Wednesday, 11 April 2012

ಈ ಮಾವು ಜೊತೆ ನಾವು ನೀವು


ಈ ಮಾವು ಜೊತೆ ನಾವು ನೀವು
********************************

ಮನಸ್ಸಿಗೆ ಮಜವೂ ಈ ಮಾವು
ಕುಡಿಯಲು ಮಾಜ್ಜಾ ಈ ಮಾವು

ಬಸುರಿಯ ಬಯಕೆ ಈ ಮಾವು
ಇಷ್ಟಪಟ್ಟು ತಿನ್ನುವ ಹುಳಿ ಮಾವು

ವಸಂತ ಕಾಲಕ್ಕೆ ಚಿಗುರುವ ಮಾವು
ಊಟಕ್ಕೆ ರುಚಿ ಉಪ್ಪಿನಕಾಯಿ ಮಾವು

ತಿನ್ನಲು ತೋತಾಪುರಿ ಭರ್ಜರಿ ಮಾವು
ಹಣ್ಣಿನ ಅಂಗಡಿಯ ವಿಶೇಷ ಈ ಮಾವು

ಹೆಣ್ಣಿನ ಚೆಂದವನ್ನು ಕವಿ ಎನ್ನುವ ಮಾವು
ಹಣ್ಣಿನ ರುಚಿ , ಹೆಣ್ಣಿನ ಪ್ರೀತಿ ಹೋಲಿಕೆ ಮಾವು

ಮುಗ್ದ ಮಗುವಿನ ಬಣ್ಣದ ಚಿತ್ರಕಲೆಯಲ್ಲಿ ಮಾವು
ವಯಸ್ಸಿನ ಮಿತಿಯಿಲ್ಲ ಸವಿಯಲು ಎಲ್ಲಾ ಈ ಮಾವು

ಕೋಗಿಲೆ ಸದ್ದನು ನೀಡುವ ಸೊಬಗಿನ ಮರವು ಮಾವು
ಮಾವು ಬೇವು ನೋವು ನಲಿವು ಜೀವನದ ಒಂದು ಭಾಗವು

ಸುಖ ದುಃಖ ಸರಿ ಸಮ ಅಳತೆಯ ಲೆಕ್ಕಾಚಾರ ಜೀವನವು
ಬರುವುದೆಲ್ಲಾ ಸುಖ ಶಾಂತಿ ಕೂಡಿ ಬಾಳಿದರೆ ನಾವು ನೀವು

|| ಪ್ರಶಾಂತ್ ಖಟಾವಕರ್ ||

1 comment:

  1. ಮಾವು-ಬೇವು ,ಕೋಗಿಲೆ -ಮಾಮರಗಳ ಸವಿ -ಸ್ನೇಹ ಸಂಬಂಧ ಸದಾ ಹೀಗೆಯೇ ಮುಂದುವರಿಯುತ್ತ ಅಮರ ಸ್ನೇಹಕ್ಕೆ ನಾಂದಿಯಾಗಲಿ.

    ReplyDelete