Thursday, 13 December 2012

ಯಾರೋ ಒಬ್ಬಳು ಚೆಲುವಿ .. :)



ಯಪ್ಪೋ ಯಪ್ಪೋ
ಯವ್ವೋ ಯವ್ವೋ
ಯಾರೋ ಒಬ್ಬಳು ಚೆಲುವಿ

ಬರ್ತಾಳಲ್ಲೋ ಕನಸಿನಾಗ
ಕುಣಿತಾಳಲ್ಲೋ ಮನಸಿನಾಗ
ನಡುರಾತ್ರಿಯಲ್ಲಿ ಮಲಗಿದ್ದಾಗ
ನಾನೊಬ್ಬನೇ ಕೋಣೆಯೊಳಗ

ಥಯ್ಯಾ ಥಕ .. ಥಕ ಥಕ .. ಥಯ್ಯಾ ಥಕ .. 
ಥಯ್ಯಾ ಥಕ .. ಥಕ ಥಕ .. ಥಯ್ಯಾ ಥಕ ..

ಹೆಜ್ಜಿ ಇಟ್ಟರ ಎದಿ ಮ್ಯಾಲ
ಒಳಗೊಳಗೆಲ್ಲಾ ಕಿಲ ಕಿಲ
ಕಣ್ಣು ಬಿಟ್ರ ಕಾಣೋದಿಲ್ಲ
ಹೊರಗೆಲ್ಲಾ ಭಾರಿ ತಳಮಳ

ಥಯ್ಯಾ ಥಕ .. ಥಕ ಥಕ .. ಥಯ್ಯಾ ಥಕ .. 
ಥಯ್ಯಾ ಥಕ .. ಥಕ ಥಕ .. ಥಯ್ಯಾ ಥಕ ..

ಯಾರೋ ಯಾರೋ ಅವಳ್ಯಾರೋ
ಅವಳು ಬಂದ್ಲಂದ್ರ ನಂಗ ನಿದ್ದಿ ಬರೋದಿಲ್ಲ
ಯಾಕೋ ಏನೋ ಹಿಂಗ್ಯಾಕೋ 
ಅವಳು ನಕ್ಳಂದ್ರ ನಂಗ ಕೈ ಕಾಲಾಡೋದಿಲ್ಲ

ಯಪ್ಪೋ ಯಪ್ಪೋ
ಯವ್ವೋ ಯವ್ವೋ
ಯಾರೋ ಒಬ್ಬಳು ಚೆಲುವಿ .. :)

ಥಯ್ಯಾ ಥಕ .. ಥಕ ಥಕ .. ಥಯ್ಯಾ ಥಕ .. 
ಥಯ್ಯಾ ಥಕ .. ಥಕ ಥಕ .. ಥಯ್ಯಾ ಥಕ .. !!

|| ಪ್ರಶಾಂತ್ ಖಟಾವಕರ್ ||



No comments:

Post a Comment