ಬಣ್ಣದ ಲೋಕ .. :)
**************
ಧರೆಯೊಳು ಮಾನವನ
ಮೊದಲ ಹೆಜ್ಜೆ ಮಗುವಾಗಿ
ಹಾಲಿನಂತಹಾ ಮನಸ್ಸು
ಶ್ವೇತ ವರ್ಣ, ಮುದ್ದು ಮುದ್ದಾಗಿ
ಕಾಣುವನು ನಂತರ
ಪರಿಪರಿಯ ಜೀವನ
ಪ್ರೀತಿಯ ಬಯಸುತ
ಗುಲಾಬಿಯ ಕನಸುಗಳು
ಅಗಸದಷ್ಟು ಆಸೆಗಳು
ಅಪಾರವಾದ ಬಯಕೆಗಳು
ಎಲ್ಲವೂ ಇಲ್ಲಿ ಕೈಗೆಟುಕದ
ಆ ತಿಳಿ ನೀಲಿ ಬಾನಿನಂತೆ
ಸ್ನೇಹ ನಂಬಿಕೆ ವಿಶ್ವಾಸ
ಸಿಹಿಯಾದ ಸವಿ ಘಳಿಗೆಗಳು
ರುಚಿಕರ ತಿನಿಸುಗಳಂತೆ
ಹಚ್ಚ ಹಳದೀ ನೆನಪುಗಳು
ಪ್ರಕೃತಿಯ ಸೊಬಗ ಕಂಡು
ಉಲ್ಲಾಸದಿ ಮೌನ ಕುಣಿತ
ಜಗವೆಲ್ಲಾ ಹಸಿರ ಉಸಿರು
ಬೆವರ ಸುರಿಸಿ, ಶ್ರಮದ ಫಲ
ಮಾನವೀಯತೆ ಮರೆತ
ಜನರ ಜಾತ್ರೆಯೊಳು
ಹಬ್ಬದ ಅತೀ ಸಂಭ್ರಮ
ದೇಹವೆಲ್ಲಾ ನೀಲಿ , ವಿಷದಲ್ಲಿ
ಕ್ರೂರ ಮೃಗಗಳ ಆರ್ಭಟ
ಊರೆಲ್ಲಾ ಹರಿದಾಡಿದ
ಕೆಂಪು ರಕ್ತದೋಕುಳಿ
ಭಯಂಕರ ಘೋರ ವಿಸ್ಮಯ
ಏನೇ ಆದರೂ ಕೊನೆಗಿಲ್ಲಿ
ಜೀವದ ಪಯಣದ ಹಾದಿಯು
ಮಣ್ಣುಪಾಲು, ಆ ಬ್ರಹ್ಮ ಬರಹ
ಈ ಜೀವನವೇ ಬಣ್ಣದ ಲೋಕ
ಬಾಳಿನಲ್ಲಿ ಇನ್ನೂ ಉಂಟು
ಬಗೆಬಗೆಯ ಬಣ್ಣಗಳ ನಂಟು
ನೆನಪಿರಲಿ ಈ ಕಿವಿಮಾತು
ತಿಳಿಯಾದ ಬಣ್ಣಗಳ ಆರಿಸಿ
ಸ್ನೇಹ ನಂಬಿಕೆ ವಿಶ್ವಾಸ ಉಳಿಸಿ .. :)
|| ಪ್ರಶಾಂತ್ ಖಟಾವಕರ್ ||
ಬದುಕಿನ ಅರ್ಥವತ್ತಾದ ವಿಶ್ಲೇಷಣೆಗೆ ಇಂಬು ನೀಡಿದ್ದೀರಿ.ನಿಮ್ಮ ಮನದಲ್ಲಾದ ಭಾವನೆಗಳ ಕಾಳಜಿ ಅನುರಣೀಯವಾದುದು.ಅಭಿನಂದನೆಗಳು.
ReplyDelete