Thursday, 9 February 2012

ಈ ಪ್ರೀತಿಯೇ ವಿಸ್ಮಯ, ಬಲು ಆಶ್ಚರ್ಯ..!!!!



ನಾ ಕೈಬೀಸಿ ನಿನ್ನ ಕರೆಯಲಿಲ್ಲ....
ನೀ ಓಡೋಡಿ ಬಂದೆ ಪ್ರೀತಿಯಿಂದ.. !!

ಮೂರು ವರ್ಷಗಳಿಂದ
ಮನದಲ್ಲೇ ಬಚ್ಚಿಟ್ಟ ಮಾತು
ನಿನ್ನನ್ನು ಹೇಗೆ ತಲುಪಿತು ??
ಪ್ರೀತಿಯೇ ಒಂದು ವಿಸ್ಮಯ..!

ಕಾಲೇಜು ಮುಗಿದು
ಟೀನೇಜು ಜಿಗಿದು
ಕೆಲಸಕ್ಕೆ ಅಲೆದಲೆದು
ಚಿಂತೆಯಲ್ಲಿ ನಾನಿಂದು....

ನೆನಪಿನ ಪುಟಗಳ
ತಿರುವಿ ಹಾಕಿದೆ
ಪ್ರತೀ ಹಾಳೆಯಲ್ಲೂ
ನಿನ್ನ ಚಿತ್ರ ವಿಚಿತ್ರ

ಅಪರೂಪದ ಆ ದಿನಗಳು
ಆಹಾ ಅದೆಷ್ಟು ಚೆಂದವೋ
ನಿನ್ನ ಅಕ್ಕಪಕ್ಕದಲ್ಲಿ ನಿಂತ
ಕಿರುನಗೆಯ ಮಿಂಚುಗಳು

ಮನಸೆಳೆಯುವ ಆಕರ್ಷಣೆ
ಮೊದಲ ನೋಟದ ಪ್ರೇಮಕಥೆ
ನಿನ್ನ ಮನಸ್ಸಿಗದು ಪ್ರೇಮ ಬಾಣ
ಗೊಂದಲದಲ್ಲಿ ನಾನೀಗ ಕ್ಷಣ ಕ್ಷಣ..

ಕಾರಣ ಅದೇ ಒಂದು ಮಾತು..!
ನಾ ಬಚ್ಚಿಟ್ಟ ಪ್ರೀತಿ, ಹೇಗೆ ನಿನ್ನ ಸೇರಿತು ??
ನಾ ಕೈಬೀಸಿ ನಿನ್ನ ಕರೆಯಲಿಲ್ಲ....
ನೀ ಓಡೋಡಿ ಬಂದೆ ಪ್ರೀತಿಯಿಂದ.. !!

ಈ ಪ್ರೀತಿಯೇ ವಿಸ್ಮಯ, ಬಲು ಆಶ್ಚರ್ಯ..!!!!

|| ಪ್ರಶಾಂತ್ ಖಟಾವಕರ್ ||

2 comments:

  1. ನಿಜ ಪ್ರಶಾಂತು ಅದು ವಿಸ್ಮಯ ಸ್ಥಿತಿ. ಅವಳಲ್ಲದೇ ಬೇರೇನೂ ಕಾಣದ ಮನಸ್ಥಿತಿ.

    ReplyDelete
  2. ಕೊನೆಗೆ ಬಿಡಿ ಬಿಡಿಯಾಗಿ...ಕೊನೆಗೆ ಇಡಿಯಾಗಿ ಬಿಡುವ ಸುಂದರ ಭಾವಗಳ ಕವನ..
    ಚೆನ್ನಾಗಿದೆ...

    ReplyDelete