಾಡು ಅಂತು ಪ್ರೀತಿ ವಿಷಯ
ಇದು ನನ್ನ ನಿನ್ನ ಹೃದಯಗಳ ವಿಷಯ
ಪ್ರೀತಿಯ ಬೆಸುಗೆಯಲ್ಲಿ ನಮ್ಮಿಬ್ಬರಾ ಹೃದಯ

ಹೇ ಪ್ರೀತಿ.. ಹೇ ಪ್ರೀತಿ.. ಇದು ಮೊದಲಾ ಸಲ
ಹೇ ಪ್ರೀತಿ.. ಹೇ ಪ್ರೀತಿ.. ನೀನು ನಕ್ಕರೆ ಕಿಲಕಿಲ
ಹೇ ಪ್ರೀತಿ.. ಹೇ ಪ್ರೀತಿ.. ನನ್ನೊಳಗೆ ತಳಮಳ
       ಹೇ ಪ್ರೀತಿ.. ಹೇ ಪ್ರೀತಿ.. ನನಗಿದು ಹೊಸಾ ರೀತಿ .. :)

ಹೇ ಪ್ರೀತಿ .. ಹೇ ಪ್ರೀತಿ ..
ನೀನೇಕೇ .. ಈ ರೀತಿ .. !!

|| ಪ್ರಶಾಂತ್ ಖಟಾವಕರ್ ||

1 comment:

  1. ಪ್ರೀತಿ ಪ್ರೀತಿ ಪ್ರೀತಿ..
    ಮೂರು ಸಾರಿ ಬಂದರೆ ಮೂರು ಲೋಕವು ಸುತ್ತಿದ ಹಾಗೆ.
    ಆ ಪ್ರೀತಿಯ ಗುಂಗಲ್ಲೇ ಗೆಲ್ಲಬಹುದು ಮೂರು ಲೋಕಗಳನ್ನೇ..
    ಸುಂದರ ಸಾಲುಗಳು ಸರ್

    ReplyDelete