ಕವನಗಳ ರಚಿಸುವ ಆಸಕ್ತಿ ಹೊಂದಿದ ಗೆಳಯ / ಗೆಳತಿಯರಿಗೆ .. ಕವಿತೆಗಳ ಒಲವು ಮತ್ತಷ್ಟು ಮೂಡಲೆಂದು .. ಸುಮಾರು ದಿನಗಳ ಹಿಂದೆ .. ನಮ್ಮ ಕವನಗಳ ರಚನೆಯ ಶೈಲಿಯಲ್ಲಿ ಸರಳ ಪದಗಳ ಬಳಕೆ ಮಾಡಿ .. ಸಂಪೂರ್ಣ ವಿಷಯವು ಅದರಲ್ಲಿ ಸಿಗುವಂತೆ .. ಅತೀ ಉದ್ದವಾಗಿ ಕವನ ಬರೆಯುತ್ತಿದ್ದೆವು.. ಆದರೆ ಈಗ ಮತ್ತೆ ಅನೇಕ ಸ್ನೇಹಿತರ ಸಲಹೆಗಳ ಮಾತುಗಳ ಮೇರೆಗೆ .. ಈಗಾಗಲೇ ಬರೆದಿರುವ ಒಂದು ಉದ್ದವಾದ ಕವಿತೆಯನ್ನು ಚಿಕ್ಕದಾಗಿ ಮಾಡಿದ್ದೇವೆ.. ಹಳೆಯ ಕವನದ ಸಂಪೂರ್ಣ ವಿಷಯವನ್ನು ಇದರಲ್ಲಿ ಗೋಚರಿಸುವಂತೆ ಮಾಡಿದ್ದೇವೆ.. ಒಮ್ಮೆ ಓದಿ ನಿಮ್ಮ ಪ್ರತಿಕ್ರಿಯೆಗಳ ಬರೆದು ಬಿಡಿ... (ಲೈಕ್ ಒತ್ತುವವರಿಗೆ ಈ ಮೊದಲೇ ಧನ್ಯವಾದಗಳು).... :)
ಪ್ರೀತಿಯು ವಿಸ್ಮಯ..
***********************
ಕಾಲಚಕ್ರ ಜಟಕಾಬಂಡಿ
ಸವಿನೆನಪು ಸುಳಿದಾಡಿ..
ನಯನಗಳು ಜೊತೆಗೂಡಿ
ಮೊದಲ ನೋಟದ ಮೋಡಿ..
ಸಖಿಯರ ಸಂಗಡ ನೀನಾದೆ ಅಯಸ್ಕಾಂತ
ಸಿಹಿಜೇನ ಸವಿ, ನೀ ಬರಲು ನಗುನಗುತ
ನಾನಾದೆ ಅಲ್ಲಿ ದಿಗ್ಭ್ರಾಂತ, ಚಿಂತಿಸುತ
ಹೃದಯದ ಸದ್ದು ಅಪರಿಮಿತ ಅನಿಶ್ಚಿತ
ಓ ಚೆಲುವೆಯೇ ನಾ ಕೂಗಲಿಲ್ಲ
ಸದ್ದಿಲ್ಲದ ನನ್ನ ದನಿಯ ಕೇಳಿ
ನೀ ಬಂದೆ ಪ್ರೀತಿಯ ಕಾರಣ ಹೇಳಿ
ನನಗದುವೇ ಹೊಸ ದೀಪಾವಳಿ.. :)
ಸದ್ದಿಲ್ಲದ ನನ್ನ ದನಿಯ ಕೇಳಿ
ನೀ ಬಂದೆ ಪ್ರೀತಿಯ ಕಾರಣ ಹೇಳಿ
ನನಗದುವೇ ಹೊಸ ದೀಪಾವಳಿ.. :)
|| ಪ್ರಶಾಂತ್ ಖಟಾವಕರ್ ||
ನಿಮ್ಮ ಪ್ರಯತ್ನಗಳು ಮುಂದುವರೆಯುತ್ತಲೇ ಇರಲಿ ಅಣ್ಣ. ಇನ್ನಷ್ಟು ಬರೆಯಿರಿ. ಮತ್ತೆ ಮತ್ತೆ ಯತ್ನ ಮಾಡುವ ತಾಳ್ಮೆ, ಕಲೆ ಎಲ್ಲರಿಗೂ ಬರುವುದಿಲ್ಲ. ಅದು ನಿಮ್ಮಲ್ಲಿ ನಿಚ್ಚಳವಾಗಿದೆ. ಒಂದಲ್ಲ ಒಂದು ದಿನ ಅದರ ಫಲ ನಿಮ್ಮ ಬಾಗಿಲಿಗೇ ಹುಡುಕಿಕೊಂಡು ಬರುವುದು. ನಿಮಗೆ ಶುಭವಾಗಲಿ.
ReplyDeleteಹಾ.. ಹೌದು ರವಿಯಣ್ಣ ನಿಮ್ಮ ಮಾತು ಸತ್ಯ .. ಇತ್ತೀಚಿಗೆ ಸುಮಾರು ವಿಧಗಳ ಕವಿತೆಗಳ ಅಧ್ಯಯನದಲ್ಲಿ ನಿರತರಾಗಿದ್ದೇವೆ.. ಸುಮಾರು ಬ್ಲಾಗ್`ಗಳು ಮತ್ತು ಅನೇಕ ಪುಸ್ತಕಗಳ ಓದುತ್ತಿದ್ದೇವೆ.. ಕೆಲವು ಉಪಯುಕ್ತ ಮಾಹಿತಿ ಸಂಗ್ರಹಣೆ ಮಾಡುತ್ತಿದ್ದೇವೆ.. ಜೊತೆಯಲ್ಲಿ ಹೊಸ ಹೊಸ ಪ್ರಯೋಗಗಳ ಪ್ರಯತ್ನವೂ ಸಹ ನಡೆದಿದೆ.. ಒಟ್ಟಿನಲ್ಲಿ "ನೋಡಿ ಕಲಿ ಮಾಡಿ ನಲಿ" ಎನ್ನುವ ರೀತಿಯಲ್ಲಿ ಹೊಸತನವ ಹುಡುಕುತ್ತಾ , ಬದಲಾವಣೆಯ ಬಯಸುತ್ತಾ ಸಾಗುತ್ತಿದೆ ನಮ್ಮ ಪಯಣ ಎಲ್ಲಾ ಕಡೆಗಳಲ್ಲೂ ಅಗೋಚರವಾಗಿ ನಾವು ಸುತ್ತಾಡುತ್ತಿದ್ದೇವೆ.. :)
Deleteನಿಮ್ಮ ಪ್ರತೀ ಸಲಹೆಗಳನ್ನು ಮತ್ತು ಬೇರೆಯವರಿಗೆ ನೀವು ಕೊಡುವ ಕೆಲವು ಸೂಚನೆ ಮಾಹಿತಿಗಳೆಲ್ಲವನ್ನು ಗಮನವಿಟ್ಟು ನೋಡುತ್ತಿದ್ದೇವೆ.. ಶುಭ ಹಾರೈಸುತ್ತ ಬರೆದ ನಿಮ್ಮ ಪ್ರತಿಕ್ರಿಯೆಗಳಿಗೆ ಹಾಗು ನಿಮಗೂ ಸಹ ಸದಾ ಶುಭವನ್ನೇ ಬಯಸುತ್ತ .. ನಿಮಗೆ ನಮ್ಮ ಹೃತ್ಪೂರ್ವಕ ವಂದನೆಗಳು.. :)