Monday, 2 April 2012

ಗುಂಡಿನಾಟ


ಗುಂಡಿನಾಟ
********************

ಮುಂಜಾನೆಯಲ್ಲೊಂದು ಗುಂಡಿನಾಟ
ಅಣ್ಣನ ಜೊತೆಯಲ್ಲಿ ಆಡಲು ಕೂಗುತ..!!

ಮುಂಜಾನೆಯ ಮಂಜಿನ ಹನಿ
ಜುಮು ಜುಮು ಚಳಿ ಚಳಿ ಗಾಳಿ
ಬಾ ಇಲ್ಲಿ ಓಡೋಡಿ ಹೋಗೋಣ
ಮೈದಾನ ಸೇರಿ ಆಟವ ಆಡೋಣ

ಮುಂಜಾನೆಯಲ್ಲೊಂದು ಗುಂಡಿನಾಟ
ಅಣ್ಣನ ಜೊತೆಯಲ್ಲಿ ಆಡಲು ಕೂಗುತ..!!

ಕಬ್ಬಿಣದ ಗುಂಡನ್ನು ಎತ್ತೆಸೆಯುತ
ಬಿದ್ದ ಜಾಗದ ದೂರದಳತೆ ಹಾಕುತ
ಗುರುತು ಇಡಬೇಕು ನನ್ನಳತೆಯನ್ನು
ನಾನೆಸೆದ ಕಬ್ಬಿಣದ ಗುಂಡಿನ ದೂರ

ಮುಂಜಾನೆಯಲ್ಲೊಂದು ಗುಂಡಿನಾಟ
ಅಣ್ಣನ ಜೊತೆಯಲ್ಲಿ ಆಡಲು ಕೂಗುತ..!!

ನೀನೆಸೆಯುವ ಮುನ್ನವೇ ಮರೆಯದಂತೆ
ಮತ್ತೊಮ್ಮೆ ಲೆಕ್ಕ ಹಾಕು ಗುಂಡಿನ ಭಾರ
ಹೆಚ್ಚು ಕಡಿಮೆ ಇದ್ದರೆ ಆಗುವ ಲೆಕ್ಕಾಚಾರ
ತಪ್ಪಿದರದು ಪಂದ್ಯವಲ್ಲ ಈ ಗುಂಡಿನಾಟ

ಮುಂಜಾನೆಯಲ್ಲೊಂದು ಗುಂಡಿನಾಟ
ಅಣ್ಣನ ಜೊತೆಯಲ್ಲಿ ಆಡಲು ಕೂಗುತ..!!

|| ಪ್ರಶಾಂತ್ ಖಟಾವಕರ್ ||

http://www.poetryofpictures.blogspot.com/

No comments:

Post a Comment