Sunday, 5 February 2012

ಈ ಚಿತ್ರಕ್ಕೆ ಕವಿತೆ ಬರೆಯಿರಿ.. :)
***********************************************

:(
ಪರದೇಶ ವ್ಯಾಮೋಹ ಕಣ ಕಣದಲ್ಲೂ ತುಂಬಿತ್ತು,
ಹೆತ್ತ ತಾಯಿಯ ನೆನಪು ಮರೆತು ಹೋಗಿತ್ತು.
ಆಂಗ್ಲ ಭಾಷೆಯ ಮಸಾಲ ನಾಲಿಗೆಗೆ ರುಚಿಸಿತ್ತು,
ಅ ಆ ಓದಿದ ಕನ್ನಡಿಗನಿಗೆ ರಕ್ತ ಕಣ್ಣಿರು ಬಂದಿತ್ತು.
:( :( :( 
***********************************************

ಆಗ ನೀ ಪುಟ್ಟ ಹುಡುಗ
ಏನೂ ಅರಿಯ ಮುಗ್ಧ ಬಾಲಕ
ಓದುವ ಬದಲು ನೀ ಮಾಡಿದೆ ಮನೆ ಕೆಲಸ
ಪುಸ್ತಕದ ಬದಲಿಗಿತ್ತು ನೂರೊಂದು ಕಾಯಕ

ಹೆಗಲ ಮೇಲಿತ್ತು ಮಣ್ಣು ತುಂಬಿದ ಬುಟ್ಟಿ
ಕೈಯ್ಯಲಿ ಹಾರೆ ಗುರಾಣಿ ಗುದ್ದಲಿಗಳು.
ಗದ್ದೆಗೆ ನೀರ ಬಿಟ್ಟು, ಸಸಿಯ ನೆಟ್ಟು
ನೂರಾರು ಜನರ ಹೊಟ್ಟೆ ತುಂಬಿಸಿದೆ ನೀ

ಓದುವುದ ಅರಿಯೆ ನೀ
ಬರೆಯುವುದ ತಿಳಿಯೆ ನೀ
ಆದರೂ..
ಇಂದು ನೀನಾಗಿರುವೆ ನಿಮ್ಮನೆಗೆ ಯಜಮಾನ
ಇರುವದು ಮನೆ ಸಮಾಜದಲಿ ಒಳ್ಳೆ ಮಾನ
ಓದುವುದ ಬಿಟ್ಟು ಅಂದು ಮಾಡಿದ ಕೆಲಸಕೆ
ಇಂದು ನಿನಗೆ ಬರುವುದಿಲ್ಲವೇ ರಕ್ತ ಕಣ್ಣೀರು. 
***********************************************

ಸುಕ್ಕು ಗಟ್ಟಿ ನೆತ್ತರೆಲ್ಲ ತಣ್ಣಗಾಗಿ ... ನನ್ನ ಇತಿಹಾಸ 
ನೋಡಿದರೆ ... ಎಲ್ಲ ಖಾಲಿ ... 
ಬದುಕ ಹಾಳೆಯಲಿ.. ಏನೆಲ್ಲಾ ತುಂಬಬೇಕಿದೆ ..
ಕಳೆದು ಹೋದ ದಿನಗಳ ನೆನಪಿಸಿ ..
ಹಾಳೆ ತುಂಬ ಹೊರಟರೆ ...
ನನ್ನ ಭೂತ, ವರ್ಥಮಾನ ತಾಳೆಯಾಗದೆ...
ನನ್ನನ್ನೇ ಹಿಯಾಳಿಸಿ ದಕ್ಕೆ ..
ಕಣ್ಣಿಂದ ನೆತ್ತರಿಳಿಯಿತು...
ನೀರೆಲ್ಲ ಖಾಲಿಯಾಗಿ ...
***********************************************

ಬರೆದ ಕಥೆಗಳೆಲ್ಲ 
ಇಂದು ಈ ಪುಸ್ತಕದ ವಶವಾಗಿದೆ 
ಜೀವನ ನನ್ನ 
ಸಾಹಿತ್ಯಕ್ಕೆ ಶರಣಾಗಿದೆ 

ಕಾಗದಕ್ಕೆ ಕೊರತೆ ಇಲ್ಲ 
ಪೆನ್ನಿನ ಶಾಯಿ ಮುಗಿಯುದಿಲ್ಲ
ಬರೆಯದೆ ದಾರಿ ಇಲ್ಲ 
ಆದರೆ ಓದುವವರು ಯಾರಿಲ್ಲ

ಎಷ್ಟೋ ಬರೆದ ಸಾಹಿತ್ಯ 
ಇಂದು ಮಣ್ಣ ಪಾಲಾಗಿದೆ 
ನನ್ನದೇನು ಅಂತಸ್ತು 
ಜೀವನ ಕಣ್ಣೀರಾಗಿದೆ
by ಹರೀಶ್ ಶೆಟ್ಟಿ, ಶಿರ್ವ
***********************************************

ಕನ್ನಡ ನುಡಿಯಲು ಯಾಕೀ ಅಂಜಿಕೆ ??
ಕನ್ನಡ ಕಲಿಯಲು ಯಾಕೀ ತಾತ್ಸಾರ ??
ಆಂಗ್ಲದ ವ್ಯಾಮೋಹ ಮನಸನು ಇಡಿದು ??
ಕನ್ನಡವ ಬಿಟ್ಟು ಓದಲು ಮರೆತು
ಓದಲು ಕೊಟ್ಟರೆ ಅಳುವುದೂ ಏಕೆ ??
ಬಿಡದಿರು ಬಿಡದಿರು ನಿನ್ನ ಕನ್ನಡವ
ಇಂಗ್ಲಿಷ್ ಮರೆತರು ಕನ್ನಡವ ಮೇಲೇರು
ತಾಯಿಯಾ ಬಿಟ್ಟ ಮಗನಾಗಬೇಡ
ತಾಯಿಗೆ ತಕ್ಕ ಮಗನೆನಿಸಿಕೋ
ಆ ತಾಯಿಯೇ ಕನ್ನಡ ನುಡಿಯಾಗಿರಲಿ .... 
***********************************************

ಗಡ್ಡಾ ಬಿಟ್ಟು ಗುಡ್ಡಾ ಸುತ್ತಿ 
ಅನುಭವಗಳ ಬರೆದು ಗುಡ್ಡೆ ಹಾಕುವಷ್ಟರಲ್ಲಿ
ಜಗತ್ತು ಮರೆತಿತ್ತು ನನ್ನ
ನಾನಾಗಿದ್ದೆ ಅನಾಮಿಕ
ಅಕ್ಷರಗಳು ಗಹಗಹಿಸಿ ಸಂಭ್ರಮಿಸುತ್ತಿದ್ದವು
ಪುಸ್ತಕಗಳು ನನಗೆ ಬಹಿಷ್ಕರಿಸಿದವು
ಓದುಗಪ್ರಭು ಕರುಣಿಸಲಿಲ್ಲ ಕನಿಷ್ಟತನವನ್ನು.... 
***********************************************

ವಿಧ್ಯೆ ಕಲಿಯದೇ ಹೋದೆ ಬಾಲ್ಯದಲಿ
ಬೇಕೆನಿಸಲಿಲ್ಲ ಅದು ಯೌವನದಲಿ
ಇಂದು ಬೇಯುತಿದೆ ಮನ ಪಶ್ಚಾತ್ತಾಪದಲಿ 
ಹರಿಯುತಿದೆ ಕಣ್ಣೀರಿನ ರೂಪದಲಿ 
***********************************************

ನನ್ನ ಒಳಗೆ ನೂರಾರು 
ದ್ವಂದ್ವ ಯುದ್ದ ನಡೆದಿರಲು
ಪದಗಳಿಗೆ ಪದ ಹುಡುಕುತ್ತ 
ತಪ್ಪುಗಳಿಗೆ ಸರಿ ಹುಡುಕುತ್ತ..

ಗಣಿತಕ್ಕೆ ಮಿತಿ ಇಲ್ಲ 
ಶುನ್ಯಕ್ಕೆ ಬೆಲೆ ಇಲ್ಲ..
ಕೂಡಿ ಕಳೆಯುವುದಕ್ಕೂ 
ಮನದಲ್ಲಿ ಅಂಕಿಗಳಿಲ್ಲ 

ಸಿರಿವಂತ ಭಾಷೆ ಇದು 
ನನ್ನೊಳಗೂ ಅಣಕಿಸುವುದು 
ಕಡೆದು ಒಡೆದು ನಿಂತಿಹುದು.
ಬುದ್ದಿ ಹೀನ ನಾನು ಪಂಡಿತನ ಪರಿ ನನಗೆ ಸಲ್ಲದು..

ಮಣ್ಣ ಹೊತ್ತು ಹಾಕಲಿಲ್ಲ 
ಸಗಣಿ ಬೆರಣಿ ಆಗಲಿಲ್ಲ 
ಕೊಡಲಿಗೆ ಸೀಳು ಕಾಣಲಿಲ್ಲ 
ಸುತ್ತಿಗೆಯ ಹೊಡೆತಕ್ಕೆ 
ಬಿರುಕು ಬಿಟ್ಟ ಮನ ಶಿಲೆ ಆಗಲಿಲ್ಲ 

ಗುರು ಬೇಕು ಶಿಷ್ಯನಿಗೆ 
ಪೆಟ್ಟು ಬೇಕು ಕೈ ಗಿಣ್ಣಿಗೆ 
ಬುದ್ದಿ ಬೇಕು ದೀನನಿಗೆ 
ಒಲಿವಳು ಆ ಕನ್ನಡಾಂಬೆ 
ಶ್ರದ್ದೆ ಇಟ್ಟ ಬುದ್ದಿವಂತನಿಗೆ
***********************************************

ಏನಾ ಹೇಳಲೀ ನಾ ? 
ಓದುವಂತಾ ವಯಸ್ಸಿನಲ್ಲಿ ಓದದೇ ಸುಮ್ಮನಾದೆ
ಈಗ ಇಂಗ್ಲೀಷ್ ಓದೆಂದಲ್ಲಿ ಏನುಮಾಡಲಿ

ಕನ್ನಡವ ಬಿಟ್ಟು ಏನನ್ನೂ ಓದಲಾರೆ
ಅನ್ಯ ಬಾಷೆಗಳಿಗೆ ನಾ ಮಣೆಯಾಗಲಾರೆ
ಇದ್ದರೂ ಕನ್ನಡಿಗ ಹೋದರೂ ಕನ್ನಡಿಗ
ಕನ್ನಡಾಂಬೆಗೆ ನನ್ನ ಮೇಲೆ ಕರುಣೆ ಬರಲಿ 
***********************************************

ಏನೆಂದು ಬರೆಯಲಿ ಹೇಳು ಗೆಳೆಯ 
ನಿನ್ನ ಚಿತ್ರದ ಕರುಣಾಜನಕ ಕಥೆಯ
ನಮ್ಮ ಮನೆಯ ಪುಟ್ಟ ಮಗು ಕೂಡ
ಕಣ್ಣೇರ ಸುರಿಸುತಿತ್ತು ನಿನ್ನ ಚಿತ್ರಕೆ!
***********************************************

ಅ ಆ ಕಲಿಯಬೇಕು ಎಂಬ ಕನಸು ಅವನದು 
ನಾಳೆಯ ಹೊಟ್ಟೆಪಾಡಿನ ಚಿಂತೆ ಅವನ ಮನೆಯವರದು 
ಹಠ ಬಿಡದೆ ಕಲಿತರು ಅಕ್ಷರ .....ಹಸಿವಿನ ಪ್ರಭಾವದ ಮುಂಧೆ 
ಎಲ್ಲ ಶೂನ್ಯ 
***********************************************

ನೆನಪಾದೆ ಇಂದು ನೀನು ... ಹಾಗೆ ಸುಮ್ಮನೆ...

ಹೇ ಗೆಳತಿ
ಅಂದು ನೀ ಕೊಟ್ಟ
ಪ್ರೀತಿಯ ಸಿಹಿ ಮುತ್ತುಗಳನ್ನ
ಮರಯಲಾದೀತೆ ಇಂದು..?

ಹೇ ಗೆಳತಿ
ಅಂದು ನೀನಾಡಿದ
ಪಿಸುಮಾತಿನ 
ಕಲರವವನ್ನ
ಮರಯಲಾದೀತೆ ಇಂದು..?..... 
++++++++++++++++++++++++++++++++++++++++++++++++

shivappa kayo thande
mooru loka swamy deva 
kannada bittu 
angla mathadi vade tindeno,,,,,,,,,
shivane kapadeya........... 
***********************************************

nirakshara nagi.. de nau.. 
badathanadalli bende nanu...... 
badavanagiye hodeno.. shivane...... 
kalivenu.. mathe,,, barahavane 
***********************************************

haleyaa boxuu...
hosaaa poseuuu...
kanindaa vodooo haleegannadaa...! 
gadda bittaa...
voodiii kettaaa....
adru talee kedskobedaa 
edu nanna nudi kannada ! 
***********************************************

kanneer idu raktha kanneeer idu,,, 
para bhashe vyamohake sikka prathi yo idu,,, 
kannada idu,, nanna kannada idu,,, 
nanna saaki salahida kannada idu :P 
***********************************************

why dis kolveri!! 
nina munde booku, 
odaka ningenu trasu trasu!! 
odu andra yak kanniru!! 
boooku boooku kannada boooku 
nin odu dis booku!!! 
***********************************************

Nagisalu Neenu Naguvenu Naanu..
Nagisalu Neenu Naguvenu Naanu,
++++++++++++++++++++++++++++++++++++++++++++++++

2 comments:

 1. ಸುಕ್ಕು ಗಟ್ಟಿ ನೆತ್ತರೆಲ್ಲ ತಣ್ಣಗಾಗಿ ... ನನ್ನ ಇತಿಹಾಸ
  ನೋಡಿದರೆ ... ಎಲ್ಲ ಖಾಲಿ ...
  ಬದುಕ ಹಾಳೆಯಲಿ.. ಏನೆಲ್ಲಾ ತುಂಬಬೇಕಿದೆ ..
  ಕಳೆದು ಹೋದ ದಿನಗಳ ನೆನಪಿಸಿ ..
  ಹಾಳೆ ತುಂಬ ಹೊರಟರೆ ...
  ನನ್ನ ಭೂತ, ವರ್ಥಮಾನ ತಾಳೆಯಾಗದೆ...
  ನನ್ನನ್ನೇ ಹಿಯಾಳಿಸಿ ದಕ್ಕೆ ..
  ಕಣ್ಣಿಂದ ನೆತ್ತರಿಳಿಯಿತು...
  ನೀರೆಲ್ಲ ಖಾಲಿಯಾಗಿ ...

  ReplyDelete
  Replies
  1. ತುಂಬಾ ಅರ್ಥಪೂರ್ಣ ಚಿತ್ರದ ವರ್ಣನೆ .. ಬಹಳಾ ಇಷ್ಟವಾಯಿತು.. ಅತೀ ಸೊಗಸಾದ ಸಾಲುಗಳು.. ಹಾಗು ನಾವು ಬರೆದ ಚಿತ್ರಕ್ಕೆ ನಿಮ್ಮ ಭಾವನೆಗಳನ್ನು ಅತೀ ಆಸಕ್ತಿಯಿಂದ ಬರೆದು , ಪ್ರತಿಕ್ರಿಯಿಸಿದ್ದಕ್ಕೆ ಹೃತ್ಪೂರ್ವಕ ವಂದನೆಗಳು. :)

   Delete