Tuesday, 18 December 2012

ನೀನೇ ಹೇಳು ಗೆಳತಿ .... :)



ನೀನೇ ಹೇಳು ಗೆಳತಿ .... :)
**************************

ನಿದ್ದೆಯು ಬಾರದೆ
ನಡು ರಾತ್ರಿಯಲ್ಲಿ
ನಿನ್ನ ನೆನಪಾದರೆ
ನಾನೇನ ಮಾಡಲಿ
ನೀನೇ ಹೇಳು ಗೆಳತಿ ....

ನಡುಗುತ ಚಳಿಯಲಿ
ನಾನೊಬ್ಬನೇ ಕೋಣೆಯಲಿ
ನೀನೇಕೆ ಬರಲಿಲ್ಲ ಕನಸಲಿ
ನನಗೀಗ ನಿದ್ದೆಯೇ ಇಲ್ಲ
ನಾನೇನ ಮಾಡಲಿ
ನೀನೇ ಹೇಳು ಗೆಳತಿ ....

ನೀ ನೆನೆದಾಗೆಲ್ಲಾ
ನಾ ನಿನ್ನ ಬಳಿ ಬರುವೆನೆಂದು
ನೀನೇ ಹೇಳಿದ ಮಾತು ಮರೆತೆಯಾ
ನಾನೇನ ಮಾಡಲಿ ಈಗ
ನೀನೇ ಹೇಳು ಗೆಳತಿ .... :)

|| ಪ್ರಶಾಂತ್ ಖಟಾವಕರ್ ||

No comments:

Post a Comment