ಅನಾಥ ಕೂಗು
****************
ಮಣ್ಣಲ್ಲಿ ಮಲಗಿದ್ದ
ಅವನೆದ್ದು ಕೂಗಿದ
ಹೊಡೆದಿಲ್ಲಿ ಹಾಕಿ
ಮಣ್ಣ ಮುಚ್ಚಿದವರಾರು.. ?
ನನ್ನಕ್ಕನ ಮಗಳ
ಮಾಂಗಲ್ಯ ಕಿತ್ತವರಾರು.. ?
ಅವಳ ಮುದ್ದು ಮನವು
ಅನಾಥವಾಗಲು ಕಾರಣರಾರು.. ?
ಶೃಂಗಾರ ಪ್ರಿಯೆಯ
ಸಿಂಧೂರ ಅಳಿಸಿದವರಾರು.... ?
ಮನೆಯೊಡತಿಯ ಮೌನಕ್ಕೆ ಕಾರಣ
ಆ ಅನಾಥ ಮೌನ ಬೇಸರದ ಜೀವನ
ಮಕ್ಕಳ ಮನೆಯಲ್ಲ
ಮದುವೆ ಮುಗಿದು ಮೂರೇ ವಾರ
ಅವನ್ಯಾರೋ ಮಾಡಿದ್ದ ಪ್ರಹಾರ
ಹಣಕ್ಕಾಗಿ ನನ್ನ ಮಾಡಿ ಹೆಣವ
ಹೂತಿಟ್ಟು ಹೊರಟ
ತೆಗೆಯಲು ಮತ್ತೊಂದು ಜೀವ
ತಿಳಿದಿಲ್ಲ ಅವನ ಹೆಸರು
ಕಂಡಿಲ್ಲ ಮುಖ ಚೂರು ಪಾರು
ಆದರೂ ನೆನಪಿದೆ ಅವನ ಉಸಿರು
ಎದ್ದು ಬಂದೆ ಮಣ್ಣಿಂದ , ಮಣ್ಣು ಮಾಡಲು
ನನ್ನಾಕೆಯನ್ನು ಅವನ್ಯಾಕೆ ಅನಾಥೆ ಮಾಡಿದ
ಅವಳಿಗೂ ಗೊತ್ತು ಈ ಮನದ ಮಾತು
ನಾನೆದ್ದು ಬಂದರೂ ಬದುಕಿಲ್ಲ..
ನಾನಿದ್ದು ಸಹ ಮಡದಿಯು ಒಬ್ಬೊಂಟಿ
ಅವಳೆಂದಳು ಎಲ್ಲಾ ಇದ್ದೂ ಅನಾಥೆ.... :)
|| ಪ್ರಶಾಂತ್ ಖಟಾವಕರ್ ||
No comments:
Post a Comment