Tuesday, 29 May 2012

ಗುಡ್ ಮಾರ್ನಿಂಗ್ .. :)


ಗುಡ್ ಮಾರ್ನಿಂಗ್ .. :)
*********************

ಗುಡ್ ಮಾರ್ನಿಂಗ್
ಗೆಳಯರೇ
ಗುಡ್ ಮಾರ್ನಿಂಗ್
ಗೆಳತಿಯರೇ

ಶುಭ ಕೋರುತ
ಸ್ನೇಹದ ಸವಿ ಕ್ಷಣಗಳು
ಸಿಹಿ ಹಂಚುತ
ಹೊಸ ದಿನದ ಆಸೆಗಳು

ಶುಭ ಮುಂಜಾನೆ
ಸೊಗಸು ಕವನದೊಡನೆ
ಶುಭ ದಿನದಾರಂಭ
ಪ್ರೀತಿಯ ಸ್ನೇಹಿತರೊಡನೆ

ಗುಡ್ ಮಾರ್ನಿಂಗ್
ಗೆಳಯರೇ
ಗುಡ್ ಮಾರ್ನಿಂಗ್
ಗೆಳತಿಯರೇ

ಜೊತೆ ಜೊತೆಯಲಿ
ಆ ದಿನಗಳ ಅನುಭವ
ನೋಡು ನೋಡುತಲಿ
ಈ ಜನಗಳ ಕಲರವ

ಸುಖ ಶಾಂತಿ ನೆಮ್ಮದಿ
ಬಯಸುವ ಮನಸುಗಳು
ನವ ನವೀನ ಭಾವದಿ
ತಲೆ ಎತ್ತುವ ಕನಸುಗಳು

ಗುಡ್ ಮಾರ್ನಿಂಗ್
ಗೆಳಯರೇ
ಗುಡ್ ಮಾರ್ನಿಂಗ್
ಗೆಳತಿಯರೇ

|| ಪ್ರಶಾಂತ್ ಖಟಾವಕರ್ ||

Sunday, 27 May 2012

ಗ್ರಾಹಕರೇ ಮಾತನಾಡಿ



ಗ್ರಾಹಕರೇ ಮಾತನಾಡಿ
***************************

ಮಾತು ಬೆಳ್ಳಿ ಮೌನ ಬಂಗಾರ
ಇದು ತುಂಬಾ ಹಳೆಯ ವಿಚಾರ
ದಿನ ನಿತ್ಯ ಪ್ರಚಾರ ಅಪಪ್ರಚಾರ
ಹಾಳಾಗುತ್ತಿವೆ ಅನೇಕ ಸಂಸಾರ

ಅಳತೆಯ ಜೀವನ ಅವಶ್ಯಕ
ಎಚ್ಚೆತ್ತುಕೊಳ್ಳಬೇಕು ಗ್ರಾಹಕ
ಮಾತು ಮಾತಿನ ಸರಿ ತೂಕ
ಮೋಸಕ್ಕೆ ಆಗಬಾರದು ಮೂಕ

ಈಗಂತೂ ಹಾರುತಿದೆ ಏರುತಿದೆ
ಬೆಲೆಗಳು ಬೇಡಿಕೆಗಳು ಬಿಡುವಿಲ್ಲದೆ
ಬದುಕುವುದೇ ಬಲು ಕಷ್ಟ ಆಗುತಿದೆ
ಸಣ್ಣ ಸಂಸಾರ ಸಾಗಿಸಲು ಹಣವಿಲ್ಲದೆ

|| ಪ್ರಶಾಂತ್ ಖಟಾವಕರ್ ||


Friday, 25 May 2012

ಮೋಹಿನಿಯ ಅವತಾರದಲ್ಲಿ



ಮೋಹಿನಿಯ ಅವತಾರದಲ್ಲಿ
*********************

ನಗುವಿನ ಕವನ
ಬರೆದರೆ ದಿನ ದಿನ
ನಗುವೆಯ ಚಿನ್ನ
ಏತಕೆ ಈ ಮೌನ

ಹಳ್ಳಿ ಮನೆಯ ಹಿತ್ತಲಿನಲ್ಲಿ
ಭಾರಿ ಜೋರು ಕತ್ತಲಿನಲ್ಲಿ
ನಿನ್ನ ಕಂಡ  ಆ ರಾತ್ರಿಯಲ್ಲಿ
ಮೋಹಿನಿಯ ಅವತಾರದಲ್ಲಿ

ಮನಮೋಹಕ ಆ ನಿನ್ನ ರೂಪ
ಒಂಟಿ ಬದುಕು ನಿನಗದು ಶಾಪ
ಹೆದರಿ ಏರಿತ್ತು ನನ್ನ ದೇಹದ ತಾಪ
ಆದರೂ ಪ್ರೀತಿಯ ಕೂಗು ಅಪರೂಪ

ಹೃದಯ ಹಾಡಿತ್ತು ಪ್ರೇಮ ಗೀತೆ
ನಿನ್ನ ಗೆಜ್ಜೆ ಸದ್ದಿನ ಜೊತೆ ಜೊತೆ
ಭಯದಲ್ಲೂ ಬರೆದ ಪ್ರೇಮ ಕವಿತೆ
ಆ ಸಿಹಿ ಕ್ಷಣಗಳ ನೀನೇಕೆ ಮರೆತೆ

ನಗುವಿನ ಕವನ
ಬರೆದರೆ ದಿನ ದಿನ
ನಗುವೆಯ ಚಿನ್ನ
ಏತಕೆ ಈ ಮೌನ

|| ಪ್ರಶಾಂತ್ ಖಟಾವಕರ್ ||

Thursday, 24 May 2012

ಪ್ರೇಮ ರೋಗಿ .. :) :)




ಪ್ರೇಮ ರೋಗಿ .. :) :) 
*********************************

ಅವಳೇ ಅವಳೇ ಮೊದಲೇ ಹೇಳಿದಳು
ನಾ ನಿನ್ನ ಪ್ರೀತಿಸುವೆ ಎಂದು ನಾಚುತ್ತ
ನಾ ಹೇಳುವ ಮೊದಲೇ ನಗು ನಗುತ್ತ
ಮೊದಲ ಪ್ರೀತಿಯ ಸಂಭಾಷಣೆಯನ್ನು

ಮಾತುಗಳು ಮುಗಿಯುವ ಮೊದಲೇ
ಮಾತಾಡುತ್ತಿದ್ದಳು ಮುಂದೆ ಮುಂದೆ
ಅರಿಯದೆಯೇ ನನ್ನ ಮಾತುಗಳನ್ನು
ಆಕರ್ಷಿತಳಾಗಿ ನನ್ನ ನೋಡಿದೊಡನೆಯೇ

ಆದರೆ ನನ್ನ ನಿಜವಾದ ಪ್ರೀತಿಯು ಅವಳಲ್ಲ
ನನ್ನ ಸಂಭಾಷಣೆಗಲ್ಲಿ ಅಂತ್ಯವೇ ಇರಲಿಲ್ಲ
ಕೇವಲ ಮಾತು ಮಾತಿನಲ್ಲೇ ಹೊಸ ಪ್ರೀತಿ
ಕ್ಷಣ ಕ್ಷಣವೂ ನನಗದು ಹೊಸ ಹೊಸ ರೀತಿ

ಮೊದಲ ನೋಟದ ಅವಳ ತಂಗಿಯ ಮೈಮಾಟ
ಹುಟ್ಟಿಸಿತ್ತು ಹೃದಯದೊಳು ಪ್ರೀತಿಯ ಗೋಪುರವ
ಮದುವೆಯ ಮಾತುಕತೆ ಮಾಡಲು ಹೋಗಿ
          ಮಾತು ಮಾತಿನಲ್ಲೇ ನಾನಾದೆ ಪ್ರೇಮ ರೋಗಿ .. :) :)

|| ಪ್ರಶಾಂತ್ ಖಟಾವಕರ್ ||

Saturday, 19 May 2012

ನಗು ನಗುತಾ ಬಾರೇ ನನ್ನ ನಲ್ಲೆ ..... :)




           ನಗು ನಗುತಾ ಬಾರೇ ನನ್ನ  ನಲ್ಲೆ ..... :)
           *****************************************************

ನಿನ್ನ ನಗುವಿನ ಹೂಮಾಲೆ
ಹುಟ್ಟಿಸಿದೆ ಪ್ರೇಮದ ಅಲೆ
ನನ್ನೆದೆಯ ಗೋಡೆಯ ಮೇಲೆ
       ಬರೆದಿದೆ ನಿನ್ನ ಪ್ರೀತಿಯ ಓಲೆ .....

ಬಾರೇ ಸನಿಹಕೆ  ಓ ನನ್ನ ನಲ್ಲೆ
ದಾಟಿ ಬಂದಿರುವೆ ಆರೇಳು ಜಿಲ್ಲೆ
ಮಾಡದಿರು ಕೋಪದಿ ನೀ ಹಲ್ಲೆ
       ನಗು ಮೊಗದಿ ಬಳಿ ಬಂದು ನಿಲ್ಲೇ .....

ನಿನಗಾಗಿ ತಂದಿಹೆನು ಉಡುಗೊರೆಯ
ನಮ್ಮೂರ ನೆನಪು ನೀಡುವ ಸೀರೆಯ
ಮುನಿಸು ಬಿಟ್ಟು ನೀ ಪ್ರೀತಿಯ ತೋರೆಯ
           ನಗು ನಗುತಾ ನೀನೀಗ ನನ್ನ ಬಳಿ ಬರುವೆಯಾ ..... :)

 || ಪ್ರಶಾಂತ್ ಖಟಾವಕರ್ ||

Monday, 14 May 2012

ನಿನಗಾಗಿ ಬರೆದೆ , ಒಂದೊಳ್ಳೆ ಕವನ ಕೇಳೀಗ ನೀನು , ಓ ನನ್ನ ಚಿನ್ನಾ ....!!



ನಿನಗಾಗಿ ಬರೆದೆ , ಒಂದೊಳ್ಳೆ ಕವನ
ಕೇಳೀಗ ನೀನು , ಓ ನನ್ನ ಚಿನ್ನಾ ....!!
***********************

ನಿನಗಾಗಿ ಬರೆದೆ
ಒಂದೊಳ್ಳೆ ಕವನ
ಕೇಳೀಗ ನೀನು
ಓ ನನ್ನ ಚಿನ್ನಾ ....!!

ಚಿನ್ನದಾ ಬೆಲೆಯು
ಗಗನಕೆ ಮುತ್ತಿಡಲು
ನಾ ಹೇಗೆ ತರಲಿ
ನಿನಗೆ ಬಂಗಾರ

ಪ್ರೀತಿಯ ಗೋಪುರ
ಕಟ್ಟಿರಲು ಹೃದಯದಿ
ನಿನಗದು ಸಾಕಲ್ಲವೇ
ನನ್ನ ಹೃದಯವೇ ವಜ್ರ

ನಿನಗಾಗಿ ಬರೆದೆ , ಒಂದೊಳ್ಳೆ ಕವನ
ಕೇಳೀಗ ನೀನು , ಓ ನನ್ನ ಚಿನ್ನಾ ....!!

ಮನಸ್ಸೆಲ್ಲವೂ ಅಯಸ್ಕಾಂತ
ಹತ್ತಿರ ಹತ್ತಿರ ಪ್ರೀತಿಯ ಸೆಳೆತ

ಜೀವನ ಜೋಕಾಲಿ , ಆಸೆಗಳ ಆಟ
ಅನುಕೂಲ ಆಡಂಬರದ ಹುಚ್ಚು ಓಟ
ಅನಿವಾರ್ಯ ಅವಶ್ಯಕತೆಗಳ ಕಾಟ

ನಿನ್ನ ಮನವು ಬೆಳ್ಳಿಯಂತೆ ಬಿಳುಪು
ನಿನ್ನ ಹೃದಯ ಬಂಗಾರ ಹೊಳಪು

ಓ ನನ್ನ ಚಿನ್ನಾ , ಕೇಳು ನನ್ನ ಕವನ
ಆಭರಣದ ಆಸೆಯಲಿ ಅಂತ್ಯವಾಗದಿರಲಿ
ಈ ನಮ್ಮ ಪವಿತ್ರ ಪ್ರೇಮ ಬಂಧನ

ನಿನಗಾಗಿ ಬರೆದೆ , ಒಂದೊಳ್ಳೆ ಕವನ
ಕೇಳೀಗ ನೀನು , ಓ ನನ್ನ ಚಿನ್ನಾ ....!!

ನನ್ನ ಹೃದಯವೇ ವಜ್ರ
ಕೊಟ್ಟಿರುವೆ ನಿನಗದನು
ಕಳೆದು ಹೋದೀತು ಜೋಪಾನ
ಬೆಳಗಲು ಬಾ ನಮ್ಮನೇ ದೀಪವನ್ನ
ಪ್ರೀತಿಯ ಪತ್ರವು , ಎಲ್ಲವೂ ಸತ್ಯವು ....!!

ನಿನಗಾಗಿ ಬರೆದೆ , ಒಂದೊಳ್ಳೆ ಕವನ
ಕೇಳೀಗ ನೀನು , ಓ ನನ್ನ ಚಿನ್ನಾ ....!!

|| ಪ್ರಶಾಂತ್ ಖಟಾವಕರ್ ||

Friday, 11 May 2012

ಕೇಳೇ ಗೆಳತೀ......!!!!!!!!


ಕೇಳೇ ಗೆಳತೀ......!!!!!!!!
************************

ನಿನ್ನ ಮೇಲೆ 
ಪ್ರೀತಿ ಹುಟ್ಟಿ
ಇಂದು ನಾನು
ಕವನ ಬರೆದೆ

ನಿನ್ನ ಉಸಿರು
ನನ್ನ ಉಸಿರು
ಸೇರಿ ಪ್ರೀತಿ ಹಸಿರು
ಜೊತೆಯಲಿ ನಮ್ಮ ಹೆಸರು

ಬಾರೆ ಚೆಲುವೆ
ಮುತ್ತ ಕೊಡುವೆ
ಬೆಳ್ಳಿ ಕಾಲುಂಗುರ
ಸರವು ಬಂಗಾರ

ನೂರಾರು ಜನುಮ
ಬೇಕು ನಿನ್ನ ಪ್ರೇಮ
ಗಟ್ಟಿ ದೇಹ ನಾನೇ ಭೀಮ
ಗುಣದಲ್ಲಿ ನಾನು ಶ್ರೀರಾಮ

ಯಾರ ಮಾತನೂ ಕೇಳಬೇಡ
ಸುಳ್ಳು ಸ್ನೇಹದ ಸಂಘ ಬೇಡ
ಬದುಕು ಕಷ್ಟ 
ಆದರೂ ನೀ ಹೆದರಬೇಡ
ಸೇರಿ ನನ್ನ ಜೊತೆ
ಹಾಡು ನೀ ಈ ಪ್ರೀತಿ ಹಾಡ.. :) :)

 || ಪ್ರಶಾಂತ್ ಖಟಾವಕರ್ || 

Wednesday, 9 May 2012

Online Girl .. :) :)


Online Girl .. :) :)
+++++++++++++++++

ಅವಳ ದನಿಯು ಮಧುರ
ಮಾತಲ್ಲಿ ಮುಗ್ದತೆ ಅಪಾರ
ಅವಳ ನಗುವೇ ಇಂಚರ
ಮನದಲ್ಲಿ ವಿದ್ಯುತ್  ಸಂಚಾರ

ಹೃದಯ ಹಾಡುವ ಶಬ್ದ ಸಾವಿರ
ಕಾಡುವ ಚಿಂತೆಗಳ ಸಣ್ಣ ವಿಚಾರ
ಅರಿತಿಹಳು ಈ ಜಗವು ಅತೀ ಕ್ರೂರ
ಮಧುರ ದನಿಯಲಿ ನಗು ಬಂಗಾರ

ಶ್ವೇತ ವರ್ಣ ಮನಸ್ಸು ಪೂರ್ಣ
ಕಂಡೊಡನೆ ಅದೇನೋ ಆಕರ್ಷಣೆ
ಪ್ರತೀ ಮಾತಿಗೂ ಸನಿಹ ಸಂಪೂರ್ಣ
ನೆನಪಾಗಲು ಭಾವನೆಗಳ ಸಂಘರ್ಷಣೆ

ಅವಳಾದಳು ಹೆಸರಲ್ಲಿ ಹತ್ತಿರ
ಕಲ್ಪನೆಯ ಕನಸಿನ ಚಿತ್ತಾರ
ಇದ್ದರೂ ನನ್ನಿಂದ ದೂರ ದೂರ
       ದಿನವೂ ಆತ್ಮೀಯ ಮಾತಿನ ಸಾಗರ .. :)

|| ಪ್ರಶಾಂತ್ ಖಟಾವಕರ್ ||

Friday, 4 May 2012

ಮೌನದಾಚೆ: ನಾಟ್ ರಿಚೆಬಲ್

ಮೌನದಾಚೆ: ನಾಟ್ ರಿಚೆಬಲ್: ಮೊನ್ನೆ ನಾನು ಹೊರಡುವಾಗ ಅಮ್ಮ ಚೀಟಿ ಕೊಟ್ಟು ಪುರೋಸತ್ತದಾಗ ನೋಡು ಅಂದಿದ್ದಳು  , ಎಂದು ಏಕೋ ನೆನಪಾಗಿ ಬ್ಯಾಗ್ ಎಲ್ಲ  ಹುಡುಕಿದೆ ,  ಅದರಲ್ಲೊಂದು ಫೋನ್  ನಂಬರ್  ,...

Wednesday, 2 May 2012

ಸುರಕ್ಷತೆ vs ಆಕರ್ಷಣೆ



ಸುರಕ್ಷತೆ
vs ಆಕರ್ಷಣೆ
****************************

ಆಹಾ 
ಬೆಂಗಳೂರು ನಗರ
ಅತೀ
ಸೊಗಸು ಸುಂದರ

ನೋಡಲು
ಸ್ಕೂಟಿಯ ಮೇಲೆ ಬ್ಯೂಟಿಗಳು
ಸುರಕ್ಷತೆ
ಮುಖ ಮುಚ್ಚಿದ ಹೆಲ್ಮೆಟ್`ಗಳು

ಓಹೋ
ದಾವಣಗೆರೆ ನಗರ
ಇಲ್ಲಿ
ಸುಂದರಿಯರು ಅಪಾರ

ಹೆಲ್ಮೆಟ್
ಇಲ್ಲದೇ ಇರುವ ತಲೆಗಳು
ಆಕರ್ಷಣೆ
ಹೊರ ರಾಜ್ಯದ ಹೆಣ್ಣುಗಳು

|| ಪ್ರಶಾಂತ್ ಖಟಾವಕರ್ ||