ಗ್ರಾಹಕರೇ ಮಾತನಾಡಿ
***************************
ಮಾತು ಬೆಳ್ಳಿ ಮೌನ ಬಂಗಾರ
ಇದು ತುಂಬಾ ಹಳೆಯ ವಿಚಾರ
ದಿನ ನಿತ್ಯ ಪ್ರಚಾರ ಅಪಪ್ರಚಾರ
ಹಾಳಾಗುತ್ತಿವೆ ಅನೇಕ ಸಂಸಾರ
ಅಳತೆಯ ಜೀವನ ಅವಶ್ಯಕ
ಎಚ್ಚೆತ್ತುಕೊಳ್ಳಬೇಕು ಗ್ರಾಹಕ
ಮಾತು ಮಾತಿನ ಸರಿ ತೂಕ
ಮೋಸಕ್ಕೆ ಆಗಬಾರದು ಮೂಕ
ಈಗಂತೂ ಹಾರುತಿದೆ ಏರುತಿದೆ
ಬೆಲೆಗಳು ಬೇಡಿಕೆಗಳು ಬಿಡುವಿಲ್ಲದೆ
ಬದುಕುವುದೇ ಬಲು ಕಷ್ಟ ಆಗುತಿದೆ
ಸಣ್ಣ ಸಂಸಾರ ಸಾಗಿಸಲು ಹಣವಿಲ್ಲದೆ
|| ಪ್ರಶಾಂತ್ ಖಟಾವಕರ್ ||
ಅದು ನಿಜ! ಮೊದ್ಲು ಹತ್ತು ಸಾವಿರ ಅಂದರೆ ನಾಲ್ಕು ಜನರ ಸಂಸಾರ ಸುಖಮಯ ಸಾಗರ! ೀಗಿರೊ ಪರಟ್ರೋಲು ರೇಟಲ್ಲಿ ಮನೆಯಲ್ಲಿರೋ ಎರಡು ಗಾಡಿ ೊಂದು ಕಾರು ಮೆಂಟೇನ್ ಮಾಡಲೆ ಹದವೇನೋ!
ReplyDelete