Wednesday, 18 April 2012

ಕೊನೆ ಇಲ್ಲದ ಕನಸುಗಳು



ಕೊನೆ ಇಲ್ಲದ ಕನಸುಗಳು
***********************

ಅಲ್ಲೊಂದು ತಂಪಾದ ಉದ್ಯಾನ
ಚಿಲಿಪಿಲಿ ಸದ್ದು ಇಂಪಾದ ಮಧ್ಯಾಹ್ನ
ಮದುವೆಯ ಸಿಹಿ ಸವಿರುಚಿ ಭೋಜನ
ತುಸು ವಿಶ್ರಾಮ ಮರದ ನೆರಳಿಗೆ ಆ ದಿನ

ಶ್ವೇತ ವರ್ಣ ಸೌಂದರ್ಯ ರಾಣಿ
ನಾನಲ್ಲಿ ನೋಡಿದ ಮುದ್ದು ಅರಗಿಣಿ
ನಯನಗಳು ಮಿಂಚಲು ಮಿಣಿ ಮಿಣಿ
ಮನಸ್ಸು ಏರಿತು ಕನಸುಗಳ ಏಣಿ

ಅಲ್ಲೊಂದು ಕೂಗಿನ ಜೊತೆ ಮೌನ ನಗು
ಹತ್ತಿರಕ್ಕೆ ಬಂದ ಆ ಚೆಲುವೆಯ ಸೊಬಗು
ನೋಡು ನೋಡುತ್ತಿದ್ದಂತೆಯೇ ಗುಡುಗು
ಏಳಾಗಿದೆ ಗಂಟೆ ಎದ್ದೇಳೋ..!! ಅಪ್ಪನ ಕೂಗು

ಕೊನೆಗಿಲ್ಲಿ ಎಲ್ಲವೂ ಕೊನೆ ಇಲ್ಲದ ಕನಸುಗಳು .. :)

|| ಪ್ರಶಾಂತ್ ಖಟಾವಕರ್ ||

1 comment:

  1. ಕನಸ್ಸಿನ ರಾಣಿ ನನಸಾಗುತಾಳೆ.

    ಇದು ಗ್ಯಾರಂಟಿ!!!!

    ಅಂದ ಹಾಗೆ ನೀವೊಬ್ಬ ಒಳ್ಳೆಯ ಫೋಟೋಶಾಪ್ ಆರ್ಟೀಸ್ಟ್...

    ReplyDelete