Friday, 6 April 2012

ಹೃದಯದ ಮಾತು



ಹೃದಯದ  ಮಾತು 
*******************

ಇದು ಹೃದಯದ  ಮಾತು , ಓ  ಮನವೇ....

ಓ ನನ್ನ ಮನವೇ
ನಿನಗೆಂದು ತಿಳಿಯುವುದು
ಈ ಜಗವಿರುವುದು ಸ್ವಾರ್ಥದ
ಅರಮನೆಯ ಕಟ್ಟಿರುವವರ ಕೈಯಲ್ಲಿ

ಇದು ಹೃದಯದ  ಮಾತು , ಓ  ಮನವೇ....

ಓ ನನ್ನ ಮನವೇ
ನೀನೆಷ್ಟು ಕೂಗಿದರೂ
ಒಳ್ಳೆಯದಕ್ಕೆ ಕಾಲವಲ್ಲ
ಕೆಡುಕು ಹಾಡು ಕುಣಿದಾಡುವುದು
ನಿನ್ನಿಂದ ನೋಡಲು ಸಾಧ್ಯವಿಲ್ಲ

ಇದು ಹೃದಯದ  ಮಾತು , ಓ  ಮನವೇ....

ಓ ನನ್ನ ಮನವೇ ಕೇಳು ನೀ
ನನ್ನ ಹೃದಯದ ಮಾತನ್ನು
ನಿನ್ನನ್ನೇ ಏಣಿ ಮಾಡಿಕೊಂಡು
ಹತ್ತುವರು ಆಗಸದಲ್ಲಿ ಹಾರಾಡಲು

ಇದು ಹೃದಯದ  ಮಾತು , ಓ  ಮನವೇ....

ಓ ನನ್ನ ಮನವೇ ನಂಬಿಕೆ ವಿಶ್ವಾಸ
ಎನ್ನುವ ಪದಗಳೇ ಈ ಲೋಕದಲ್ಲಿ
ಇಲ್ಲವೆನ್ನುವಂತೆ ಬದುಕುವ ಜನರಿಲ್ಲಿ
ನೀನೆಷ್ಟು ಸಹಾಯ ಮಾಡ ಬಯಸಿದರೂ
ನಿನ್ನನ್ನೇ ಪಾತಾಳದಲ್ಲಿ ತುಳಿದು ಹೂಳುವ
ಮಹಾನ್ ಮೇಧಾವಿಗಳ ಸಂತೆಯೇ ಇಲ್ಲಿದೆ

ಇದು ಹೃದಯದ  ಮಾತು , ಓ  ಮನವೇ....

ಓ ನನ್ನ ಮನವೇ ಚಿಂತಿಸದಿರು ನೀನಿಂದು
ಯಾರೆನೆಂದರೂ ನಾ ನಿನ್ನ ಬಿಡಲಾರೆ
ಕೇಳು ನೀ ಈ ಹೃದಯದ ಪ್ರಮಾಣವನ್ನು
ನಿನಗಾಗಿಯೇ ನನ್ನ ಈ ಡವ ಡವ ನಾದವು
ನನ್ನ ಸದ್ದಿನ ಅಂತ್ಯವೇ ನಿನ್ನ ಪ್ರಿಯ ಬರೆಯುವ
ಕೊನೆಯ ಕಾದಂಬರಿ.. 

ಇದು ಹೃದಯದ  ಮಾತು , ಓ  ಮನವೇ....

|| ಪ್ರಶಾಂತ್ ಖಟಾವಕರ್ ||

No comments:

Post a Comment