ಕನಸಿನ ಮಾತು ( ಮಹಾನ್ ವಿಜ್ಞಾನಿ )
*******************************
ಮನದ ಮಾತಿದು
ಮರಗಿಡಗಳ ಸದ್ದು
ಮಾತಾಡಿದೆ ನೊಂದು
ಮಲಗಿರುವಾಗ ಬಂದು
ಈ ಜನರು
ಪ್ರೀತಿಯಲ್ಲಿ ಕಿತ್ತರು
ನಮ್ಮ ಹೂವು ಹಣ್ಣು
ಹಲವು ಬಗೆಯ ಕಾರ್ಯಕ್ಕೆ
ಬಯಸಿ ಬಳಸಿ , ಬೆಳಸದೇ..
ಮರೆತರು ನಮ್ಮನ್ನು
ಪ್ರಕೃತಿಯ ಸೌಂದರ್ಯ ಹಸಿರೆಂದು
ಹಾಡಿದರು ಹೊಗಳಿದರು ಕಲ್ಪವೃಕ್ಷವೆಂದು
ಕಾಡಿನೊಳು ನಮ್ಮನ್ನು ಕೊಂದು
ಮಾಡಿದರು ಹಣದ ರಾಶಿಯ ಕದ್ದು ಕದ್ದು
ನುಡಿದಿದೆ ಈ ಜೀವ , ಜೀವಕ್ಕಾಗಿ ಇಂದು ..
ಈ ಲೋಕದ
ಮಹಾನ್ ವಿಜ್ಞಾನಿ
ಶ್ರೀ ಜಗದೀಶ್ ಚಂದ್ರ ಬೋಸರು
ಮಾಡಿದ ಸಾಧನೆಯನ್ನು ... !!
ಈ ಜಗದೊಡೆಯ
ಮಹಾದೇವ ಶಿವ
ಶ್ರೀ ಹರಿ , ಜಗದೀಶ , ಬ್ರಹ್ಮ ದೇವರು
ಮಾಡಿದ ಸೃಷ್ಟಿ ನಿಯಮವನ್ನು... !!
ಮರೆತರು ಮನುಷ್ಯರು
ಮನುಷ್ಯರೇ ಮಾಡಿದ
ನೀತಿ ನಿಯಮ , ಸಾಧನೆ
ಅದೇಕೋ.. ಈಗಿಲ್ಲಿ ಸ್ವಾರ್ಥ ಬದುಕಿನ ಚಿಂತನೆ.. :)
|| ಪ್ರಶಾಂತ್ ಖಟಾವಕರ್ ||
ಹಲೋ ಸರ್....
ReplyDeleteನಿಮ್ಮ ಬ್ಲಾಗ್ ಸೊಗಸಾಗಿದೆ.. .....ಚೆನ್ನಾಗಿದೆ ನಿಮ್ಮ ಕವನ...ಮನುಷ್ಯನ ಸ್ವಾರ್ಥಕ್ಕೆ ಗಿಡಮರಗಳು ಬಲಿಯಾಗುತ್ತಿರುವುದು ಅಪಾಯಕಾರಿ ಬೆಳವಣಿಗೆ...ಮನುಷ್ಯ ತನ್ನ ನಾಶವನ್ನು ತಾನೇ ಕರೆದುಕೊಳ್ಳುತಿದ್ದಾನೆ...
ನನ್ನ ಬ್ಲಾಗ್ ಗೂ ಬನ್ನಿ...
http://ashokkodlady.blogspot.com/