Friday, 7 December 2012

ಅಯ್ಯಯ್ಯೋ ಅಯ್ಯಯ್ಯೋ ಅಯ್ಯಯ್ಯಯೋ ...... !!


ಅಯ್ಯಯ್ಯೋ
ಅಯ್ಯಯ್ಯೋ
ಅಯ್ಯಯ್ಯಯೋ

ಹೊಡೆದಾಟ
ಬಡೆದಾಟ
ಏತಕೀ ಹೋರಾಟ

ಇದು ನನ್ನ ಗುಂಪು
ಅದು ನಿನ್ನ ಗುಂಪು
ಅಧಿಕಾರ ನನಗೆ ಬೇಕು
ನಾ ಹೇಳಿದ್ದೆ ಆಗಬೇಕು

ಹಿಂಗೆಲ್ಲಾ
ಜಗ್ಗಡ್ತಾ ಕಿತ್ತಾಡ್ತಾ
ಅದ್ಯಾವ ಸೇವೆಯೋ

ಮನುಷ್ಯ ಮನುಷ್ಯನ
ಕುಸ್ತಿ ಇದ್ದಂಗೆ
ಮನಸ್ಸು ಮನಸ್ಸಿನ
ಜಗಳದಾಗೆ

ಪ್ರಳಯ ಆಗದೆ ಇದ್ರು
ಜನರ ಪ್ರಾಣ ಹೋಗುತ್ತೆ
ಈ ಭೂಮಿ ಖಾಲಿ ಆಗುತ್ತೆ
ಪ್ರಳಯಕ್ಕಿಂತ ದೊಡ್ಡ ಪ್ರಳಯ
ಮನುಷ್ಯ ಮನುಷ್ಯ
       ಹಿಂಗ್ಯಾಕೆ ಹೊಡೆದಾಡ್ತಾನಯ್ಯೋ ....

ಅಯ್ಯಯ್ಯೋ
ಅಯ್ಯಯ್ಯೋ
          ಅಯ್ಯಯ್ಯಯೋ ........

|| ಪ್ರಶಾಂತ್ ಖಟಾವಕರ್ ||

1 comment:

  1. Sega Genesis Channel VR: This is one of the best ways to connect
    The Genesis Channel VR has over best youtube to mp3 converter app 10 different channels, so you have a choice of channels to use with the best video games. The Sega Channel VR is a

    ReplyDelete