Tuesday, 28 February 2012

ಬರೆದವರು ಯಾರು... ??



ಬರೆದವರು ಯಾರು... ?? 
*****************************

ಚಿತ್ರ ನೋಡಿ ನೋಡಿ ಕವಿತೆ
ಬರೆಯಲು ಮಾಡಿದರೆ ಚಿಂತೆ
ಪದೇ ಪದೇ ಅದೇ ನೆನಪಾಗುತ್ತೆ
ಹಳೆಯ ಕನ್ನಡ ಚಲನಚಿತ್ರಗಳ ಕಥೆ

ಅದೊಂದು ಚಿತ್ರ ವಿಚಿತ್ರ ಜಿಮ್ಮಿಗಲ್ಲು 
ಹಾಡಿದವರು ಡಾ.ವಿಷ್ಣುವರ್ಧನ್ ನೆನಪುಗಳು
ತುತ್ತು ಅನ್ನ ತಿನ್ನೋಕೆ ಬೊಗಸೇ ನೀರು ಕುಡಿಯೋಕೆ
ಚಿತ್ರಗೀತೆಯ ನೆನಪಿನ ಚಿತ್ರಣ ಕಲ್ಪನೆಯ ಕವನ

ಅನ್ನವೆಂದೊಡನೆ ಅಮ್ಮನ ನೆನಪು ಸಹಜ
ಅದಕ್ಕಿಲ್ಲಿ ಹುಲಿಯ ನೆನಪಾಗುದು ಸಹ ನಿಜ
ಕಲಿಯುಗ ಭೀಮ ಚಿತ್ರದ ಟೈಗರ್ ಪ್ರಭಾಕರ್
ಚಿತ್ರದ ಹಾಡಿನ ನೆನಪು ಸಹ ಈ ಚಿತ್ರಕ್ಕೆ ಸೂಪರ್

ತುತ್ತು ಅನ್ನಕ್ಕಾಗಿ ಕಷ್ಟ ಪಟ್ಟ ಚಿನ್ನಾರಿ ಮುತ್ತ
ಪೇಟೆ ಸೇರಿ ಎಲ್ಲಾ ಮರೆತ ಮನದಲ್ಲಿ ಚಿಂತಿಸುತ
ಎಷ್ಟೊಂದ್ ಜನ, ಇಲ್ಲಿ ಯಾರು ನನ್ನೊರು ಅನ್ನುತ
ಪಾದುಕೆಗಳ ಕದಿಯುತ ಓಡುತ, ಪದಕ ಗೆಲ್ಲುತ

ಸಕಲ ಸ್ನೇಹಿತರಿಗೆ ದಾರಿದೀಪ , ಆದನು ಅಪರೂಪ
ತುತ್ತು ಅನ್ನಕ್ಕಾಗಿ ತಾತನ ಮಕ್ಕಳೆಲ್ಲರೂ ಅಲ್ಲಿ  ಕಳ್ಳರು
ಆದರವರು ಓಡಿ ಓಡಿ ಕೊನೆಯಲ್ಲಿ ಎಲ್ಲರ ಮನ ಗೆದ್ದರು
       ಈ ಚಿತ್ರಕ್ಕೆ ಚಲನಚಿತ್ರಗಳ ನೆನಪಿನ ಮುಗಿಯದ ಕವನ .. :)

ಬರೆದವರು ಯಾರು... ??
|| ಪ್ರಶಾಂತ್ ಖಟಾವಕರ್ ||

Saturday, 25 February 2012

ಕನಸಿನ ಮಾತು ( ಮಹಾನ್ ವಿಜ್ಞಾನಿ )



ಕನಸಿನ ಮಾತು
 ( ಮಹಾನ್ ವಿಜ್ಞಾನಿ )
*******************************

ಮನದ ಮಾತಿದು 
ಮರಗಿಡಗಳ ಸದ್ದು
ಮಾತಾಡಿದೆ ನೊಂದು
ಮಲಗಿರುವಾಗ ಬಂದು

ಈ ಜನರು 
ಪ್ರೀತಿಯಲ್ಲಿ ಕಿತ್ತರು 
ನಮ್ಮ ಹೂವು ಹಣ್ಣು
ಹಲವು ಬಗೆಯ ಕಾರ್ಯಕ್ಕೆ
ಬಯಸಿ ಬಳಸಿ , ಬೆಳಸದೇ..
ಮರೆತರು ನಮ್ಮನ್ನು

ಪ್ರಕೃತಿಯ ಸೌಂದರ್ಯ ಹಸಿರೆಂದು
ಹಾಡಿದರು ಹೊಗಳಿದರು ಕಲ್ಪವೃಕ್ಷವೆಂದು
ಕಾಡಿನೊಳು ನಮ್ಮನ್ನು ಕೊಂದು 
ಮಾಡಿದರು ಹಣದ ರಾಶಿಯ ಕದ್ದು ಕದ್ದು
ನುಡಿದಿದೆ ಈ ಜೀವ , ಜೀವಕ್ಕಾಗಿ ಇಂದು ..

ಈ ಲೋಕದ
ಮಹಾನ್ ವಿಜ್ಞಾನಿ 
ಶ್ರೀ ಜಗದೀಶ್ ಚಂದ್ರ ಬೋಸರು
ಮಾಡಿದ ಸಾಧನೆಯನ್ನು ... !!

ಈ ಜಗದೊಡೆಯ
ಮಹಾದೇವ ಶಿವ 
ಶ್ರೀ ಹರಿ , ಜಗದೀಶ , ಬ್ರಹ್ಮ ದೇವರು
ಮಾಡಿದ ಸೃಷ್ಟಿ ನಿಯಮವನ್ನು... !!

ಮರೆತರು ಮನುಷ್ಯರು
ಮನುಷ್ಯರೇ ಮಾಡಿದ
ನೀತಿ ನಿಯಮ , ಸಾಧನೆ 
ಅದೇಕೋ.. ಈಗಿಲ್ಲಿ  ಸ್ವಾರ್ಥ ಬದುಕಿನ ಚಿಂತನೆ.. :)

|| ಪ್ರಶಾಂತ್ ಖಟಾವಕರ್ ||

Wednesday, 22 February 2012

ಅನಾಥ ಕೂಗು .... ??


ಅನಾಥ ಕೂಗು
****************

ಮಣ್ಣಲ್ಲಿ ಮಲಗಿದ್ದ 
ಅವನೆದ್ದು ಕೂಗಿದ
ಹೊಡೆದಿಲ್ಲಿ ಹಾಕಿ
     ಮಣ್ಣ ಮುಚ್ಚಿದವರಾರು.. ?
ನನ್ನಕ್ಕನ ಮಗಳ
     ಮಾಂಗಲ್ಯ ಕಿತ್ತವರಾರು.. ?
ಅವಳ ಮುದ್ದು ಮನವು
     ಅನಾಥವಾಗಲು ಕಾರಣರಾರು.. ?
ಶೃಂಗಾರ ಪ್ರಿಯೆಯ
       ಸಿಂಧೂರ ಅಳಿಸಿದವರಾರು.... ?
ಮನೆಯೊಡತಿಯ ಮೌನಕ್ಕೆ ಕಾರಣ
ಆ ಅನಾಥ ಮೌನ ಬೇಸರದ ಜೀವನ

ಮಕ್ಕಳ ಮನೆಯಲ್ಲ 
ಮದುವೆ ಮುಗಿದು ಮೂರೇ ವಾರ
ಅವನ್ಯಾರೋ ಮಾಡಿದ್ದ ಪ್ರಹಾರ
ಹಣಕ್ಕಾಗಿ ನನ್ನ ಮಾಡಿ ಹೆಣವ
ಹೂತಿಟ್ಟು ಹೊರಟ 
ತೆಗೆಯಲು ಮತ್ತೊಂದು ಜೀವ

ತಿಳಿದಿಲ್ಲ ಅವನ ಹೆಸರು
ಕಂಡಿಲ್ಲ ಮುಖ ಚೂರು ಪಾರು
ಆದರೂ ನೆನಪಿದೆ ಅವನ ಉಸಿರು
ಎದ್ದು ಬಂದೆ ಮಣ್ಣಿಂದ , ಮಣ್ಣು ಮಾಡಲು
ನನ್ನಾಕೆಯನ್ನು ಅವನ್ಯಾಕೆ ಅನಾಥೆ ಮಾಡಿದ

ಅವಳಿಗೂ ಗೊತ್ತು ಈ ಮನದ ಮಾತು
  ನಾನೆದ್ದು ಬಂದರೂ ಬದುಕಿಲ್ಲ..
ನಾನಿದ್ದು ಸಹ ಮಡದಿಯು ಒಬ್ಬೊಂಟಿ
       ಅವಳೆಂದಳು ಎಲ್ಲಾ ಇದ್ದೂ ಅನಾಥೆ.... :)

|| ಪ್ರಶಾಂತ್ ಖಟಾವಕರ್ ||

Tuesday, 21 February 2012

ಸುಮ್ಮನೆ ನಾ ಹಾಡಿದೆ ಬರೆಯುವ ಮೊದಲೇ .. !!



ಸುಮ್ಮನೆ ನಾ ಹಾಡಿದೆ ಬರೆಯುವ ಮೊದಲೇ .. !!
*********************************************************************
ಪತ್ರವ ಬರೆದು 
ಹತ್ತಿರ ಕರೆದು
ಏನೇನೋ ಹೇಳಿದೆ
ನೀ 
ಏನೇನೋ ಹೇಳಿದೆ..

ಅಯ್ಯೋ ಅಯ್ಯೋ ..
ಎಲ್ಲವೂ ಮರೆತು ಹೋದೆ.. :)
ನಾನೆಲ್ಲವನೂ ವೂ ಆ ಓ ಹೋ...!!

ಮರೆತಿರುವ ನೆನಪು ಮಾತ್ರ
ಕೈಯ್ಯಲ್ಲೊಂದು ಖಾಲಿ ಪತ್ರ
ಬರಿಯಬೇಕು ಈಗ ನಿನಗೆ
ಪ್ರೇಮದ... ಕಾಗದ.....

ಪದಗಳೆಲ್ಲಾ ನಿನ್ನ ಉಸಿರು
ಹೊಸ ಹೆಸರು 
ನೀನೆ ನನ್ನ ಪ್ರೇಮ
ಹಾಡಲು ಎರಡು ನಿಮಿಷ
ಆಹಾ ಸಿಹಿ  ಹರುಷ......

ಪತ್ರವ ಬರೆದು 
ಹತ್ತಿರ ಕರೆದು
ಏನೇನೋ ಹೇಳಿದೆ
ನೀ 
ಏನೇನೋ ಹೇಳಿದೆ..

ಅಯ್ಯೋ ಅಯ್ಯೋ ..
ಎಲ್ಲವೂ ಮರೆತು ಹೋದೆ.. :)
ನಾನೆಲ್ಲವನೂ ವೂ ಆ ಓ ಹೋ...!!

|| ಪ್ರಶಾಂತ್ ಖಟಾವಕರ್ ||

Monday, 20 February 2012

ಸುಮ್ಮನೆ ಚಿತ್ರ ಬರೆದೆ ಸಾಲುಗಳಲ್ಲಿ



ಸುಮ್ಮನೆ ಚಿತ್ರ ಬರೆದೆ ಸಾಲುಗಳಲ್ಲಿ 
**********************

ಮನೆಯೊಳು ನುಗ್ಗಿ ನೀರು
ಮನದೊಳು ಚಿಂತೆ ನೂರು
ಹವಾಮಾನ ಸುದ್ದಿ ಜೋರು
     ವಾತಾವರಣ ಏರು  ಪೇರು  .. !!

ಪರಿಹಾರ ಕೊಡುವುದು ಯಾರು
     ಅರ್ಧ ಪಾಲು ಬಯಸುವವರು .. !!
ಹಿಂದಕ್ಕೊಮ್ಮೆ ಮುಂದಕ್ಕೊಮ್ಮೆ
     ತೂಗುಯ್ಯಾಲೆ ಈ ಜೀವನ .. :)

|| ಪ್ರಶಾಂತ್ ಖಟಾವಕರ್ ||

Saturday, 18 February 2012

ಯೋಜನೆಯನ್ನು ಕುರಿತು

ತುಂಬಾ ದಿನಗಳಿಂದ ಇದರ ಬಗ್ಗೆ ಬರೆಯುವ ಆಲೋಚನೆ ಇತ್ತು ಆದರೆ ಈಗ ಅದಕ್ಕೆ ಸಮಯವಾಗಿದೆ.. ತಡವಾಗಿದೆ ವಿಷಯ .. ಹಾಗು ಒಮ್ಮೆ ನಮ್ಮೂರಿನ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ ನೋಡಿ.. ಬರೆದದ್ದು ನಾವಲ್ಲ.. ಆದರೆ ವಿಚಾರ ಈ ಮೊದಲು ಶಕುಂತಲಕ್ಕನವರು ಕೆಲವು ಯೋಜನೆಯನ್ನು ಕುರಿತು ಪ್ರಶ್ನೆಗಳನ್ನು ಕೊಟ್ಟು ಮತ್ತು ಅದಕ್ಕೆ ಕಾರಣವನ್ನು ಸಹ ಹೇಳಿ ಬೆಂಬಲ ಸೂಚಿಸುವ ಬಗ್ಗೆ ಚರ್ಚೆ ನಡೆದಿತ್ತು.. :)

Friday, 17 February 2012

.. ನಗೆಹನಿ 03 ..... :)




.. ನಗೆಹನಿ 03 ..... :)

**********************
ಓ... ನನ್ನರಸಿಯೇ...
ನಿನ್ನ ಹೃದಯದಂಗಳದಿ
ನನ್ನ ರಕುತದಿ ರಂಗೋಲಿ
ಚುಕ್ಕಿಯಿಲ್ಲದೆ ಅವತಾರ
ಪ್ರೇಮದಲ್ಲೆಲ್ಲವೂ ಚಕ್ಕುಲಿ

ನೀನದನೊಮ್ಮೆ ಸವಿ
ಪ್ರೀತಿಯ ಹೊಸ ಕಾಣಿಕೆ
ಉಪ್ಪೋ ಖಾರವೋ
ಸಪ್ಪೆಯೋ ತಿಳಿಸು

ಸಿಹಿಯಾಗಿಲ್ಲವೆಂದು ಹೇಳದಿರು
ರಕುತದಿ ಇಟ್ಟ ರಂಗೋಲಿ
ಪರೀಕ್ಷಿಸಿ ನೋಡು ಸಿಹಿ ನೆತ್ತರು
     ಸಾಕ್ಷಿ ಕೊಟ್ಟರು ನಮ್ಮ ವೈದ್ಯರು.. :)

|| ಪ್ರಶಾಂತ್ ಖಟಾವಕರ್ ||

Wednesday, 15 February 2012

ಏಕೆ ರಾಧೆ ಮೌನ ತಳೆದೆ


ಏಕೆ ರಾಧೆ ಮೌನ ತಳೆದೆ
*********************

ಓಯ್ ಸ್ನೇಹಿತರೇ ನಾನ್ ಹಾಡ್ತಾ ಇದ್ದೀನಿ
ರಾಧೆಯ ಹಾಡು
ಕನ್ನಡ ಹಾಡು
ಏಕೆ ರಾಧೆ ಮೌನ ಮೌನ ಮೌನ ತಳೆದೆ
ಏಕೆ ರಾಧೆ ಮೌನ ಮೌನ ಮೌನ ತಳೆದೆ
ಈ ಪ್ರಶ್ನೆ ಸರಿ ಇದೆಯಾ
ಏಕೆ ರಾಧೆ ಮೌನ ಮೌನ ಮೌನ ತಳೆದೆ
ಪ್ರಶ್ನೆ ಇದೇ ಇರಲಿ
ಏಕೆ ರಾಧೆ ಮೌನ ಮೌನ ಮೌನ ತಳೆದೆ

ಧಾರಾವಾಹಿ-ಯು ಚೆಂದ-ವು ಚೆಂದ-ವು
ಚೆಂದ-ವು ನಿನ್ನ-ದು ನಟನೆ-ಯು
ನಟನೆಯ ಹಿನ್ನೆಲೆಯು  ಪ್ರತಿಭೆ-ಯು ಪ್ರತಿಭೆ-ಯು
ಪ್ರತಿಭೆ-ಯು ನಿನ್ನ-ದು ಅದ್ಭುತ-ವು

ಏಕೆ ರಾಧೆ ಮೌನ ಮೌನ ಮೌನ ತಳೆದೆ
ಏಕೆ ರಾಧೆ ಮೌನ ಮೌನ ಮೌನ ತಳೆದೆ

ನಿನ್ನ ನಯನ-ವು ಸುಂದರ-ವು ಸುಂದರ-ವು
ಸುಂದರ-ವು ನಯನ-ದ ನೋಟ-ವು
ಭಾವನೆ-ಯು ಭಾವನೆ-ಯು ಪ್ರೀತಿ-ಯು ಪ್ರೀತಿ-ಯು
ನಿನ್ನ ಕಥೆಯು ವ್ಯಥೆಯು

ಏಕೆ ರಾಧೆ ಮೌನ ಮೌನ ಮೌನ ತಳೆದೆ
ಏಕೆ ರಾಧೆ ಮೌನ ಮೌನ ಮೌನ ತಳೆದೆ

ಓಹೋ ದೇವರೇ ಹಿಂಗ್ಯಾಕಾಗಿದೆ
ರಾಧಾ ಕಲ್ಯಾಣದ ಭಾವನೆಗಳು ವಿಭಿನ್ನವಾಗಿದೆ
ಅಳು ಅಳು ಅಳುವು ಅಳು ಅಳು ಅಳುವು ಅಳು ಅಳು ಅಳುವು ಅಳು ಅಳು ಅಳುವು
ರಾಧೆಯ ದುಃಖ
ಮನ ಮಿಡಿಯುವ ದೃಶ್ಯವು
ಸಂಚಿಕೆ 112 , 113 , 114 , 115

ಆಹಾ ಅದೆಷ್ಟು ವಿಚಿತ್ರ ಬದಲಾಗುವ ಕಲ್ಪನೆಗಳು
ಈಗ ಕಥೆಯಲ್ಲಿ ತುಂಬಾನೇ ರಹಸ್ಯ-ವು

ವೆರಿ ಇಂಟ್ರೆಸ್ಟಿಂಗ್ ..
ಕೇವಲ ಕನ್ನಡ

ಅತೀ ಕುತೂಹಲಕಾರಿ
ಕುತೂಹಲಕಾರಿ ತಿರುವು
ಕಥೆ-ಯು ಪೂರ್ತಿ-ಯು ಅಳು-ವು
ಬೇಸರ ಜೀವನ-ವು
ರಾಧೆ-ಯ ಮನ-ವು
ಪ್ರೀತಿ ಬಯಸುತ ಆಸೆ-ಯು
ವಿಶಾಲ್ ವಿಶಾಲ್
ಓ ಹೋ ವಿಶಾಕ
ಇಬ್ಬರ ನಡುವಲ್ಲಿ ರಾಧೆ ಚಿಂತೆ-ಯು
ಚಿಂತೆ-ಯು ಚಿಂತೆ-ಯು ಭಾರಿ ಚಿಂತೆ-ಯು
ನಾ ನೋಡಲಾರೆ ಈ ನೋವ ಚಿಂತೆ-ಯ
ದೇವರೇ ನೀ ನಿವಾರಿಸು ಚಿಂತೆ-ಯ
ಅವಳಿಗಾಗಿ ನೀ ನೀಡು ಖುಷಿ-ಯ

ಈ ಹಾಡು ಕೃತ್ತಿಕ ರವೀಂದ್ರ ರಾಧೆ-ಗೆ
ಶುಭವ ಕೋರುತ ಬರೆದೆ ಕೃತ್ತಿಕ-ಗೆ

ಏಕೆ ರಾಧೆ ಮೌನ ಮೌನ ಮೌನ ತಳೆದೆ
ಏಕೆ ರಾಧೆ ಮೌನ ಮೌನ ಮೌನ ತಳೆದೆ
ಏಕೆ ರಾಧೆ ಮೌನ ಮೌನ ಮೌನ ತಳೆದೆ
ಏಕೆ ರಾಧೆ ಮೌನ ಮೌನ ಮೌನ ತಳೆದೆ

ಕನ್ನಡ ಹಾಡು

|| ಪ್ರಶಾಂತ್ ಖಟಾವಕರ್ ||

Sunday, 12 February 2012

ಬದಲಾದ ಕಲ್ಪನೆಯ ಪ್ರೀತಿಯ ಭಾವನೆಗಳು.. :)




ಬದಲಾದ ಕಲ್ಪನೆಯ ಪ್ರೀತಿಯ ಭಾವನೆಗಳು.. :)
********************************************

ಹಾಡ್`ಗೆ  ಬರ್ದ್ಬಿಟ್ಟೆತೆ..  ಓಯ್ ನಮ್ದುಕ್ಕೆ  ಹಾಡ್`ಗೆ ಬರ್ದ್ಬಿಟ್ಟೆತೆ..
ದಿಲ್`ಗೆ ಕದ್ಬಿಟ್ಟವಳೇ.. ಓಯ್ ನಮ್ದುಕ್ಕೆ ದಿಲ್`ಗೆ ಕದ್ಬಿಟ್ಟವಳೇ..
ಡವ ಡವ ಶಬ್ದ ಇಲ್ಲ ನಮ್ದುಕ್ಕೆ.. ಹಾರ್ಟಿನ್ ಮಾತ್ ಕೇಳ್ತಾ ಇಲ್ಲ ನಮ್ದುಕ್ಕೆ ..
ಚಿಂತೆಯಲ್ಲ ಹೆಚ್ಚಾಗ್ಬಿಟೈತೆ..

ಹಾಡ್`ಗೆ  ಬರ್ದ್ಬಿಟ್ಟೆತೆ..  
ಹಾಡ್`ಗೆ  ಬರ್ದ್ಬಿಟ್ಟೆತೆ.. 
ಹಾಡ್`ಗೆ  ಬರ್ದ್ಬಿಟ್ಟೆತೆ..  ಓಯ್ ನಮ್ದುಕ್ಕೆ  ಹಾಡ್`ಗೆ ಬರ್ದ್ಬಿಟ್ಟೆತೆ..

ನಿದ್ದೆ ಒಳ್ಗೆ ಕನ್ಸು ಬಂದು.. ನಿಮ್ದು ನೆನ್ಪು ಆಗ್ಬಿಟ್ಟು ಹಂಗೆ ಕಚಗುಳಿ ಇಡತೈತೆ.. ನಮ್ದುಕ್ಕೆ ಕನ್ಸಿನಾಗೆ ಕಾಟ ಕೊಡ್ತಾ ಐತೆ..
ನಿದ್ದೆ ಒಳ್ಗೆ ಕನ್ಸು ಬಂದು.. ನಿಮ್ದು ನೆನ್ಪು ಆಗ್ಬಿಟ್ಟು ಹಂಗೆ ಕಚಗುಳಿ ಇಡತೈತೆ.. ನಮ್ದುಕ್ಕೆ ಕನ್ಸಿನಾಗೆ ಕಾಟ ಕೊಡ್ತಾ ಐತೆ.. 

ಕಾಟ ಗೀಟ ಬೇಡಾ ರೀ.. ಬರೀ ಕನ್ಸು ಇರ್ಲಿ ರೀ..
ನಿಮ್ದು ಕನ್ಸು ಒಳ್ಗೆ ಪ್ರೀತಿಗೆ ಐತೆ 
ಹಾಡ್`ಗೆ ಕೇಳ್ಬಿಟೈತೆ.. ಓಯ್ ನಿಮ್ದುಕ್ಕೆ ಹಾಡ್`ಗೆ ಕೇಳ್ಬಿಟೈತೆ..
ಹಾಡ್`ಗೆ ಕೇಳ್ಬಿಟೈತೆ.. ಓಯ್ ನಿಮ್ದುಕ್ಕೆ ಹಾಡ್`ಗೆ ಕೇಳ್ಬಿಟೈತೆ..

ಹೋಟ್ಲು ಗೀಟ್ಲು ಸುತ್ಬಿಟ್ಟಿ.. ಸಿನಿಮಾ ಸ್ವಲ್ಪ್ ನೋಡ್ಬಿಟ್ಟಿ.. ಪಾರ್ಕು ಒಳ್ಗೆ  ಕೈಹಿಡ್ಕೊಂಡು.. ಹಾರ್ಟಿನ್ ಮಾತ್ ಕೇಳ್ತಾ ಕೂತ್ಬಿಡೋಣ...
ಹೋಟ್ಲು ಗೀಟ್ಲು ಸುತ್ಬಿಟ್ಟಿ.. ಸಿನಿಮಾ ಸ್ವಲ್ಪ್ ನೋಡ್ಬಿಟ್ಟಿ.. ಪಾರ್ಕು ಒಳ್ಗೆ  ಕೈಹಿಡ್ಕೊಂಡು.. ಹಾರ್ಟಿನ್ ಮಾತ್ ಕೇಳ್ತಾ ಕೂತ್ಬಿಡೋಣ...
ಪಾರ್ಕು ಗೀರ್ಕು ಬೇಡ ಮ್.. ಅಲ್ಲಿ ಸಿಕ್ಕಾಪಟ್ಟೆ ಜನ ಐತಿ... ಮನೆ ಒಳಗೆ ಲವ್ ಮಾಡೋಣ..

ಅಯ್ಯೋ.... ಅಯ್ಯೋ...

ಹಾಡ್`ಗೆ  ಬರ್ದ್ಬಿಟ್ಟೆತೆ..  ಓಯ್ ನಮ್ದುಕ್ಕೆ  ಹಾಡ್`ಗೆ ಬರ್ದ್ಬಿಟ್ಟೆತೆ..
ದಿಲ್`ಗೆ ಕದ್ಬಿಟ್ಟವಳೇ.. ಓಯ್ ನಮ್ದುಕ್ಕೆ ದಿಲ್`ಗೆ ಕದ್ಬಿಟ್ಟವಳೇ..
ಡವ ಡವ ಶಬ್ದ ಇಲ್ಲ ನಮ್ದುಕ್ಕೆ.. ಹಾರ್ಟಿನ್ ಮಾತ್ ಕೇಳ್ತಾ ಇಲ್ಲ ನಮ್ದುಕ್ಕೆ ..
ಚಿಂತೆಯಲ್ಲ ಹೆಚ್ಚಾಗ್ಬಿಟೈತೆ..
ಹಾಡ್`ಗೆ  ಬರ್ದ್ಬಿಟ್ಟೆತೆ..  ಓಯ್ ನಮ್ದುಕ್ಕೆ  ಹಾಡ್`ಗೆ ಬರ್ದ್ಬಿಟ್ಟೆತೆ..
ದಿಲ್`ಗೆ ಕದ್ಬಿಟ್ಟವಳೇ.. ಓಯ್ ನಮ್ದುಕ್ಕೆ ದಿಲ್`ಗೆ ಕದ್ಬಿಟ್ಟವಳೇ....... :)

|| ಪ್ರಶಾಂತ್ ಖಟಾವಕರ್ ||

ಹೀಗೊಂದು ಇತಿಹಾಸ




ಹೀಗೊಂದು ಇತಿಹಾಸ
***************

ಸ್ವಾರ್ಥ ಸಾಧನೆಯ ಸ್ವರೂಪ
ಈ ದೃಶ್ಯವು ಅತೀ ಅಪರೂಪ
ಯಾವ ಲಾಭಕ್ಕಾಗಿ ವೀರ ಪ್ರತಾಪ
ಅವನು ಮಾಡಿದ್ದೆಲ್ಲವೂ ಘೋರ ಪಾಪ

ದುಷ್ಟ ಶಕ್ತಿಯ ಧಾಳಿಯ ಪ್ರಕೋಪ
ಇದರಿಂದಲೇ ಪ್ರಕೃತಿ ವಿಕೋಪ
ಮೌನಗೀತೆಯ ಸಣ್ಣ ಸಂತಾಪ
       ಕನಸಲ್ಲಿ ಬರಲು, ಮೈಯಲ್ಲಾ ತಾಪ..... :)

|| ಪ್ರಶಾಂತ್ ಖಟಾವಕರ್ ||

**********************************************
ಉಗಾಂಡಾದ ಸರ್ವಾಧಿಕಾರಿಯಾಗಿ ಮೆರೆದ "ಇದಿ ಅಮಿನ್" ನ ಸಮೂಹ ಹತ್ಯೆಗಳಿಗೆ ಬಲಿಯಾದವರು ಸುಮಾರು 4-5 ಲಕ್ಷ ಜನ 

ಚಿತ್ರ ಮತ್ತು ಮಾಹಿತಿ : ಶ್ರೀ  Manjunath Reddy

Saturday, 11 February 2012

ಪ್ರೀತಿಯು ವಿಸ್ಮಯ..


ಕವನಗಳ ರಚಿಸುವ ಆಸಕ್ತಿ ಹೊಂದಿದ ಗೆಳಯ / ಗೆಳತಿಯರಿಗೆ .. ಕವಿತೆಗಳ ಒಲವು ಮತ್ತಷ್ಟು ಮೂಡಲೆಂದು .. ಸುಮಾರು ದಿನಗಳ ಹಿಂದೆ .. ನಮ್ಮ ಕವನಗಳ ರಚನೆಯ ಶೈಲಿಯಲ್ಲಿ ಸರಳ ಪದಗಳ ಬಳಕೆ ಮಾಡಿ .. ಸಂಪೂರ್ಣ ವಿಷಯವು ಅದರಲ್ಲಿ ಸಿಗುವಂತೆ .. ಅತೀ ಉದ್ದವಾಗಿ ಕವನ ಬರೆಯುತ್ತಿದ್ದೆವು.. ಆದರೆ ಈಗ ಮತ್ತೆ ಅನೇಕ ಸ್ನೇಹಿತರ ಸಲಹೆಗಳ ಮಾತುಗಳ ಮೇರೆಗೆ .. ಈಗಾಗಲೇ ಬರೆದಿರುವ ಒಂದು ಉದ್ದವಾದ ಕವಿತೆಯನ್ನು ಚಿಕ್ಕದಾಗಿ ಮಾಡಿದ್ದೇವೆ.. ಹಳೆಯ ಕವನದ ಸಂಪೂರ್ಣ ವಿಷಯವನ್ನು ಇದರಲ್ಲಿ ಗೋಚರಿಸುವಂತೆ ಮಾಡಿದ್ದೇವೆ.. ಒಮ್ಮೆ ಓದಿ ನಿಮ್ಮ ಪ್ರತಿಕ್ರಿಯೆಗಳ ಬರೆದು ಬಿಡಿ... (ಲೈಕ್ ಒತ್ತುವವರಿಗೆ ಈ ಮೊದಲೇ ಧನ್ಯವಾದಗಳು).... :)
*******************************************************************************************

ಪ್ರೀತಿಯು ವಿಸ್ಮಯ..
***********************
ಕಾಲಚಕ್ರ ಜಟಕಾಬಂಡಿ
ಸವಿನೆನಪು ಸುಳಿದಾಡಿ..
ನಯನಗಳು ಜೊತೆಗೂಡಿ
ಮೊದಲ ನೋಟದ ಮೋಡಿ.. 

ಸಖಿಯರ ಸಂಗಡ ನೀನಾದೆ ಅಯಸ್ಕಾಂತ
ಸಿಹಿಜೇನ ಸವಿ, ನೀ ಬರಲು ನಗುನಗುತ
ನಾನಾದೆ ಅಲ್ಲಿ ದಿಗ್ಭ್ರಾಂತ, ಚಿಂತಿಸುತ
ಹೃದಯದ ಸದ್ದು ಅಪರಿಮಿತ  ಅನಿಶ್ಚಿತ

ಓ ಚೆಲುವೆಯೇ ನಾ ಕೂಗಲಿಲ್ಲ
ಸದ್ದಿಲ್ಲದ ನನ್ನ ದನಿಯ ಕೇಳಿ
ನೀ ಬಂದೆ ಪ್ರೀತಿಯ ಕಾರಣ ಹೇಳಿ
     ನನಗದುವೇ ಹೊಸ ದೀಪಾವಳಿ.. :)

|| ಪ್ರಶಾಂತ್ ಖಟಾವಕರ್ ||

Thursday, 9 February 2012

ಈ ಪ್ರೀತಿಯೇ ವಿಸ್ಮಯ, ಬಲು ಆಶ್ಚರ್ಯ..!!!!



ನಾ ಕೈಬೀಸಿ ನಿನ್ನ ಕರೆಯಲಿಲ್ಲ....
ನೀ ಓಡೋಡಿ ಬಂದೆ ಪ್ರೀತಿಯಿಂದ.. !!

ಮೂರು ವರ್ಷಗಳಿಂದ
ಮನದಲ್ಲೇ ಬಚ್ಚಿಟ್ಟ ಮಾತು
ನಿನ್ನನ್ನು ಹೇಗೆ ತಲುಪಿತು ??
ಪ್ರೀತಿಯೇ ಒಂದು ವಿಸ್ಮಯ..!

ಕಾಲೇಜು ಮುಗಿದು
ಟೀನೇಜು ಜಿಗಿದು
ಕೆಲಸಕ್ಕೆ ಅಲೆದಲೆದು
ಚಿಂತೆಯಲ್ಲಿ ನಾನಿಂದು....

ನೆನಪಿನ ಪುಟಗಳ
ತಿರುವಿ ಹಾಕಿದೆ
ಪ್ರತೀ ಹಾಳೆಯಲ್ಲೂ
ನಿನ್ನ ಚಿತ್ರ ವಿಚಿತ್ರ

ಅಪರೂಪದ ಆ ದಿನಗಳು
ಆಹಾ ಅದೆಷ್ಟು ಚೆಂದವೋ
ನಿನ್ನ ಅಕ್ಕಪಕ್ಕದಲ್ಲಿ ನಿಂತ
ಕಿರುನಗೆಯ ಮಿಂಚುಗಳು

ಮನಸೆಳೆಯುವ ಆಕರ್ಷಣೆ
ಮೊದಲ ನೋಟದ ಪ್ರೇಮಕಥೆ
ನಿನ್ನ ಮನಸ್ಸಿಗದು ಪ್ರೇಮ ಬಾಣ
ಗೊಂದಲದಲ್ಲಿ ನಾನೀಗ ಕ್ಷಣ ಕ್ಷಣ..

ಕಾರಣ ಅದೇ ಒಂದು ಮಾತು..!
ನಾ ಬಚ್ಚಿಟ್ಟ ಪ್ರೀತಿ, ಹೇಗೆ ನಿನ್ನ ಸೇರಿತು ??
ನಾ ಕೈಬೀಸಿ ನಿನ್ನ ಕರೆಯಲಿಲ್ಲ....
ನೀ ಓಡೋಡಿ ಬಂದೆ ಪ್ರೀತಿಯಿಂದ.. !!

ಈ ಪ್ರೀತಿಯೇ ವಿಸ್ಮಯ, ಬಲು ಆಶ್ಚರ್ಯ..!!!!

|| ಪ್ರಶಾಂತ್ ಖಟಾವಕರ್ ||

Sunday, 5 February 2012

ನಗೆಹನಿ [2] ಇದು ಸರಿನಾ .. ??


ನಗೆಹನಿ [2]
ಇದು ಸರಿನಾ .. ??
++++++++++++++++++++

ಹದಿನೆಂಟು ತುಂಬಿದ ಕಾಲೇಜು ಕನ್ಯೆ
ಕೆಲಸವಿಲ್ಲದ ಹುಡುಗನ ಆದಾಯ ಸೊನ್ನೆ
ಇಬ್ಬರು ಪ್ರೀತಿಯಲ್ಲಿ ಮರೆತರು ಜಗವನ್ನೇ.....

ಪ್ರೀತಿಗೆ ಕಾವಲುಗಾರನಾಗಿಸಿ ನನ್ನನ್ನೇ
ನನ್ನ ಕರೆಯದೆ, ಮಾಡಿಕೊಂಡರು ಮದುವೆಯನ್ನೇ
ಓ ನನ್ನ ಸ್ನೇಹಿತರೇ, ನೀವೇ ಹೇಳಿ ಇದು ಸರಿನಾ..!!

|| ಪ್ರಶಾಂತ್ ಖಟಾವಕರ್ ||

ಬಣ್ಣದ ಲೋಕ .. :)



ಬಣ್ಣದ ಲೋಕ .. :)
**************

ಧರೆಯೊಳು ಮಾನವನ
ಮೊದಲ ಹೆಜ್ಜೆ ಮಗುವಾಗಿ
ಹಾಲಿನಂತಹಾ ಮನಸ್ಸು 
ಶ್ವೇತ ವರ್ಣ, ಮುದ್ದು ಮುದ್ದಾಗಿ

ಕಾಣುವನು ನಂತರ
ಪರಿಪರಿಯ ಜೀವನ
ಪ್ರೀತಿಯ ಬಯಸುತ
ಗುಲಾಬಿಯ ಕನಸುಗಳು

ಅಗಸದಷ್ಟು ಆಸೆಗಳು
ಅಪಾರವಾದ ಬಯಕೆಗಳು
ಎಲ್ಲವೂ ಇಲ್ಲಿ ಕೈಗೆಟುಕದ
ಆ ತಿಳಿ ನೀಲಿ ಬಾನಿನಂತೆ

ಸ್ನೇಹ ನಂಬಿಕೆ ವಿಶ್ವಾಸ
ಸಿಹಿಯಾದ ಸವಿ ಘಳಿಗೆಗಳು
ರುಚಿಕರ ತಿನಿಸುಗಳಂತೆ
ಹಚ್ಚ ಹಳದೀ ನೆನಪುಗಳು

ಪ್ರಕೃತಿಯ ಸೊಬಗ ಕಂಡು
ಉಲ್ಲಾಸದಿ ಮೌನ ಕುಣಿತ
ಜಗವೆಲ್ಲಾ ಹಸಿರ ಉಸಿರು
ಬೆವರ ಸುರಿಸಿ, ಶ್ರಮದ ಫಲ

ಮಾನವೀಯತೆ ಮರೆತ
ಜನರ ಜಾತ್ರೆಯೊಳು
ಹಬ್ಬದ ಅತೀ ಸಂಭ್ರಮ
ದೇಹವೆಲ್ಲಾ ನೀಲಿ , ವಿಷದಲ್ಲಿ 

ಕ್ರೂರ ಮೃಗಗಳ ಆರ್ಭಟ
ಊರೆಲ್ಲಾ ಹರಿದಾಡಿದ 
ಕೆಂಪು ರಕ್ತದೋಕುಳಿ
ಭಯಂಕರ ಘೋರ ವಿಸ್ಮಯ

ಏನೇ ಆದರೂ ಕೊನೆಗಿಲ್ಲಿ
ಜೀವದ ಪಯಣದ ಹಾದಿಯು
ಮಣ್ಣುಪಾಲು, ಆ ಬ್ರಹ್ಮ ಬರಹ
ಈ ಜೀವನವೇ ಬಣ್ಣದ ಲೋಕ

ಬಾಳಿನಲ್ಲಿ ಇನ್ನೂ ಉಂಟು
ಬಗೆಬಗೆಯ ಬಣ್ಣಗಳ ನಂಟು
ನೆನಪಿರಲಿ ಈ ಕಿವಿಮಾತು
ತಿಳಿಯಾದ ಬಣ್ಣಗಳ ಆರಿಸಿ
      ಸ್ನೇಹ ನಂಬಿಕೆ ವಿಶ್ವಾಸ ಉಳಿಸಿ .. :)


|| ಪ್ರಶಾಂತ್ ಖಟಾವಕರ್ ||



ಈ ಚಿತ್ರಕ್ಕೆ ಕವಿತೆ ಬರೆಯಿರಿ.. :)




***********************************************

:(
ಪರದೇಶ ವ್ಯಾಮೋಹ ಕಣ ಕಣದಲ್ಲೂ ತುಂಬಿತ್ತು,
ಹೆತ್ತ ತಾಯಿಯ ನೆನಪು ಮರೆತು ಹೋಗಿತ್ತು.
ಆಂಗ್ಲ ಭಾಷೆಯ ಮಸಾಲ ನಾಲಿಗೆಗೆ ರುಚಿಸಿತ್ತು,
ಅ ಆ ಓದಿದ ಕನ್ನಡಿಗನಿಗೆ ರಕ್ತ ಕಣ್ಣಿರು ಬಂದಿತ್ತು.
:( :( :( 
***********************************************


ಆಗ ನೀ ಪುಟ್ಟ ಹುಡುಗ
ಏನೂ ಅರಿಯ ಮುಗ್ಧ ಬಾಲಕ
ಓದುವ ಬದಲು ನೀ ಮಾಡಿದೆ ಮನೆ ಕೆಲಸ
ಪುಸ್ತಕದ ಬದಲಿಗಿತ್ತು ನೂರೊಂದು ಕಾಯಕ

ಹೆಗಲ ಮೇಲಿತ್ತು ಮಣ್ಣು ತುಂಬಿದ ಬುಟ್ಟಿ
ಕೈಯ್ಯಲಿ ಹಾರೆ ಗುರಾಣಿ ಗುದ್ದಲಿಗಳು.
ಗದ್ದೆಗೆ ನೀರ ಬಿಟ್ಟು, ಸಸಿಯ ನೆಟ್ಟು
ನೂರಾರು ಜನರ ಹೊಟ್ಟೆ ತುಂಬಿಸಿದೆ ನೀ

ಓದುವುದ ಅರಿಯೆ ನೀ
ಬರೆಯುವುದ ತಿಳಿಯೆ ನೀ
ಆದರೂ..
ಇಂದು ನೀನಾಗಿರುವೆ ನಿಮ್ಮನೆಗೆ ಯಜಮಾನ
ಇರುವದು ಮನೆ ಸಮಾಜದಲಿ ಒಳ್ಳೆ ಮಾನ
ಓದುವುದ ಬಿಟ್ಟು ಅಂದು ಮಾಡಿದ ಕೆಲಸಕೆ
ಇಂದು ನಿನಗೆ ಬರುವುದಿಲ್ಲವೇ ರಕ್ತ ಕಣ್ಣೀರು. 
***********************************************


ಸುಕ್ಕು ಗಟ್ಟಿ ನೆತ್ತರೆಲ್ಲ ತಣ್ಣಗಾಗಿ ... ನನ್ನ ಇತಿಹಾಸ 
ನೋಡಿದರೆ ... ಎಲ್ಲ ಖಾಲಿ ... 
ಬದುಕ ಹಾಳೆಯಲಿ.. ಏನೆಲ್ಲಾ ತುಂಬಬೇಕಿದೆ ..
ಕಳೆದು ಹೋದ ದಿನಗಳ ನೆನಪಿಸಿ ..
ಹಾಳೆ ತುಂಬ ಹೊರಟರೆ ...
ನನ್ನ ಭೂತ, ವರ್ಥಮಾನ ತಾಳೆಯಾಗದೆ...
ನನ್ನನ್ನೇ ಹಿಯಾಳಿಸಿ ದಕ್ಕೆ ..
ಕಣ್ಣಿಂದ ನೆತ್ತರಿಳಿಯಿತು...
ನೀರೆಲ್ಲ ಖಾಲಿಯಾಗಿ ...
***********************************************


ಬರೆದ ಕಥೆಗಳೆಲ್ಲ 
ಇಂದು ಈ ಪುಸ್ತಕದ ವಶವಾಗಿದೆ 
ಜೀವನ ನನ್ನ 
ಸಾಹಿತ್ಯಕ್ಕೆ ಶರಣಾಗಿದೆ 

ಕಾಗದಕ್ಕೆ ಕೊರತೆ ಇಲ್ಲ 
ಪೆನ್ನಿನ ಶಾಯಿ ಮುಗಿಯುದಿಲ್ಲ
ಬರೆಯದೆ ದಾರಿ ಇಲ್ಲ 
ಆದರೆ ಓದುವವರು ಯಾರಿಲ್ಲ

ಎಷ್ಟೋ ಬರೆದ ಸಾಹಿತ್ಯ 
ಇಂದು ಮಣ್ಣ ಪಾಲಾಗಿದೆ 
ನನ್ನದೇನು ಅಂತಸ್ತು 
ಜೀವನ ಕಣ್ಣೀರಾಗಿದೆ
by ಹರೀಶ್ ಶೆಟ್ಟಿ, ಶಿರ್ವ
***********************************************


ಕನ್ನಡ ನುಡಿಯಲು ಯಾಕೀ ಅಂಜಿಕೆ ??
ಕನ್ನಡ ಕಲಿಯಲು ಯಾಕೀ ತಾತ್ಸಾರ ??
ಆಂಗ್ಲದ ವ್ಯಾಮೋಹ ಮನಸನು ಇಡಿದು ??
ಕನ್ನಡವ ಬಿಟ್ಟು ಓದಲು ಮರೆತು
ಓದಲು ಕೊಟ್ಟರೆ ಅಳುವುದೂ ಏಕೆ ??
ಬಿಡದಿರು ಬಿಡದಿರು ನಿನ್ನ ಕನ್ನಡವ
ಇಂಗ್ಲಿಷ್ ಮರೆತರು ಕನ್ನಡವ ಮೇಲೇರು
ತಾಯಿಯಾ ಬಿಟ್ಟ ಮಗನಾಗಬೇಡ
ತಾಯಿಗೆ ತಕ್ಕ ಮಗನೆನಿಸಿಕೋ
ಆ ತಾಯಿಯೇ ಕನ್ನಡ ನುಡಿಯಾಗಿರಲಿ .... 
***********************************************


ಗಡ್ಡಾ ಬಿಟ್ಟು ಗುಡ್ಡಾ ಸುತ್ತಿ 
ಅನುಭವಗಳ ಬರೆದು ಗುಡ್ಡೆ ಹಾಕುವಷ್ಟರಲ್ಲಿ
ಜಗತ್ತು ಮರೆತಿತ್ತು ನನ್ನ
ನಾನಾಗಿದ್ದೆ ಅನಾಮಿಕ
ಅಕ್ಷರಗಳು ಗಹಗಹಿಸಿ ಸಂಭ್ರಮಿಸುತ್ತಿದ್ದವು
ಪುಸ್ತಕಗಳು ನನಗೆ ಬಹಿಷ್ಕರಿಸಿದವು
ಓದುಗಪ್ರಭು ಕರುಣಿಸಲಿಲ್ಲ ಕನಿಷ್ಟತನವನ್ನು.... 
***********************************************


ವಿಧ್ಯೆ ಕಲಿಯದೇ ಹೋದೆ ಬಾಲ್ಯದಲಿ
ಬೇಕೆನಿಸಲಿಲ್ಲ ಅದು ಯೌವನದಲಿ
ಇಂದು ಬೇಯುತಿದೆ ಮನ ಪಶ್ಚಾತ್ತಾಪದಲಿ 
ಹರಿಯುತಿದೆ ಕಣ್ಣೀರಿನ ರೂಪದಲಿ 
***********************************************


ನನ್ನ ಒಳಗೆ ನೂರಾರು 
ದ್ವಂದ್ವ ಯುದ್ದ ನಡೆದಿರಲು
ಪದಗಳಿಗೆ ಪದ ಹುಡುಕುತ್ತ 
ತಪ್ಪುಗಳಿಗೆ ಸರಿ ಹುಡುಕುತ್ತ..

ಗಣಿತಕ್ಕೆ ಮಿತಿ ಇಲ್ಲ 
ಶುನ್ಯಕ್ಕೆ ಬೆಲೆ ಇಲ್ಲ..
ಕೂಡಿ ಕಳೆಯುವುದಕ್ಕೂ 
ಮನದಲ್ಲಿ ಅಂಕಿಗಳಿಲ್ಲ 

ಸಿರಿವಂತ ಭಾಷೆ ಇದು 
ನನ್ನೊಳಗೂ ಅಣಕಿಸುವುದು 
ಕಡೆದು ಒಡೆದು ನಿಂತಿಹುದು.
ಬುದ್ದಿ ಹೀನ ನಾನು ಪಂಡಿತನ ಪರಿ ನನಗೆ ಸಲ್ಲದು..

ಮಣ್ಣ ಹೊತ್ತು ಹಾಕಲಿಲ್ಲ 
ಸಗಣಿ ಬೆರಣಿ ಆಗಲಿಲ್ಲ 
ಕೊಡಲಿಗೆ ಸೀಳು ಕಾಣಲಿಲ್ಲ 
ಸುತ್ತಿಗೆಯ ಹೊಡೆತಕ್ಕೆ 
ಬಿರುಕು ಬಿಟ್ಟ ಮನ ಶಿಲೆ ಆಗಲಿಲ್ಲ 

ಗುರು ಬೇಕು ಶಿಷ್ಯನಿಗೆ 
ಪೆಟ್ಟು ಬೇಕು ಕೈ ಗಿಣ್ಣಿಗೆ 
ಬುದ್ದಿ ಬೇಕು ದೀನನಿಗೆ 
ಒಲಿವಳು ಆ ಕನ್ನಡಾಂಬೆ 
ಶ್ರದ್ದೆ ಇಟ್ಟ ಬುದ್ದಿವಂತನಿಗೆ
***********************************************


ಏನಾ ಹೇಳಲೀ ನಾ ? 
ಓದುವಂತಾ ವಯಸ್ಸಿನಲ್ಲಿ ಓದದೇ ಸುಮ್ಮನಾದೆ
ಈಗ ಇಂಗ್ಲೀಷ್ ಓದೆಂದಲ್ಲಿ ಏನುಮಾಡಲಿ

ಕನ್ನಡವ ಬಿಟ್ಟು ಏನನ್ನೂ ಓದಲಾರೆ
ಅನ್ಯ ಬಾಷೆಗಳಿಗೆ ನಾ ಮಣೆಯಾಗಲಾರೆ
ಇದ್ದರೂ ಕನ್ನಡಿಗ ಹೋದರೂ ಕನ್ನಡಿಗ
ಕನ್ನಡಾಂಬೆಗೆ ನನ್ನ ಮೇಲೆ ಕರುಣೆ ಬರಲಿ 
***********************************************


ಏನೆಂದು ಬರೆಯಲಿ ಹೇಳು ಗೆಳೆಯ 
ನಿನ್ನ ಚಿತ್ರದ ಕರುಣಾಜನಕ ಕಥೆಯ
ನಮ್ಮ ಮನೆಯ ಪುಟ್ಟ ಮಗು ಕೂಡ
ಕಣ್ಣೇರ ಸುರಿಸುತಿತ್ತು ನಿನ್ನ ಚಿತ್ರಕೆ!
***********************************************


ಅ ಆ ಕಲಿಯಬೇಕು ಎಂಬ ಕನಸು ಅವನದು 
ನಾಳೆಯ ಹೊಟ್ಟೆಪಾಡಿನ ಚಿಂತೆ ಅವನ ಮನೆಯವರದು 
ಹಠ ಬಿಡದೆ ಕಲಿತರು ಅಕ್ಷರ .....ಹಸಿವಿನ ಪ್ರಭಾವದ ಮುಂಧೆ 
ಎಲ್ಲ ಶೂನ್ಯ 
***********************************************


ನೆನಪಾದೆ ಇಂದು ನೀನು ... ಹಾಗೆ ಸುಮ್ಮನೆ...

ಹೇ ಗೆಳತಿ
ಅಂದು ನೀ ಕೊಟ್ಟ
ಪ್ರೀತಿಯ ಸಿಹಿ ಮುತ್ತುಗಳನ್ನ
ಮರಯಲಾದೀತೆ ಇಂದು..?

ಹೇ ಗೆಳತಿ
ಅಂದು ನೀನಾಡಿದ
ಪಿಸುಮಾತಿನ 
ಕಲರವವನ್ನ
ಮರಯಲಾದೀತೆ ಇಂದು..?..... 
++++++++++++++++++++++++++++++++++++++++++++++++


shivappa kayo thande
mooru loka swamy deva 
kannada bittu 
angla mathadi vade tindeno,,,,,,,,,
shivane kapadeya........... 
***********************************************


nirakshara nagi.. de nau.. 
badathanadalli bende nanu...... 
badavanagiye hodeno.. shivane...... 
kalivenu.. mathe,,, barahavane 
***********************************************


haleyaa boxuu...
hosaaa poseuuu...
kanindaa vodooo haleegannadaa...! 
gadda bittaa...
voodiii kettaaa....
adru talee kedskobedaa 
edu nanna nudi kannada ! 
***********************************************


kanneer idu raktha kanneeer idu,,, 
para bhashe vyamohake sikka prathi yo idu,,, 
kannada idu,, nanna kannada idu,,, 
nanna saaki salahida kannada idu :P 
***********************************************


why dis kolveri!! 
nina munde booku, 
odaka ningenu trasu trasu!! 
odu andra yak kanniru!! 
boooku boooku kannada boooku 
nin odu dis booku!!! 
***********************************************


Nagisalu Neenu Naguvenu Naanu..
Nagisalu Neenu Naguvenu Naanu,
++++++++++++++++++++++++++++++++++++++++++++++++